Headlines

ರಿಪ್ಪನ್‌ಪೇಟೆ : ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿದ ಮರಗಳು – ಲಕ್ಷಾಂತರ ರೂ ನಷ್ಟ | ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ |Rain with storm

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ವಿಷಯ ತಿಳಿಯುತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು.

ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಗುಡುಗು, ಸಿಡಿಲಬ್ಬರದ ಮಳೆ ಸುರಿದಿದ್ದು ಈ ವೇಳೆ ಬೀಸಿದ ಭಾರಿ ಪ್ರಮಾಣದ ಬಿರುಗಾಳಿಗೆ ಗ್ರಾಮದ ಅನೇಕ ಮನೆ, ಕೊಟ್ಟಿಗೆಯ ಮೇಲ್ಚಾವಣಿಯ ಹೆಂಚುಗಳು, ಸಿಮೆಂಟ್ ಶೀಟ್ ಗಳು ಹಾಗೂ ನೂರಾರು ಅಡಿಕೆ, ಬಾಳೆ ಮರಗಳು ಧರಾಶಾಹಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಇನ್ನೂ ಅಕೇಶಿಯ ಸೇರಿದಂತೆ ಇನ್ನಿತರ ಮರಗಳು ಬಿದ್ದ ಪರಿಣಾಮ 27 ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

Leave a Reply

Your email address will not be published. Required fields are marked *