w
Headlines
Home » ಕರ್ನಾಟಕದ ಗೃಹಮಂತ್ರಿಯವರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ!! ಸರಳತೆ ಮೆರೆದ ಆರಗ ಜ್ಞಾನೇಂದ್ರ..

ಕರ್ನಾಟಕದ ಗೃಹಮಂತ್ರಿಯವರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ!! ಸರಳತೆ ಮೆರೆದ ಆರಗ ಜ್ಞಾನೇಂದ್ರ..

ತೀರ್ಥಹಳ್ಳಿ: ಹಾಲಿ ಗೃಹಮಂತ್ರಿ ಹಾಗೂ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರವರ ಹನ್ನೊಂದು ತಿಂಗಳಿನ ಮೊಮ್ಮಗ ಆರ್ಯವರ್ಥ ನಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಸರ್ಕಾರಿ ತಾಲೂಕು ಆಸ್ಪತ್ರೆಯಾದ ಜಯಚಾಮರಾಜೇಂದ್ರ ಆಸ್ಪತ್ರೆಗೆ ಭಾನುವಾರ ಬೆಳಿಗ್ಗೆ ದಾಖಲಿಸಲಾಗಿತ್ತು. 

ತವರಿನ ಪ್ರವಾಸದಲ್ಲಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದರು..

ಮಗುವಿನೊಂದಿಗೆ ಕೆಲಕ್ಷಣ ಸಂತಸದಿಂದ ಕಳೆದರು ನಂತರ ಮಾದ್ಯಮದೊಂದಿಗೆ  ಮಾತನಾಡಿದ ಅವರು ತೀರ್ಥಹಳ್ಳಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಉತ್ತಮ ರೀತಿಯಲ್ಲಿ ಕೊಡುತಿದ್ದಾರೆ.ಕೋವಿಡ್ ಸಂಧರ್ಭದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದೆ ಎಂದರು.
ನಂತರ ಆರಗರ ಒಡನಾಡಿ, ಉದ್ಯಮಿ ಹಾಗೂ ಸಂಘದ ಕಾರ್ಯಕರ್ತ ಎಸಿಸಿ ಕೃಷ್ಣಮೂರ್ತಿ ಮಾತನಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಈ ಹಿಂದೆ ಜ್ಞಾನೇಂದ್ರರು ತಮ್ಮ ಮಗ ಅಭಿನಂದನ್ ರ ಮದುವೆಯನ್ನು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸರಳವಾಗಿ ನೆರವೇರಿಸಿ ಮಾದರಿಯಾಗಿದ್ದರು.

ಕೋಟಿ ಕೋಟಿ ಕೊಳ್ಳೆ ಹೊಡೆದು ಐಶಾರಾಮಿ ಜೀವನ ನಡೆಸುವ ಹಾಗೂ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೆ ವಿದೇಶಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರಾಜಕಾರಣಿಗಳ ಮಧ್ಯೆ ಗೃಹಮಂತ್ರಿಗಳ ಸರಳತೆ ಮೆಚ್ಚುವಂತದ್ದು…



✍🏻 ಪ್ರಶಾಂತ್ ಮೇಗರವಳ್ಳಿ
📱 7019465693

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.