ವಿಧಾನಸಭೆಯ ಜೆಡಿಎಸ್ ಪಕ್ಷದಿಂದ ನಾಯಕರಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪ ನಾಯಕಿಯನ್ನಾಗಿ ಶಾಸಕಿ ಶಾರದಾ ಪೂರ್ಯಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರನ್ನು ಪಕ್ಷದ ವರಿಷ್ಠರು ವಿಧಾನಸಭೆಯ ನಾಯಕರನ್ನಾಗಿ ನೇಮಿಸಿದ್ದರೇ, ಉಪ ನಾಯಕಿಯನ್ನಾಗಿ ಶಿವಮೊಗ್ಗ ಗ್ರಾಮಾಂತರದಿಂದ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕಿಯಾಗಿರುವಂತ ಶಾರದ ಪೂರ್ಯಾ ನಾಯಕ್ ಅವರನ್ನು ನೇಮಕ ಮಾಡಲಾಗಿದೆ.
ಜೆಡಿಎಸ್ ಪಕ್ಷದ ಏಕೈಕ ಮಹಿಳಾ ಶಾಸಕಿಯಾಗಿರುವಂತ ಶಾರಾ ಪೂರ್ಯಾ ನಾಯಕ್ ಅವರನ್ನು ವಿಧಾನಸಭೆಯ ಉಪ ನಾಯಕಿಯನ್ನಾಗಿ ವರಿಷ್ಠರು ನೇಮಕ ಮಾಡಿ ಆದೇಶಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಶಾಸಕಿಯಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಂತ ಶಾರದ ಪೂರ್ಯಾನಾಯಕ್ ಅವರಿಗೆ ಈಗ ಅದೃಷ್ಠ ಖುಲಾಯಿಸಿದೆ. ಜೆಡಿಎಸ್ ಪಕ್ಷದಿಂದ ವಿಧಾನಸಭೆಯ ನಾಯಕರಾಗಿ ಕುಮಾರಸ್ವಾಮಿ, ಉಪ ನಾಯಕರಾಗಿ ಶಾರದಾ ಪೂರ್ಯಾನಾಯಕ್ ನೇಮಕ ಮಾಡಲಾಗಿದೆ.
ಇನ್ನೂ ಶಾಸಕಿ ಶಾರದಾ ಪೂರ್ಯಾ ನಾಯಕ್ ಅವರನ್ನು ವಿಧಾನಸಭೆಯ ಉಪ ನಾಯಕಿಯನ್ನಾಗಿ ನೇಮಕ ಮಾಡಿದ್ದು, ದಲಿತ ಮಹಿಳಾ ಶಾಸಕಿಗೆ ಜೆಡಿಎಸ್ ಪಕ್ಷ ಕೊಟ್ಟ ಸದುದ್ದೇಶದ ಆದೇಶವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಬಿಜೆಪಿ ಪಕ್ಷದಿಂದ ವಿಪಕ್ಷ ನಾಯಕನ ಸೇರಿದಂತೆ ವಿಧಾನಸಭೆ, ಪರಿಷತ್ ನಾಯಕನ ಆಯ್ಕೆ ಕೂಡ ಮಾಡಿಲ್ಲ. ಈ ಸಂಬಂಧ ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗಧಿಯಾಗಿದೆ. ಈ ಸಭೆಯಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮುಂಚೆಯೇ ಜೆಡಿಎಸ್ ಪಕ್ಷದಿಂದ ವಿಧಾನಸಭೆಯ ನಾಯಕರನ್ನಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಉಪ ನಾಯಕಿಯಾಗಿ ಶಾರದ ಪೂರ್ಯಾ ನಾಯ್ಕ್ ಆಯ್ಕೆ ಮಾಡಲಾಗಿದೆ.