ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ದಲ್ಲಿ ಬೆಳ್ಳಂಬೆಳಿಗ್ಗೆ ರೈತರು ಹಾಗೂ ಭತ್ತದ ಕೊಯ್ಲು ಮಿಷಿನ್ ನವರ ನಡುವೆ ಅಧಿಕ ಹಣ ವಸೂಲಿ ವಿಚಾರ ಸಂಬಂಧ ಜೋರು ವಾಗ್ವಾದ ನಡೆಯುತ್ತಿತ್ತು.
ಈ ವಿಚಾರವಾಗಿ ನಮ್ಮ ಸುದ್ದಿ ಸಂಸ್ಥೆ ಯ ವರದಿಗಾರರು ಸಹಾಯಕ ಕೃಷಿ ನಿರ್ದೇಶಕರಿಗೆ ದೂರವಾಣಿ ಸಂಪರ್ಕದ ಮೂಲಕ ಮಾಹಿತಿಯನ್ನು ನೀಡಿತ್ತು ಹಾಗೂ ಪಡೆದಿತ್ತು.
ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸುವುದು ನಮ್ಮ ಸುದ್ದಿ ಸಂಸ್ಥೆಯ ಮುಖ್ಯ ಯೋಚನೆಯಾಗಿತ್ತು.
ಇದೀಗ ಸಾಗರದ ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ್ ರವರು ತಾಳಗುಪ್ಪಕ್ಕೆ ತತಕ್ಷಣ ಧಾವಿಸಿ ಸಮಸ್ಯೆಯನ್ನು ಆಲಿಸಿ ಜಿಲ್ಲಾಧಿಕಾರಿಗಳ ಸುತ್ತೋಲೆಯನ್ನು ಸಹ ಮಷಿನ್ ನ ವಾರಸುದಾರರಿಗೆ ತೋರಿಸಿ ಸರ್ಕಾರದ ಈ ಕ್ರಮದಂತೆ ಹಣವನ್ನು ಪಡೆಯಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಆದೇಶಿಸಿ ನಂತರ ರೈತರು ಹಾಗೂ ಭತ್ತದ ಮಷಿನ್ ಕೊಯ್ಯುವವರ ನಡುವೆ ಸಮನ್ವಯ ಸಾಧಿಸುವಂತೆ ಮನವೊಲಿಸಿ ರೈತರಿಗೆ ತೊಂದರೆಯಾಗದಂತೆ ಕೆಲಸವನ್ನು ಮಾಡಿಕೊಡಬೇಕೆಂದು ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕರನ್ನು ಅಭಿನಂದಿಸಿದ ರೈತರು::
ಬೆಳ್ಳಂಬೆಳಿಗ್ಗೆಯಿಂದಲೇ ರೈತರು ಮಷಿನ್ ವಾರಸುದಾರರೊಂದಿಗೆ ಜಟಾಪಟಿ ನಡೆಸುತ್ತಿದ್ದರೂ ಕೂಡ ಬಗ್ಗದ ಏಜೆಂಟರುಗಳು ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ್ ರವರ ಮಾತಿಗೆ ಬೆಲೆಕೊಟ್ಟು ಬೆಲೆಯ ವಿಚಾರವಾಗಿ ರೈತರೊಂದಿಗೆ ಸಮನ್ವಯ ಸಾಧಿಸುತ್ತೇವೆಂದು ಒಪ್ಪಿಕೊಂಡರು.ಇದರಿಂದ ಸಂತಸಗೊಂಡ ರೈತರು ನಮ್ಮ ಹಕ್ಕು ನಮಗೆ ಸಿಕ್ಕಿದೆ ಮಧ್ಯಪ್ರವೇಶಿಸಿ ಸಮನ್ವಯ ಸಾಧಿಸಿದ್ದಕ್ಕಾಗಿ ಸಹಾಯಕ ಕೃಷಿ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ನಮ್ಮ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವರದಿ: ಪವನ್ ಕುಮಾರ್ ಕಠಾರೆ