ಪ್ರಕಾಶ್ ಬಸ್ ಮಾಲೀಕರ ಶೋಧ ಕಾರ್ಯಾಚರಣೆ : ಕಾಫ಼ಿ ಡೇ ಸಿದ್ದಾರ್ಥ ಪ್ರಕರಣ ಮರುಕಳಿಸುವ ಆತಂಕದಲ್ಲಿ ಮಲೆನಾಡಿಗರು..!!!!!
ಶುಕ್ರವಾರ ಸಂಜೆ ಸಾಗರದಿಂದನಾಪತ್ತೆಯಾಗಿದ್ದ ಸಾಗರದ ಪ್ರಖ್ಯಾತ ಟ್ರಾವೆಲ್ಸ್ ಕಂಪನಿ ಮಾಲೀಕರಾದ ಪ್ರಕಾಶ್ ರವರ ಕಾರು, ಮೊಬೈಲ್ ಮತ್ತು ಕನ್ನಡಕ ಹೊಸನಗರ ಸಮೀಪದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿರುವ ಹಿನ್ನಲೆಯಲ್ಲಿ ಪ್ರಕಾಶ್ ರವರ ಪತ್ತೆಗಾಗಿ ಅಗ್ನಿಶಾಮಕ ದಳ ತನ್ನ ಶೋಧಕಾರ್ಯವನ್ನು ಎರಡನೇ ದಿನಕ್ಕೆ ಮುಂದುವರೆಸಿದೆ. ಸೊರಬದಿಂದ ಒಬಿಎಂ ಬೋಟ್ ನ್ನು ತರಿಸಲಾಗಿದ್ದು ನಾಲ್ವರು ಬೋಟ್ ನಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯ ಮೀನುಗಾರರು ತೆಪ್ಪ ತಂದು ಅದರಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿಯೇ ಅತೀ ಉದ್ದದ ಸೇತುವೆಯಾದ ಪಟಗುಪ್ಪ ಸೇತುವೆ ಇತ್ತೀಚೆಗಷ್ಟೇ…