w
Headlines
Home » ಶಿವಮೊಗ್ಗ : ಟಿಪ್ಪು ನಗರದಲ್ಲಿ ಮಾರಾಮಾರಿ ಒಬ್ಬನ ಕೊಲೆ

ಶಿವಮೊಗ್ಗ : ಟಿಪ್ಪು ನಗರದಲ್ಲಿ ಮಾರಾಮಾರಿ ಒಬ್ಬನ ಕೊಲೆ

ಶಿವಮೊಗ್ಗ: ನಗರದ ಟಿಪ್ಪುನಗರ ವಾಸಿಯಾದ ಟ್ವಿಸ್ಟ್ ಇಮ್ರಾನ್ ಎಂಬ ಯುವಕನ ಬರ್ಬರ ಹತ್ಯೆಯಾಗಿದೆ.  ರಾತ್ರಿ 9-15 ರ ಸುಮಾರಿನಲ್ಲಿ  ಕೆ.ಕೆ.ಶೆಡ್ ನ ಬಳಿ ಈ ಘಟನೆ ನಡೆದಿದೆ. 

ಕೊಲೆಯಾದ ಟ್ವಿಸ್ಟ್  ಇಮ್ರಾನ್ ನ ಶವ ಚರಂಡಿಯಲ್ಲಿ ದೊರಕಿದ್ದು ದೇಹದ ಎಡಭಾಗದ ಅಲ್ಲಲ್ಲಿ  ಚೂರಿಯಿಂದ ಇರಿದ ಗಾಯಗಳೊಂದಿಗೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಆರೋಪಿಗಳ ಜಾಡು ಹಿಡಿದು ಬಲೆ ಬೀಸಿದ್ದಾರೆ. ಶವವನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 

ಗಾಂಜಾ ಘಾಟು ಗಾಂಜಾ ಪೆಡ್ಲರ್ ನನ್ನ ಬಲಿ ತೆಗೆದುಕೊಂಡಿದೆ. ಗಾಂಜಾ ಪೆಡ್ಲರ್ ಒಬ್ಬನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕೊಲೆಗೆ ಗಾಂಜಾ ಗಲಾಟೆಯೇ ಕಾರಣವೆಂದು ಹೇಳಲಾಗುತ್ತಿದೆ.

ಟಿಪ್ಪುನಗರದ 7 ನೇ ತಿರುವು ಮತ್ತು 4ನೇ ತಿರುವು ಸೇರುವ ಕೆಕೆ ಶೆಡ್ ನಲ್ಲಿ ಇರ್ಫಾನ್ ಯಾನೆ ಟ್ವಿಸ್ಟ್ ನನ್ನ ಲತೀಫ್ ಗ್ಯಾಂಗ್ ಚಾಕುವಿನಿಂದ ತಿರುವಿ ಕೊಲೆ ಮಾಡಿ ಪರಾರಿಯಾಗಿರುವುದು ತಿಳಿದುಬಂದಿದೆ.
ಗಾಂಜಾ ಅಮಲು ನಿಧಾನವಾಗಿ ಶಿವಮೊಗ್ಗದಲ್ಲಿ ವ್ಯಾಪಿಸಿಕೊಂಡಿದೆ. ಈ ಗಾಂಜಾವನ್ನ ಕೆಳಮಟ್ಟದಲ್ಲಿ ಮಾರುವ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ. ಇರ್ಫಾನ್ ಗಾಂಜಾ ಪೆಡ್ಲರ್ ಎಂದು ಹೇಳಲಾಗುತ್ತಿದೆ.

ಇರ್ಫನ್ ಮತ್ತು ಲತೀಫ್ ಗ್ಯಾಂಗ್ ಹುಡುಗರ  ನಡುವೆ ಗಲಾಟೆ ಆಗಿದೆ ಎಂದು ಹೇಳಲಾದರೂ ಹುಡುಗರನ್ನ ಮಾತಾಡಿಸಿಕೊಂಡು ಬರಲು ಕೆಕೆ ಶೆಡ್ ಗೆ ಬಂದ ವೇಳೆ ಲತೀಫ್ ಗ್ಯಾಂಗ್ ಅಲ್ಲೇ ಇತ್ತು ಎನ್ನಾಗಿದೆ.
ನಾನು ಸುಲ್ತಾನ್ ನೀನು ಸುಲ್ತಾನ್ ಎಂಬ ವಿಷಯದಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ. ಈ ಕಿರಿಕ್ ನ ಹಿನ್ನಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಆದರೂ ಹೆಚ್ಚಿನ ಮಾಹಿತಿ ಇನ್ನೂ ಕಲೆ ಹಾಕಬೇಕಿದೆ.

ಇರ್ಫಾನ್ ಯಾನೆ ಟ್ವಿಸ್ಟ್ ಈತ ದೊಡ್ಡಪೇಟೆ ಪೊಲೀಸ್ ಠಾಣೆಯ ಮಿಳಘಟ್ಟದ 2 ನೇ ತಿರುವಿನ ನಿವಾಸಿಯಾಗಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.