Headlines

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ ರಿಪ್ಪನ್‌ಪೇಟೆ : ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅಂದಿನ ಘಟನೆಯಲ್ಲಿ ಹಲವು ಪೋಲಿಸ ಸಿಬ್ಬಂದಿಗಳ ಪ್ರಾಣಕ್ಕೆ ಕುತ್ತು ಬಂದಿತ್ತು, ಘಟನೆಯಲ್ಲಿ ಭಾಗವಹಿಸಿದ್ದ 160…

Read More

ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಆಗ್ರಹಿಸಿ ಮನವಿ ಸಲ್ಲಿಸಿದ ತೀರ್ಥಹಳ್ಳಿ ಭಜರಂಗದಳದ ಕಾರ್ಯಕರ್ತರು

ತೀರ್ಥಹಳ್ಳಿ : ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಹಲವಾರು ಕಡೆ ಜನರ ಬಡತನ, ಅನಾರೋಗ್ಯವನ್ನೇ ದುರುಪಯೋಗಪಡಿಸಿ, ಜನರ ಭಾವನೆಯೊಂದಿಗೆ ಆಟವಾಡಿ, ಆಸೆ ಆಮಿಷಗಳನೊಡ್ಡಿ `ಮತಾಂತರದಿಂದ ನಿಮ್ಮ ಮೋಸದ ಪ್ರಚಾರ,ಮಾತಿನ ಮೋಡಿಗಳಿಂದ ಭ್ರಮೆಗೊಳಪಟ್ಟು ಸಮಸ್ಯೆಗಳು ನೀಗುತ್ತವೆ ಎಂದು ಮತಾಂತರಗೊಳಿಸಿ “ಸ್ವಇಚ್ಚೆಯ ಮತಾಂತರ” ಎಂದು ಬಿಂಬಿಸಲಾಗುತ್ತಿದೆ.  ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಕುಟುಂಬದ ಇತರ ವ್ಯಕ್ತಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ಬಂದು ಮನೆಯ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗುತ್ತಿರುವುದು ಕಂಡು ಬರುತ್ತಿದ್ದು ಅವರ ಮಾನಸಿಕ…

Read More

ತೀರ್ಥಹಳ್ಳಿ:ಆಸ್ತಿ ವಿಚಾರಕ್ಕೆ ಗಲಾಟೆ – ರಸ್ತೆ ಮಧ್ಯೆದಲ್ಲೇ ಸೀಮೆಎಣ್ಣೆ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆ

ತೀರ್ಥಹಳ್ಳಿ :  ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡು   ಬೈಕ್ ನಲ್ಲಿ ಸಾಗುವಾಗ ಮಾರ್ಗ ಮಧ್ಯೆಯೇ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಅಕ್ಲಾಪುರದ ನಿವಾಸಿ ರಾಘವೇಂದ್ರ (40)  ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಅಕ್ಲಾಪುರದ ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಬೈಕ್ ನಿಲ್ಲಿಸಿ ರಾಘವೇಂದ್ರ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಆಸ್ತಿ ವಿಚಾರಕ್ಕೆಗಲಾಟೆಯಾಗಿದ್ದು ಇದೆ  ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ತೀರ್ಥಹಳ್ಳಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದೇವರ ಮೊರೆಹೋದ ಶರಾವತಿ ಸಂತ್ರಸ್ಥರು : ಕಲ್ಲುಕೊಪ್ಪ ದಿಂದ ಧರ್ಮಸ್ಥಳದ ವರೆಗೆ ಪಾದಯಾತ್ರೆ !

ತೀರ್ಥಹಳ್ಳಿ : ತಾಲೂಕಿನಾದ್ಯಂತ ಇತ್ತೀಚಿಗೆ ಅತೀ ಹೆಚ್ಚು ಸುದ್ದಿ ಮಾಡಿದ್ದೂ ಎಂದರೆ ಅದು ಶರಾವತಿ ಸಂತ್ರಸ್ತರ ಹೋರಾಟ. ಹೌದು ಈಗಾಗಲೇ ತಾಲೂಕಿನ ಹಣಗೇರೆ ಕಟ್ಟೆ ಸಮೀಪ ಕಲ್ಲುಕೊಪ್ಪದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಮಾಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಶರಾವತಿ ಮುಳುಗಡೆ ಸಂತ್ರಸ್ತರು ಈಗ ದೇವರ ಮೊರೆ ಹೋಗಿದ್ದಾರೆ.   ಕಲ್ಲುಕೊಪ್ಪದಿಂದ ಸುಮಾರು 21 ಜನ  ಧರ್ಮಸ್ಥಳಕ್ಕೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ಸಂಚರಿಸಲಿದ್ದಾರೆ. ಬರಿ ಕಾಲಿನಲ್ಲಿ ಅಂದಾಜು 200 ಕಿ ಮೀ ನೆಡೆದು ಧರ್ಮಸ್ಥಳದ  ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.  ಸಂಕ್ಲಾಪುರ ಮತ್ತು…

Read More

ತೀರ್ಥಹಳ್ಳಿ : ಕಾಲು ಜಾರಿ ನದಿಗೆ ಬಿದ್ದು ಮಹಿಳೆ ಸಾವು !

ತೀರ್ಥಹಳ್ಳಿ :  ನದಿಯನ್ನು ದಾಟುವಾಗ ಆಯತಪ್ಪಿ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಸಾವನ್ನಪಿದ ಘಟನೆ ತಾಲೂಕಿನ ನೆರಟೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿದೆ.  ಮೃತಪಟ್ಟ ಮಹಿಳೆಯನ್ನು ಜಸೋಪ್ರಿನ್ ಮಚಾದೋ (36) ಎಂದು ಗುರುತಿಸಲಾಗಿದೆ. ಮಗನೊಂದಿಗೆ ಅಂಗಡಿಗೆ ಹೋಗಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ವರದಿ : ಪ್ರಶಾಂತ್ ಮೇಗರವಳ್ಳಿ

Read More

ತೀರ್ಥಹಳ್ಳಿ : ಅಕ್ರಮ ಮಧ್ಯ ಮಾರಾಟ ಪ್ರಶ್ನಿಸಿದ್ದ ಗ್ರಾಪಂ ಪಿಡಿಓ ಮೇಲೆ ಹಲ್ಲೆ : ಆರೋಪಿ ವಶಕ್ಕೆ

ತೀರ್ಥಹಳ್ಳಿ: ತಾಲೂಕಿನ ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕೆಳಕೆರೆ ನಾಗೇಶ್ ಎನ್ನುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬೇಡಿ ಎಂದಿದ್ದಕ್ಕೆ ಅಲ್ಲಿನ ಪಿಡಿಓ ಮೇಲೆ ಹಲ್ಲೆ ನೆಡೆಸಿದ್ದ ಕೆಳಕೆರೆ ನಾಗೇಶ್ ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗೇಶ್ ಗೆ ಮಹಿಳಾ ಪಿಡಿಓ ಅದರ ಬಗ್ಗೆ ಪ್ರಶ್ನಿಸಿದ್ದಾರೆ.  ಇದಕ್ಕೆ ನಾಗೇಶ್ ಪಿಡಿಓ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ…

Read More

ತೀರ್ಥಹಳ್ಳಿ : ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಜೀವ ಬೆದರಿಕೆ

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ವ್ಯಕ್ತಿಯನ್ನ ಕಿಡ್ನಾಪ್ ಮಾಡಿ ನಾಲ್ವರು ಆರೋಪಿಗಳು ಆಯುಧದಿಂದ ಥಳಿಸಿರುವ ಘಟನೆ ಪಟ್ಟಣದ ಬಾಳೆಬೈಲು ಸಮೀಪದ ಜಟ್ಟಟ್ ನಗರದಲ್ಲಿ ನಡೆದಿದೆ. ಪಟ್ಟಣದ ಇಂದಿರಾ ನಗರದ ನಿವಾಸಿ ಮುಜೀಬ್ (35) ಎಂಬುವರ ಮೇಲೆ ಹಲ್ಲೆ ನಡೆದಿದ್ದು ಹಲ್ಲೆ ನಡೆಸಿರುವುದು ರಾಮನ್, ರಹೀಮ್, ಶಫಿ ಹಾಗೂ ಸುಹೇಲ್ ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೆ. 23 ರಾತ್ರಿ ಮುಜೀಬ್ ಮೇಲೆ ಹಲ್ಲೆ ನೆಡೆಸಿ ಕಿಡ್ನಾಪ್ ಮಾಡಿದ್ದರು. ಆದರೆ ತಪ್ಪಿಸಿಕೊಂಡು ಬಂದಿದ್ದ ಮುಜೀಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ…

Read More

ಆರಗ ಬಳಿ ಮೃತದೇಹ ಸಮೇತ ಕಾರು ಸುಟ್ಟ ಪ್ರಕರಣ : ಮೃತ ವ್ಯಕ್ತಿಯ ಪತ್ನಿ ಸೇರಿ ಐವರ ಬಂಧನ

ತೀರ್ಥಹಳ್ಳಿ : ತಾಲೂಕಿನ ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರು ಮತ್ತು ಅಸ್ಥಿ ಪಂಜರ ಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೃತನನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ನಿವಾಸಿ ವಿನೋದ್ (45) ಎಂದು ಗುರುತಿಸಲಾಗಿದೆ. ವಿನೋದ್ ಅವರನ್ನು ಮನೆಯಲ್ಲಿಯೇ ಆತನ ಪತ್ನಿ ಮತ್ತು ಸಹಚರರು ಕೊಲೆಗೈದು ಮಿಟ್ಲಗೋಡು ಕಾಡಿನಲ್ಲಿ ಕಾರು ನಿಲ್ಲಿಸಿ ಬೆಂಕಿ ಹಚ್ಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸುಟ್ಟ ಕಾರು,…

Read More

ಆಗುಂಬೆ ಪೊಲೀಸರ ಭರ್ಜರಿ ಭೇಟೆ : ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

ಆಗುಂಬೆ :  ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಲಾಗಿದೆ.  ರಾತ್ರಿ ವೇಳೆ ಗಸ್ತಿನಲ್ಲಿದ್ದ ಎಸ್ ಐ ಶಿವಕುಮಾರ್ ಅವರ ತಂಡ ತಪಾಸಣೆ ವೇಳೆ ಹನ್ನೊಂದು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ ಒಂದು  ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಧಾರವಾಡ ಮಂಗಳೂರು ಮಂಡ್ಯ ಈ ಜಿಲ್ಲೆಗಳಲ್ಲಿ ಒಟ್ಟು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.  ಕಾರ್ಯಾಚರಣೆಯಲ್ಲಿ ಆಗುಂಬೆಯ ಪಿ ಎಸ್ ಐ ಶಿವಕುಮಾರ್ ,  ಸಿಬ್ಬಂದಿಗಳಾದ ದೇವದಾಸ್ ನಾಯಕ್, ವೀರೆಂದ್ರ,…

Read More

ತೀರ್ಥಹಳ್ಳಿ : ಶರಾವತಿ ಚಳುವಳಿ ಪಾದಯಾತ್ರೆಗೆ ಕಲ್ಲುಕೊಪ್ಪದಿಂದ ಚಾಲನೆ :

ತೀರ್ಥಹಳ್ಳಿ : ಶರಾವತಿ ವರಾಹಿ ಚಕ್ರ ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಭೂಮಿ ಮತ್ತು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಇಂದು ಕಲ್ಲುಕೊಪ್ಪದಲ್ಲಿ ಮೂರು ದಿನ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ ಚುನಾವಣೆ ಇರಲಿ ಬಿಡಲಿ ಸಂತ್ರಸ್ತರಿಗೆ ನ್ಯಾಯಕೊಡಿಸಬೇಕು. ಈ ಭಾಗದಲ್ಲಿ ನೆಲೆಸಿರುವ ಸಂತ್ರಸ್ತರ ಪಟ್ಟಿ ಮಾಡಿ ಈ ಕಾಯ್ದೆ ಅಡಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ಗೆ ಪಟ್ಟಿ ನೀಡುವಂತೆ ಕೋರಿದ ಕಾಗೋಡು. ಬಂದವರಿಗೆಲ್ಲಾ ಹಕ್ಕುಪತ್ರ ಕೊಡಿ ಎಂದು ಅರ್ಜಿ ಕೊಡುವುದಲ್ಲವೆಂದು ಗುಡುಗಿದರು….

Read More