Headlines

ಮಂಜುನಾಥ ಗೌಡರೇ ಮೋಸಗಾರಿಕೆ ಇಲ್ಲಿಗೆ ನಿಲ್ಲಿಸಿ : ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ,ಸೆ.24- ಆರ್.ಎಂ.ಮಂಜುನಾಥ್ ಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮರುದಿನದಿಂದಲೇ ಗುಂಪುಗಾರಿಕೆ ಪ್ರಾರಂಭ ಮಾಡಿ ಹತ್ತಾರು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇವರನ್ನು ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾಗಬಹುದು ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್.ಎಂ.ಮಂಜುನಾಥ್ ಗೌಡರು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಫೋಟೋಗಳನ್ನು ಕರಪತ್ರದಲ್ಲಿ ಪ್ರಕಟಿಸಿ ಖಾಸಗಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್…

Read More

ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ರಕ್ತದಾನ ಶಿಬಿರ

ತೀರ್ಥಹಳ್ಳಿ: ಭಾರತದ ಪ್ರಧಾನಮಂತ್ರಿ  ನರೇಂದ್ರ ಮೋದಿಯವರ 71 ನೇ ಜನ್ಮದಿನಾಚರಣೆ ಅಂಗವಾಗಿ ದೇಶಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ನಡೆಯುತ್ತಿದೆ. ಇದರ ಪ್ರಯುಕ್ತ ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ಮಂಗಳವಾರ ರಾಮ ಮಂದಿರದಲ್ಲಿ ರಕ್ತದಾನ  ಕಾರ್ಯಕ್ರಮ ನಡೆಸಿದರು.  ಈ ಶಿಬಿರದಲ್ಲಿ  ಬರೋಬ್ಬರಿ 157 ಯೂನಿಟ್ ರಕ್ತದಾನವಾಗಿದ್ದು 78 ಜನರು  ಮೊದಲ ಬಾರಿ ರಕ್ತದಾನ ಮಾಡಿದ್ದಾರೆ.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಹರಿಕೃಷ್ಣ, ಉಪಾಧ್ಯಕ್ಷರಾದ ಗಣೇಶ್ ಬಿಳಕಿ ,ಸುಹಾಸ್ ಶಾಸ್ತ್ರಿ, ರಕ್ಷಿತ್ ಮೇಗರವಳ್ಳಿ, ಕಾರ್ಯದರ್ಶಿಗಳಾದ ಮೇಘರಾಜ್ ಹೊಳಲೂರು,…

Read More

ಆಗುಂಬೆ ಘಾಟಿಯಲ್ಲಿ ಹೊತ್ತಿ ಉರಿದ ಕಾರು !

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಘಾಟಿ ಪ್ರಾರಂಭದ  ಸೂರ್ಯಾಸ್ತಮ ವ್ಯೂ ಹತ್ತಿರ ಸಂಜೆ 5-15ರ  ಸುಮಾರಿಗೆ  ಡಸ್ಟರ್ ಕಾರ್ ನಲ್ಲಿ  ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿದ್ದವರು ಸದ್ಯ ಪಾರಾಗಿದ್ದಾರೆ. ಕಾರ್ಕಳದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಘಟನೆ ಸಂಭವಿಸಿದೆ. ಶಿವಮೊಗ್ಗದ ಅರವಿಂದ್ ಎಂಬುವವರು ಕಾರ್ಕಳದಲ್ಲಿ ಈ ಕಾರನ್ನು ಖರೀದಿಸಿದ್ದರು. ಇವತ್ತು ಕಾರನ್ನು ಖರೀದಿಸಿ ಶಿವಮೊಗ್ಗಕ್ಕೆ ತರುತ್ತಿದ್ದರು.ಕಾರಿನಲ್ಲಿ ಅರವಿಂದ್ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮೂವರು…

Read More

ಕರ್ನಾಟಕದ ಗೃಹಮಂತ್ರಿಯವರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ!! ಸರಳತೆ ಮೆರೆದ ಆರಗ ಜ್ಞಾನೇಂದ್ರ..

ತೀರ್ಥಹಳ್ಳಿ: ಹಾಲಿ ಗೃಹಮಂತ್ರಿ ಹಾಗೂ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರವರ ಹನ್ನೊಂದು ತಿಂಗಳಿನ ಮೊಮ್ಮಗ ಆರ್ಯವರ್ಥ ನಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಸರ್ಕಾರಿ ತಾಲೂಕು ಆಸ್ಪತ್ರೆಯಾದ ಜಯಚಾಮರಾಜೇಂದ್ರ ಆಸ್ಪತ್ರೆಗೆ ಭಾನುವಾರ ಬೆಳಿಗ್ಗೆ ದಾಖಲಿಸಲಾಗಿತ್ತು.  ತವರಿನ ಪ್ರವಾಸದಲ್ಲಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದರು.. ಮಗುವಿನೊಂದಿಗೆ ಕೆಲಕ್ಷಣ ಸಂತಸದಿಂದ ಕಳೆದರು ನಂತರ ಮಾದ್ಯಮದೊಂದಿಗೆ  ಮಾತನಾಡಿದ ಅವರು ತೀರ್ಥಹಳ್ಳಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಉತ್ತಮ ರೀತಿಯಲ್ಲಿ ಕೊಡುತಿದ್ದಾರೆ.ಕೋವಿಡ್ ಸಂಧರ್ಭದಲ್ಲಿ ಉತ್ತಮವಾಗಿ…

Read More

ಮಂಡಗದ್ದೆ : ಅನಾಥ ಶವವಾಗಿ ಸಿಕ್ಕ ಎರಡು ದಿನದ ನವಜಾತ ಶಿಶು

ತೀರ್ಥಹಳ್ಳಿ : ತಾಲೂಕಿನ ಮಂಡಗದ್ದೆಯಲ್ಲಿ ಹುಟ್ಟಿದ ಎರಡು ದಿನದ ಮಗು ಕರಳು ಬಳ್ಳಿ ಸಹ ಹಾಗೆ ಇರುವ ಗಂಡು ಮಗುವೊಂದು ಮಂಡಗದ್ದೆಯ ಕೆರೆಯ ಬಳಿ ಯಾರೋ ಇಟ್ಟು ಅಥವಾ ಬಿಸಾಕಿ ಹೋಗಿರುವ ದಾರುಣ ಘಟನೆ ನೆಡೆದಿದೆ. ಮಂಡಗದ್ದೆಯ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಬೆಸ್ತರಿಗೆ ಈ ಶಿಶು ಸಿಕ್ಕಿದ್ದು ತಕ್ಷಣವೇ ಅಲ್ಲಿನ ಗ್ರಾಮಪಂಚಾಯಿತಿ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಮಗುವಿನ ಜನನವನ್ನು ಮುಚ್ಚಿಡುವ ಸಲುವಾಗಿ ಯಾರೋ ಈ ರೀತಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಕೃತ್ಯಕ್ಕೆ ಕಾರಣರಾದ ಪಾಪಿ…

Read More

ತೀರ್ಥಹಳ್ಳಿ: ನವವಿವಾಹಿತೆಯನ್ನು ಬಲಿ ತೆಗೆದುಕೊಂಡ ನಾಯಿ ಚೈನ್…! ವಾಕಿಂಗ್ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವು

ತೀರ್ಥಹಳ್ಳಿ: ಸಾಕುನಾಯಿಯನ್ನು ಕರೆದುಕೊಂಡು ವಾಯುವಿಹಾರಕ್ಕೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ನವ ವಿವಾಹಿತೆಯೊಬ್ಬಳು ಕೆರೆಗೆ  ಬಿದ್ದು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕು ಕೈಮರದಲ್ಲಿ ನಡೆದಿದೆ. ನಿಶ್ಮಿತಾ(26) ಮೃತ ವಿವಾಹಿತೆ.ತೀರ್ಥಹಳ್ಳಿಯ ಕೈಮರದ ನಾಗಪ್ಪ ಗೌಡ ಅವರ ಪುತ್ರ ಮಂಜುನಾಥ್ ಅವರ ಪತ್ನಿ ನಿಶ್ಮಿತಾ ಮೂಲತಃ ಹೊಸನಗರ ತಾಲೂಕು ಹುಲಿಕಲ್ ಗ್ರಾಮದವರು. ಕಳೆದ 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಶನಿವಾರ ಬೆಳಿಗ್ಗೆ ಸಾಕುನಾಯಿಯನ್ನು ಕರೆದುಕೊಂಡು ವಾಯು ವಿಹಾರಕ್ಕೆ ಹೋಗಿದ್ದಾಳೆ. ಈ ವೇಳೆ ಕರೆದಂಡೆ ಮೇಲೆ ಹೋಗುವಾಗ ನಾಯಿ ಚೈನ್ ಎಳೆದು ಓಡಿದೆ….

Read More

ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ನಿಧನ :

ಕೋಣಂದೂರು : ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ರವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಇಂದು ಕಾರ್ಯನಿಮಿತ್ತ ಕಾರ್ ನಲ್ಲಿ ಶಿವಮೊಗ್ಗಕ್ಕೆ ತೆರಳಿ ವಾಪಾಸ್ ಗರ್ತಿಕೆರೆಯ ನಿವಾಸಕ್ಕೆ ಹಿಂದಿರುಗುವಾಗ ಆಯನೂರ್ ಬಳಿ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಕಾರಿನ ಚಾಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಅಷ್ಟರಲ್ಲೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.ಮೃತದೇಹವನ್ನು ಆಂಬುಲೆನ್ಸ್ ಮೂಲಕ ಗರ್ತಿಕೆರೆಯ ಸ್ವ ಗೃಹಕ್ಕೆ ತರಲಾಗುತ್ತಿದೆ. ಕೋಣಂದೂರು ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿ ಮೂಡಿಸಿದ್ದ ಗಣೇಶ್ ಮೂರ್ತಿಯವರ ಅಗಲಿಕೆ ಅವರ ಅಸಂಖ್ಯಾತ…

Read More

ಆಗುಂಬೆ ಘಾಟಿ ತಿರುವಿನಲ್ಲಿ ಬೃಹತ್ ಗಾತ್ರದ ಮರ ಬಿದ್ದು ಪ್ರಯಾಣಿಕರಿಗೆ ತೊಂದರೆ !

ತೀರ್ಥಹಳ್ಳಿ ::  ತಾಲೂಕಿನ ಆಗುಂಬೆ ಘಾಟಿ ಕೆಳಭಾಗದಿಂದ  ಮೂರನೇ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದು ಬೆಳಗ್ಗಿನಿಂದ ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಘಾಟಿಯಲ್ಲಿಯೇ ಜಾಮ್  ಆಗಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಅರಣ್ಯ ಇಲಾಖೆ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದವರು ಈ ಬಗ್ಗೆ ಗಮನಹರಿಸಬೇಕು ಎಂಬುದಾಗಿ ವಾಹನ ಸವಾರರು ಮನವಿ ಮಾಡಿಕೊಂಡಿದ್ದು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಈ ರೀತಿ ರಸ್ತೆ ಬದಿಯಲ್ಲಿರುವ ಬೀಳುವ  ಮರಗಳನ್ನು ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿಸಿದರೆ ಸೂಕ್ತ…

Read More

ಸಾಕು ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ! ಶಿಕ್ಷಕಿಯಿಂದ ಬೆಳಕಿಗೆ ಬಂತು ಪ್ರಕರಣ

ತೀರ್ಥಹಳ್ಳಿ: ಸಾಕು ತಂದೆಯೇ ಅಪ್ರಾಪ್ತ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ತಾಲೂಕಿನ ಗಬಡಿ ಗ್ರಾಮದಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಸಾಕು ತಂದೆ ಮಂಜುನಾಥ್ (36) ಹಾಗು ಮಂಜುನಾಥನ ಸಂಬಂಧಿ ಎದುರುಮನೆ ಯುವಕ ರಾಮು(43) ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ವಿವರ: ಮೊದಲ ಪತ್ನಿ ತೊರೆದಿದ್ದ ಮಂಜುನಾಥ್ ಕೂಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾದ ವಿಧವೆಯನ್ನು ಮದುವೆಯಾಗಿದ್ದ.ಎರಡನೇ ಪತ್ನಿಗೆ ಹೆಣ್ಣು ಮಗುವಿತ್ತು. ಆ ಅಪ್ರಾಪ್ತ…

Read More

ತೀರ್ಥಹಳ್ಳಿ :ಸರ್ಕಾರದ ಮಾರ್ಗಸೂಚಿ ಪಾಲಿಸಿ ಈ ಬಾರಿಯ ಗಣೇಶೋತ್ಸವವನ್ನು ಆಚರಿಸಿ : ತಹಸೀಲ್ದಾರ್ ಡಾ. ಶ್ರೀಪಾದ್

ತೀರ್ಥಹಳ್ಳಿ : ಕೊರೊನಾ ಸೋಂಕಿನ ಸಂದರ್ಭದಲ್ಲಿ  ಗಣೇಶೋತ್ಸವ ಆಚರಣೆ ಅತ್ಯಂತ ಸರಳವಾಗಿ ಶ್ರದ್ಧಾ ಭಕ್ತಿ ಭಾವದಿಂದ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಸರ್ಕಾರದ ಎಲ್ಲಾ ಮಾನದಂಡ ಮತ್ತು.ಮಾರ್ಗಸೂಚಿ ಪಾಲಿಸಿ ಈ ಬಾರಿಯ ಗಣೇಶೋತ್ಸವವನ್ನು ಆಚರಿಸಿ ಎಂದು ತೀರ್ಥಹಳ್ಳಿ  ತಹಶೀಲ್ದಾರ್‌ ಡಾ. ಶ್ರೀಪಾದರವರು ಗಣೇಶೋತ್ಸವ ಆಚರಣೆ ಮಾಡುವ ಸಮಿತಿಯವರಿಗೆ ಸೂಚನೆ ನೀಡಿದರು. ಇಂದು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪೋಲೀಸ್ ಇಲಾಖೆ ವತಿಯಿಂದ ಕರೆಯಲಾಗಿದ್ದ ಗಣೇಶೋತ್ಸವ ಆಚರಣೆಯ ಕುರಿತಾದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕೊರೊನ…

Read More