w
Headlines
Home » ನಾಳೆ ಪೆಸಿಟ್ ಕಾಲೇಜಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ !

ನಾಳೆ ಪೆಸಿಟ್ ಕಾಲೇಜಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ !

ಶಿವಮೊಗ್ಗ : ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲಟ್ ಅವರು ನಗರದ ಪ್ರತಿಷ್ಠಿತ ಪಿಇಎಸ್ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.

ಅಂದು ಸಂಸ್ಥೆಯ ಪ್ರೇರಣಾ ಕನ್ವೆಷನ್ ಹಾಲ್‌ನಲ್ಲಿ ಮಧ್ಯಾಹ್ನ 3:30 ಗಂಟೆಗೆ ಸರಿಯಾಗಿ ಆಯೋಜಿಸಲಾಗಿರುವ ಸಮಾರಂಭದಲ್ಲಿ LANDSCAPE OF NATIONAL
EDUCATION POLICY, 2020 WHAT, WHY AND HOW? ಎಂಬ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.

ಸಮಾರಂಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಪಿಇಎಸ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿಗಳಾಗಿರುವ ಶ್ರೀ ಬಿ. ವೈ ರಾಘವೇಂದ್ರ ಅವರು ಪಿಇಎಸ್ ಟ್ರಸ್ಟ್ ಟ್ರಸ್ಟಿಗಳು ಮತ್ತು ಜನಶಿಕ್ಷಣ ಸಂಸ್ಥಾನದ ನಿರ್ದೇಶಕರಾದ ಶ್ರೀಮತಿ ಎಸ್ ವೈ
ಅರುಣಾದೇವಿಯವರು, ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ವಿ ಚೈತನ್ಯಕುಮಾರ್‌ ಅವರು ವೇದಿಕೆಯಲ್ಲಿ ಉಪಸ್ಥಿತರಿಲಿದ್ದಾರೆ.

ಪಿಇಎಸ್ ಸಂಸ್ಥೆಯ ಮುಖ್ಯ ಆಡಳಿತ ಸಂಯೋಜಕರಾದ ಡಾ. ನಾಗರಾಜ ಆರ್ ಅವರು ಸ್ವಾಗತಿಸಲಿದ್ದು, ಪಿಇಎಸ್ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಿ. ಆರ್ ಸುಭಾಷ್ ಅವರು
ವಂದನೆಗಳನ್ನು ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.