ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪ್ರಿನ್ಸಿಪಲ್ ಅನಾಗರಿಕನಂತೆ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದರು.
ಬೆಳಿಗ್ಗೆಯಿಂದ ಶುರುವಾದ ಪ್ರತಿಭಟನೆಯು ಕ್ಷಣಕ್ಷಣಕ್ಕೂ ಹೆಚ್ಚಿನ ರೋಚಕತೆಯನ್ನು ಪಡೆಯುತ್ತಿತ್ತು ಕೊನೆಗೂ ಪ್ರಿನ್ಸಿಪಲ್ ಚಂದ್ರಪ್ಪರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಕೇಂದ್ರ ಕಚೇರಿಗೆ ಹಾಜರಾಗುವಂತೆ ಇಲಾಖೆಯಿಂದ ತನಿಖೆಗೆ ಆದೇಶ ಕೂಡ ಹೊರಬಿತ್ತು.ಇದರಿಂದ ನಿರಾಳ ಗೊಂಡಂತಹ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮೊಟಕುಗೊಳಿಸಿ ಶಾಲೆಗೆ ತೆರಳಿದರು.
ಆದರೆ ಪ್ರಿನ್ಸಿಪಾಲ್ ಗೆ ಮಾತ್ರ ಮತ್ತೊಂದು ಕುತ್ತು ರೆಡಿಯಾಗಿತ್ತು.
:::ವಿದ್ಯಾರ್ಥಿ ಪೋಷಕರಿಂದ ಪ್ರಿನ್ಸಿಪಲ್ ಚಂದ್ರಪ್ಪನ ಮೇಲೆ ವಿದ್ಯಾರ್ಥಿಗೆ ಥಳಿಸಿದ ಆರೋಪದಡಿ ಎಫ್ ಐ ಆರ್ ದಾಖಲು::
ಪ್ರತಿಭಟನೆ ಮುಗಿಯುತ್ತಿದ್ದಂತೆ ಪ್ರಿನ್ಸಿಪಲ್ ವಿದ್ಯಾರ್ಥಿಗೆ ಈ ಹಿಂದೆ ಹೊಡೆದು ಆತನಿಗೆ ಹಲ್ಲೆ ಮಾಡಿ, ವಿದ್ಯಾರ್ಥಿಯ ಕೈ ಮೇಲೆ ಹಾಗೂ ಕಾಲಿನ ಮೇಲೆ ಬರೆ ಬೀಳುವಂತೆ ಹೊಡೆದಿದ್ದಾನೆಂದು ವಿದ್ಯಾರ್ಥಿಯ ಪೋಷಕರು ಸಾಗರ ಗ್ರಾಮಾಂತರ ಠಾಣೆಯಲ್ಲಿ ಸೆಕ್ಷನ್ 323 ( ಕೈಯಿಂದ ಹೊಡೆದಿದ್ದಾರೆ )
354 ( ಯಾವುದೋ ಆಯುಧದಿಂದ ಹೊಡೆದಿದ್ದಾರೆ )
504 ( ಪ್ರಾಣ ಬೆದರಿಕೆ ಆರೋಪ )ದ ಅಡಿ ಪ್ರಕರಣ ದಾಖಲಿಸಿರುತ್ತಾರೆ.ಎಂದು ವಿದ್ಯಾರ್ಥಿಯ ಪೋಷಕರು ಮತ್ತು ಸ್ನೇಹಿತರು ಪೋಸ್ಟ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಸದ್ಯ ವಿದ್ಯಾರ್ಥಿ ಸಾಗರದ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಧ್ಯಾಹ್ನದ ವೇಳೆಗೆ ನಡೆದ ರೋಚಕ ತಿರುವುಗಳು ಹಾಗೂ ಚಂದ್ರಪ್ಪರನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸುವ ಮಾಹಿತಿ ಮಾತ್ರ ಇದುವರೆಗೂ ಸಾರ್ವಜನಿಕರಿಗೆ ತಿಳಿದಿತ್ತು ಆದರೆ ಚಂದ್ರಪ್ಪನ ಮೇಲೆ ದಾಖಲಾದ ಪ್ರಕರಣದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದಿರಲಿಲ್ಲ.
ಒಟ್ಟಾರೆ ಪ್ರಿನ್ಸಿಪಲ್ ಚಂದ್ರಪ್ಪನ ಮೇಲೆ ಇಲಾಖೆಯ ತನಿಖೆಯ ಜೊತೆ ಸಾಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವರದಿ: ಪವನ್ ಕುಮಾರ್ ಕಠಾರೆ.📹