ಶಿವಮೊಗ್ಗ: ನಗರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯನ್ನು ಸರಳವಾಗಿ ನೆರವೇರಿಸಲಾಯಿತು. ಸರ್ಕಾರದ ಸೂಚನೆ ಹಿನ್ನೆಲೆ ಈ ಭಾರಿ ಮೆರವಣಿಗೆ ನಡೆಸದೆ ವಿಸರ್ಜನೆ ಮಾಡಲಾಯಿತು.
ಸುಮಾರು 12-45 ಕ್ಕೆ ದೇವಸ್ಥಾನದ ಬಳಿಯಿರುವ ತುಂಗ ನದಿಯ ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡಲಾಗಿದೆ. ಸುಮಾರು 300 ಕ್ಕೂ ಹೆಚ್ಚು ಜನ ಹಿಂದೂ ಮಹಾಸಭಾ ಸಂಘಟನೆಯ ಕಾರ್ಯಕರ್ತರು ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಇದರಿಂದ 77 ನೇ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜಿಸಲಾಗಿದೆ. 77 ವರ್ಷದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಒಟ್ಟು 9 ವರ್ಷ ಮೆರವಣಿಗೆ ರಹಿತವಾಗಿ ವಿಸರ್ಜಿಸಲಾಗಿದೆ.
ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅನಂತ ಚತುರ್ದಶಿ ಹಿನ್ನಲೆ ಹಿಂದೂ ಮಹಾಸಭಾ ಗಣಪತಿಯನ್ನು ಇವತ್ತು ವಿಸರ್ಜಿಸಲಾಯಿತು. ಇದಕ್ಕೂ ಮೊದಲು ದೇಗುಲದ ಆವರಣದಲ್ಲಿ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
1997 ರಲ್ಲಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಮೆರವಣಿಗೆಯನ್ನ 2004 ರ ವರೆಗೆ ವಿಸರ್ಜನಾ ಮೆರವಣಿಗೆಯನ್ನ ಸ್ಥಗಿತಗೊಳಿಸಲಾಗಿತ್ತು. ಅಹಿತಕರ ಘಟನೆಗಳು ಮರುಕುಳಿಸದಂತೆ ಮಹಾಸಭಾ ಈ ನಿರ್ಣಯ ಕೈಗೊಂಡಿತ್ತು. 2005 ರಿಂದ 2019ರವರೆಗೆ ಮೆರವಣಿಗೆ ನಡೆಸಲಾಗಿತ್ತು.
ಈಗ ಮತ್ತೆ ಕೊರೋನ ಹಿನ್ನಲೆಯಲ್ಲಿ ಸರ್ಕಾರದ ಅಧಿಸೂಚನೆಯನ್ನ ಪಾಲಿಸುವ ಸಲುವಾಗಿ ಎರಡು ವರ್ಷ ಮೆರವಣಿಗೆ ಇಲ್ಲದಂತೆ ವಿಸರ್ಜಿಸಲಾಗಿದೆ. ಕಳೆದ ಬಾರಿ ಅನಂತ ಚತುರ್ಥಿಯವರೆಗೂ ಕಾಯದೆ ಒಂದೇ ದಿನಕ್ಕೆ ಗಣಪತಿಯನ್ನು ವಿಸರ್ಜಿಸಲಾಗಿತ್ತು.