
ಜಿಲ್ಲಾ ಸುದ್ದಿ:
ಅನುದಾನ ಕೊರತೆ: ಗೃಹ ಸಚಿವರ ತವರು ಕ್ಷೇತ್ರದಲ್ಲಿಯೇ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ
ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಏಳು ಜನರು ಈ ಬಾರಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾಲೂರು ಕೊಳಿಗೆ ಗ್ರಾಮ ಪಂಚಾಯತಿಗೆ ಈವರೆಗೆ 1.68 ಕೋಟಿ ರೂಪಾಯಿ ಸರ್ಕಾರದ ಅನುದಾನ ಬಂದಿಲ್ಲ. ನಾಲೂರು ಕೊಳಿಗೆ ವ್ಯಾಪ್ತಿಯ ಮೂರು ಮರಳು ಕ್ವಾರಿಗಳು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ…
ತೀರ್ಥಹಳ್ಳಿ ದನಗಳ್ಳರ ಹಿಟ್ & ರನ್ ನಿಂದ ಇಬ್ಬರು ಯುವಕರಿಗೆ ಗಂಭೀರ ಗಾಯ!! ಆಸ್ಪತ್ರೆಗೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ:
ತೀರ್ಥಹಳ್ಳಿ: ಮಲೆನಾಡ ಭಾಗದಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು ಅದರಲ್ಲೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜೆಲ್ಲೆಯಲ್ಲಿ ದನ ಕಳ್ಳರ ಕೇಸ್ ದಾಖಲಾಗುತ್ತಲೇ ಇರುತ್ತಿದೆ. ತೀರ್ಥಹಳ್ಳಿಯ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ಕಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವಾಹನವನ್ನು ಹತ್ತಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಮೇಳಿಗೆಯಿಂದ ಅಪ್ ವಾಹನವನ್ನು ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್…
ಕಾಲೇಜು ವೇಳಾಪಟ್ಟಿ ಬದಲಾವಣೆಗೆ ವಿರೋದಿಸಿ ಸಾಗರ ಪದವಿ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ : ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿ ಒಕ್ಕೂಟದ ಸಿ ಎಂ ಚಿನ್ಮಯ್ ಆಗ್ರಹ
ಸಾಗರ : ನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೊತೆ ಚರ್ಚಿಸದೆ ಏಕಾಏಕಿ ತಿರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾಲೇಜಿನ ಎದುರು ಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳಕ್ಕೆ ಶಾಸಕ ಹಾಲಪ್ಪ ಭೇಟಿ ನೀಡುವಂತೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಯನ್ನು ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ…
ಕರ್ನಾಟಕ ಕಾನೂನು ವಿವಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವಂತೆ ಸಿಬಿಆರ್ ರಾಷ್ಟ್ರೀಯ ಕಾನೂನು ವಿದ್ಯಾರ್ಥಿಗಳಿಂದ ಆಗ್ರಹ :
ಶಿವಮೊಗ್ಗ: ಕರ್ನಾಟಕ ಕಾನೂನು ವಿವಿ ನಿಗಧಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೇ ಇರುವುದರಿಂದಾಗಿ ಮೂರು ಮತ್ತು ಐದು ವರ್ಷದ ಕಾನೂನು ವಿದ್ಯಾರ್ಥಿಗಳು ಕೋರ್ಸ್ ಮುಗಿಸಲು ಒಂದು ವರ್ಷ ಹೆಚ್ಚುವರಿಯಾಗಿ ಓದಬೇಕಾಗುತ್ತದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇಂದು ಸಿ.ಬಿ.ಆರ್. ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು. 2020ನೇ ಸಾಲಿನ ಡಿಸೆಂಬರ್ ನಲ್ಲಿ ನಿಗಧಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದಾಗಿ 2021ರ ಮಾರ್ಚ್ನನಲ್ಲಿ…
ಕಾರು ಡಿಕ್ಕಿಯಾಗಿ ಬಾಲಕ ಸಾವು :ನಡು ರಸ್ತೆಯಲ್ಲೆ ಶವವಿಟ್ಟು ಪ್ರತಿಭಟನೆ ಮಾಡಿದ ಗ್ರಾಮಸ್ಥರು
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಹೆಚ್ಚುತ್ತಿದ್ದು ವಾಹನ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕುಂಸಿ ಗ್ರಾಮಸ್ಥರು ಗುರುವಾರ ಅಪಘಾತದಿಂದ ಮೃತಪಟ್ಟ ಬಾಲಕನ ಶವವಿಟ್ಟು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಸಾಗರ ಕಡೆಯಿಂದ ಬರುತ್ತಿದ್ದ ಕಾರು ಶಾಲೆಯಿಂದ ವಾಪಸು ಮನೆಗೆ ಬರುತ್ತಿದ್ದ ಕುಂಸಿ ಗ್ರಾಮದ ಚಿಕ್ಕಣ್ಣ ದಂಪತಿಗಳ ಪುತ್ರ 9 ವರ್ಷದ ಬಾಲಕ ವೇಣುಗೋಪಾಲ್ಗೆ ಡಿಕ್ಕಿ ಹೊಡೆದಿತ್ತು. ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ…
ಶಿವಮೊಗ್ಗ ಕೃಷಿ ವಿವಿ 6ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಾಲನೆ.
ಶಿವಮೊಗ್ಗ : ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಘಟಿಕೋತ್ಸವದಲ್ಲಿ ಹೆಸರಾಂತ ಅಣು ಜೀವಶಾಸ್ತ್ರಜ್ಞ ಭಾರತೀಯ ಸಂಜಾತ ವಿಜ್ಞಾನಿ ಡಾ.ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ನಂತರ ವಿವಿಧ ಶಿಕ್ಷಣ ವಿಭಾಗದಲ್ಲಿ 28 ವಿದ್ಯಾರ್ಥಿಗಳಿಗೆ 35 ಚಿನ್ನದ ಪದಕ ಹಾಗೂ 15 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ…
ಜೋಗ ಜಲಪಾತ, ಹುಲಿ ಸಿಂಹಧಾಮಕ್ಕೆ ರಾಜ್ಯಪಾಲರ ಭೇಟಿ :: ಅಧಿಕಾರಿಗಳ ಜೊತೆ ಸಫಾರಿ, ಫೋಟೊ ಸೆಷನ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇವತ್ತು ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಂಡರು. ಎರಡು ದಿನ ಶಿವಮೊಗ್ಗ ಪ್ರವಾಸ ಕೈಗೊಂಡಿರುವ ರಾಜ್ಯಪಾಲರು ಇವತ್ತು ಬೆಳಗ್ಗೆ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಂಡು ಸಂತಸಪಟ್ಟರು. ಗುರುವಾರ ಬೆಳಗ್ಗೆ ಜೋಗದ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳನ್ನು ವೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಜೋಗ ಜಲಪಾತ, ಶರಾವತಿ ನದಿ, ಲಿಂಗನಮಕ್ಕಿ ಜಲಾಶಯದ ಕುರಿತು ಮಾಹಿತಿ ಪಡೆದರು. ಅಲ್ಲದೆ ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣದ ಕುರಿತು ತಿಳಿದುಕೊಂಡರು. ರಾಜ್ಯಪಾಲ…
ಶಿವಮೊಗ್ಗದ ಚೋರ್ ಬಜಾರ್ ನಲ್ಲಿ ಗಲಾಟೆ ; ಮುಂಜಾಗ್ರತೆಯಿಂದ ಬಜಾರ್ ಬಂದ್
ಶಿವಮೊಗ್ಗ : ಚೋರ್ ಬಜಾರ್ ನಲ್ಲಿ ಗಲಾಟೆ ಆಗಿದ್ದು ಬಜಾರ್ ನ್ನು ಬಂದ್ ಮಾಡಲಾಗಿದೆ. ವ್ಯಾಪಾರಸ್ಥರ ನಡುವೆಯೇ ಈ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಸುಮಾರು 8-10 ಜನ ಗಲಾಟೆ ಮಾಡಿದ್ದೂ ಇವರಲ್ಲಿ ಕೆಲವರ ಬಳಿ ಹರಿತವಾದ ಆಯುಧಗಳು ಕಂಡು ಬಂದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಟ್ಟೆ ಮಾರುಕಟ್ಟೆಯನ್ನ ಬಂದ್ ಮಾಡಲಾಗಿದೆ. ನಗರದ ಗಾಂಧಿ ಬಜಾರ್ ಸಮೀಪದ ಶಿವಮೊಗ್ಗ ಚೋರ್ ಬಜಾರ್ ಖ್ಯಾತಿಯ ಬಟ್ಟೆ ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ…
ನಾಳೆ ಪೆಸಿಟ್ ಕಾಲೇಜಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ !
ಶಿವಮೊಗ್ಗ : ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲಟ್ ಅವರು ನಗರದ ಪ್ರತಿಷ್ಠಿತ ಪಿಇಎಸ್ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಅಂದು ಸಂಸ್ಥೆಯ ಪ್ರೇರಣಾ ಕನ್ವೆಷನ್ ಹಾಲ್ನಲ್ಲಿ ಮಧ್ಯಾಹ್ನ 3:30 ಗಂಟೆಗೆ ಸರಿಯಾಗಿ ಆಯೋಜಿಸಲಾಗಿರುವ ಸಮಾರಂಭದಲ್ಲಿ LANDSCAPE OF NATIONAL EDUCATION POLICY, 2020 WHAT, WHY AND HOW? ಎಂಬ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಸಮಾರಂಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಪಿಇಎಸ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿಗಳಾಗಿರುವ ಶ್ರೀ…
ನಾನು ಕ್ಷೇತ್ರದಲ್ಲಿ ಇರುವುದು ಕಿಮ್ಮನೆ ಅವರಿಗೆ ಸಹಿಸಲು ಆಗುತ್ತಿಲ್ಲ – ಆರಗ ಜ್ಞಾನೇಂದ್ರ
ಶಿವಮೊಗ್ಗ : ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹಸಚಿವರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಿನ್ನೆ ಟೀಕಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವನಲ್ಲ. ಇಡೀ ರಾಜ್ಯಕ್ಕೆ ನಾನು ಗೃಹ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಸ್ವಂತ ಕ್ಷೇತ್ರದಲ್ಲಿ ಕೆಲಸ ಮಾಡುವುದು ಕಿಮ್ಮನೆ ಅವರಿಗೆ ಇಷ್ಟ ಇಲ್ಲದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಕಿಮ್ಮನೆ ಮತ್ತು ಮಂಜುನಾಥ ಗೌಡರು ನಿರಂತರ ಪಾದಾಯಾತ್ರೆ…