ತೀರ್ಥಹಳ್ಳಿ :: ತಾಲೂಕಿನ ಆಗುಂಬೆ ಘಾಟಿ ಕೆಳಭಾಗದಿಂದ ಮೂರನೇ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದು ಬೆಳಗ್ಗಿನಿಂದ ಸರಿ ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಘಾಟಿಯಲ್ಲಿಯೇ ಜಾಮ್ ಆಗಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಕ್ಷಣ ಅರಣ್ಯ ಇಲಾಖೆ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದವರು ಈ ಬಗ್ಗೆ ಗಮನಹರಿಸಬೇಕು ಎಂಬುದಾಗಿ ವಾಹನ ಸವಾರರು ಮನವಿ ಮಾಡಿಕೊಂಡಿದ್ದು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಈ ರೀತಿ ರಸ್ತೆ ಬದಿಯಲ್ಲಿರುವ ಬೀಳುವ ಮರಗಳನ್ನು ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿಸಿದರೆ ಸೂಕ್ತ ಇಲ್ಲದಿದ್ದರೆ ಆಗುಂಬೆ ಘಾಟಿ ಬಳಿ ಪ್ರತಿಬಾರಿಯೂ ವಾಹನ ಸವಾರರಿಗೆ ಈ ರೀತಿಯ ತೊಂದರೆ ಆಗುತ್ತಲೇ ಇರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.