w
Headlines
Home » ಆಗುಂಬೆ ಘಾಟಿಯಲ್ಲಿ ಹೊತ್ತಿ ಉರಿದ ಕಾರು !

ಆಗುಂಬೆ ಘಾಟಿಯಲ್ಲಿ ಹೊತ್ತಿ ಉರಿದ ಕಾರು !

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಘಾಟಿ ಪ್ರಾರಂಭದ  ಸೂರ್ಯಾಸ್ತಮ ವ್ಯೂ ಹತ್ತಿರ ಸಂಜೆ 5-15ರ  ಸುಮಾರಿಗೆ  ಡಸ್ಟರ್ ಕಾರ್ ನಲ್ಲಿ  ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿದ್ದವರು ಸದ್ಯ ಪಾರಾಗಿದ್ದಾರೆ.

ಕಾರ್ಕಳದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಘಟನೆ ಸಂಭವಿಸಿದೆ.

ಶಿವಮೊಗ್ಗದ ಅರವಿಂದ್ ಎಂಬುವವರು ಕಾರ್ಕಳದಲ್ಲಿ ಈ ಕಾರನ್ನು ಖರೀದಿಸಿದ್ದರು. ಇವತ್ತು ಕಾರನ್ನು ಖರೀದಿಸಿ ಶಿವಮೊಗ್ಗಕ್ಕೆ ತರುತ್ತಿದ್ದರು.ಕಾರಿನಲ್ಲಿ ಅರವಿಂದ್ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮೂವರು ಕಾರಿನಿಂದ ಇಳಿದಿದ್ದಾರೆ.
ಇನ್ನು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಕೆಲವು ಹೊತ್ತು ವಾಹನ ಸಂಚಾರ ಬಂದ್ ಆಗಿತ್ತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಕಿ ನಂದಿಸಲಾಗಿದೆ.

ಇಂದು ಕಾರ್ಕಳದಿಂದ ಸೆಕೆಂಡ್ ಹ್ಯಾಂಡ್ ರೆನಾಲ್ಟ್‌ ಕಂಪನಿಯ ಡೆಸ್ಟರ್ ಕಾರನ್ನು ಖರೀದಿಸಿ ಶಿವಮೊಗ್ಗ ಮಾರ್ಗವಾಗಿ ಬರುತಿದ್ದರು ಎಂದು ತಿಳಿದುಬಂದಿದೆ. ಇಂತಹ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.