Headlines

ತೀರ್ಥಹಳ್ಳಿ : ಅಕ್ರಮ ಮಧ್ಯ ಮಾರಾಟ ಪ್ರಶ್ನಿಸಿದ್ದ ಗ್ರಾಪಂ ಪಿಡಿಓ ಮೇಲೆ ಹಲ್ಲೆ : ಆರೋಪಿ ವಶಕ್ಕೆ

ತೀರ್ಥಹಳ್ಳಿ: ತಾಲೂಕಿನ ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕೆಳಕೆರೆ ನಾಗೇಶ್ ಎನ್ನುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬೇಡಿ ಎಂದಿದ್ದಕ್ಕೆ ಅಲ್ಲಿನ ಪಿಡಿಓ ಮೇಲೆ ಹಲ್ಲೆ ನೆಡೆಸಿದ್ದ ಕೆಳಕೆರೆ ನಾಗೇಶ್ ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗೇಶ್ ಗೆ ಮಹಿಳಾ ಪಿಡಿಓ ಅದರ ಬಗ್ಗೆ ಪ್ರಶ್ನಿಸಿದ್ದಾರೆ. 

ಇದಕ್ಕೆ ನಾಗೇಶ್ ಪಿಡಿಓ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ನಾಗೇಶ್ ನನ್ನು ಸಿದ್ಧರಮಠದಲ್ಲಿ ವಶಕ್ಕೆ ಪಡೆದಿದ್ದು ನಾಗೇಶ್ ತಂದೆಯನ್ನು ಸಹ ವಶಕ್ಕೆ ಪಡೆದಿದ್ದಾರೆ.

ಹಲ್ಲೆ ನೆಡೆದ ನಂತರ ಪಿಡಿಓ ನಾಗೇಶ್ ನ ಹಲವು ಅವ್ಯವಹಾರದ ಬಗ್ಗೆ  ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 
ವರದಿ : ಪ್ರಶಾಂತ್ ಮೇಗರವಳ್ಳಿ

Leave a Reply

Your email address will not be published. Required fields are marked *