Headlines

ಆಗುಂಬೆ ಪೊಲೀಸರ ಭರ್ಜರಿ ಭೇಟೆ : ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

ಆಗುಂಬೆ :  ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಲಾಗಿದೆ. 

ರಾತ್ರಿ ವೇಳೆ ಗಸ್ತಿನಲ್ಲಿದ್ದ ಎಸ್ ಐ ಶಿವಕುಮಾರ್ ಅವರ ತಂಡ ತಪಾಸಣೆ ವೇಳೆ ಹನ್ನೊಂದು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ ಒಂದು  ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಧಾರವಾಡ ಮಂಗಳೂರು ಮಂಡ್ಯ ಈ ಜಿಲ್ಲೆಗಳಲ್ಲಿ ಒಟ್ಟು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

 ಕಾರ್ಯಾಚರಣೆಯಲ್ಲಿ ಆಗುಂಬೆಯ ಪಿ ಎಸ್ ಐ ಶಿವಕುಮಾರ್ ,  ಸಿಬ್ಬಂದಿಗಳಾದ ದೇವದಾಸ್ ನಾಯಕ್, ವೀರೆಂದ್ರ, ರಾಘವೇಂದ್ರ, ಉಲ್ಲಾಸ್, ನವೀನ್, ಮಂಜುನಾಥ್, ಜ್ಞಾನೇಂದ್ರ ಭಾಗಿಯಾಗಿದ್ದರು.


Leave a Reply

Your email address will not be published. Required fields are marked *