WhatsApp Channel Join Now
Telegram Channel Join Now

ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ : ಅರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ : ಹುಬ್ಬಳ್ಳಿಯಲ್ಲಿ 2022ರಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಅಂದಿನ ಘಟನೆಯಲ್ಲಿ ಹಲವು ಪೋಲಿಸ ಸಿಬ್ಬಂದಿಗಳ ಪ್ರಾಣಕ್ಕೆ ಕುತ್ತು ಬಂದಿತ್ತು, ಘಟನೆಯಲ್ಲಿ ಭಾಗವಹಿಸಿದ್ದ 160 ಜನರನ್ನು ಬಂಧಿಸಲಾಗಿತ್ತು ಈಗ ಅವರಿಗೆ ಅಮಾಯಕರ ಪಟ್ಟ ಕಟ್ಟಿ ಪ್ರಕರಣ ಹಿಂಪಡೆದಿರುವ ಸರಕಾರದ ಕ್ರಮ ಕಾನೂನು ಬಾಹಿರವಾಗಿದೆ ಎಂದಿದ್ದಾರೆ.

ಒಂದು ಕೋಮಿನ ಮತಕ್ಕಾಗಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಖಂಡನೀಯ ಇದು ಗಲಭೆಕೋರರಿಗೆ ಪುಷ್ಟಿ ನೀಡಿದಂತಾಗುತ್ತದೆ. ಕೂಡಲೇ ಸರಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು, ಗಲಭೆಕೋರರಿಗೆ ಶಿಕ್ಷೆ ಆಗಬೇಕೆಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಕೋವೀಡ್ ಹಗರಣವನ್ನು ತನಿಖೆ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಕೇವಲ ಜನರ ದಿಕ್ಕು ತಪ್ಪಿಸುವ ಕೆಲಸವಾಗಿದ್ದು ವಾಲ್ಮಿಕೀ ಹಗರಣ ಹಾಗೂ ಮುಡಾ ಹಗರಣದಿಂದಾಗಿರುವ ಸರ್ಕಾರಕ್ಕಾಗಿರುವ ಡ್ಯಾಮೇಜ್ ನ್ನು ಮುಚ್ವಿಕೊಳ್ಳುವ ಪ್ರಯತ್ನವಾಗಿದೆ ಎಂದರು.

ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಎನ್ , ಪ್ರಧಾನ ಕಾರ್ಯದರ್ಶಿ ಸುಂದರೇಶ್ ಕೆರೆಹಳ್ಳಿ ಮುಖಂಡರಾದ ಆರ್ ಟಿ ಗೋಪಾಲ್ , ಆನಂದ್ ಮೆಣಸೆ , ಕಗ್ಗಲಿ ಲಿಂಗಪ್ಪ ,ಎನ್ ಟಿ ನಾಗರತ್ನ , ಲೀಲಾ ಶಂಕರ್ , ಮಲ್ಲಿಕಾರ್ಜುನ್ , ಆರ್ ರಾಘವೇಂದ್ರ , ನಾಗರತ್ನ ದೇವರಾಜ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *