ಕ್ರೈಂ ಸುದ್ದಿ:
ಶಾಲಾ ವಾಹನ ಹಾಗೂ KSRTC ಬಸ್ ನಡುವೆ ಡಿಕ್ಕಿ – ಇಬ್ಬರು ವಿದ್ಯಾರ್ಥಿಗಳ ಸಾವು , 17 ಜನ ಗಂಭೀರ
ಶಾಲಾ ವಾಹನ ಹಾಗೂ KSRTC ಬಸ್ ನಡುವೆ ಡಿಕ್ಕಿ – ಇಬ್ಬರು ವಿದ್ಯಾರ್ಥಿಗಳ ಸಾವು , 17 ಜನ ಗಂಭೀರ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಶಾಲಾ ವಾಹನ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, 17 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಸಮರ್ಥ್ ಅಮರೇಶ್ (07) ಹಾಗೂ ಶ್ರೀಕಾಂತ್ ಮಾರೇಶ್ (07)…
ಜ್ಯೂಸ್ ಬಾಟಲ್ ನ ಮುಚ್ಚಳ ನುಂಗಿ ಮಗು ಸಾವು
ಜ್ಯೂಸ್ ಬಾಟಲ್ ನ ಮುಚ್ಚಳ ನುಂಗಿ ಮಗು ಸಾವು ಮನೆಯಲ್ಲಿ ಆಟವಾಡುತಿದ್ದ ಮಗು ಜ್ಯೂಸ್ ಬಾಟಲಿಯ ಮುಚ್ಚಳ ನುಂಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟ ದಾರುಣ ಘಟನೆ, ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿ ಯಲ್ಲಿ ಹರಗುವಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಒಂದೂವರೆ ವರ್ಷದ ಪುತ್ರ ನಂದೀಶ್ ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಬುಧವಾರ ಬೆಳಿಗ್ಗೆ ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮುಚ್ಚಳ ನುಂಗಿದ್ದು…
SHIVAMOGGA | ಬೀಡಿ ಸಿಗುತ್ತಿಲ್ಲ ಎಂದು ಜೈಲಿನಲ್ಲಿ ಖೈದಿಗಳ ಪ್ರತಿಭಟನೆ
SHIVAMOGGA | ಬೀಡಿ ಸಿಗುತ್ತಿಲ್ಲ ಎಂದು ಜೈಲಿನಲ್ಲಿ ಖೈದಿಗಳ ಪ್ರತಿಭಟನೆ ಆರೋಪಿ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ವರದಿಯಾದ ಬಳಿಕ ಇದೀಗ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲಿಸಲಾಗುತ್ತಿದೆ. ಹೀಗಾಗಿ ಈವರೆಗೆ ಕೆಲವು ಸೌಲಭ್ಯ ಪಡೆಯುತ್ತಿದ್ದ ಕೈದಿಗಳು ಇದೀಗ ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ. ಸೋಗಾನೆ ಬಳಿ ಇರುವ ಕೇಂದ್ರ ಕಾರಗೃಹದಲ್ಲಿಯೂ…
“ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ” ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
“ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ” ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಹೌದು ಪ್ರೀತಿಸಲು ಹುಡುಗಿ ಸಿಗುತಿಲ್ಲ, ನನಗಿಂತ ಸಣ್ಣವರಿಗೆ ಪ್ರೀತಿಸಲು ಹುಡುಗಿಯರಿದ್ದಾರೆ.ಆದರೆ ನನಗೆ ಹುಡುಗಿಯೇ ಇಲ್ಲ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದಿಟ್ಟು 24 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣ ತೀರ್ಥಹಳ್ಳಿಯಲ್ಲಿ ನಡೆದಿತ್ತು. ತೀರ್ಥಹಳ್ಳಿಯ ಜಯದೀಪ್ (24) ಎಂಬ ಯುವಕ ಮೃತಪಟ್ಟ ದುರ್ಧೈವಿಯಾಗಿದ್ದಾನೆ….
ಕಡವೆ ಭೇಟೆ – ನಾಲ್ವರ ಬಂಧನ
ಕಡವೆ ಭೇಟೆ – ನಾಲ್ವರ ಬಂಧನ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್ ನ ಚೌಡಿಕಟ್ಟೆಯ ಬಳಿ ಕಡವೆ ಪ್ರಾಣಿಯನ್ನ ಶಿಕಾರಿ ಮಾಡಿದ ನಾಲ್ವರನ್ನ ಅರಣ್ಯ ಇಲಾಖೆಯವರು ಬಂಧಿಸಿ, ನ್ಯಾಯಾಂಗ ಬಂಧನಕೊಳಪಡಿಸಿದ್ದಾರೆ. ಚೌಡಿಕಟ್ಟೆಯಬಳಿ ಕಡವೆ ಬೇಟೆಯಾಡಿ ಕಡವೆಯ ತಲೆಯನ್ನ ಕೆರೆಗೆ ಬಿಸಾಕಿ ಹೋಗಿದ್ದಾಗ ಅರಣ್ಯ ಇಲಾಖೆಯವರೆ ಕಣ್ಣಿಗೆ ಬಿದ್ದಿದೆ. ಬೇಟೆಯಾಡಿದ ಕಡಿವೆಯನ್ನ ರುಂಡವನ್ನ ಛೇಧಿಸಿ ಮಾಂಸವನ್ನ ಕೊಯ್ದುಕೊಂಡು ತಲೆಯನ್ನ ಕೆರೆಗೆ ಬಿಸಾಕಲಾಗಿತ್ತು. ವನ್ಯಜೀವಿ ಬೇಟೆಯಾಡಿದ ಪ್ರಕರಣದ ಅಡಿಯಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಎl) ಶಿವ ಬಿನ್…
ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ – ಉಪನ್ಯಾಸಕ ಅರೆಸ್ಟ್
ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ – ಉಪನ್ಯಾಸಕ ಅರೆಸ್ಟ್ ಕಾಲೇಜು ವಿಧ್ಯಾರ್ಥಿನಿಯೊಬ್ಬಳ ಮೇಲೆ ಉಪನ್ಯಾಸಕನೇ ಅತ್ಯಾಚಾರವೆಸಗಿರುವ ಆರೋಪವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಕೇಳಿಬಂದಿದೆ. ಶಿಕ್ಷಕ ಎಂದರೆ ದೇವರಿಗೆ ಸಮಾನ.. ಆದ್ರೆ ಈ ದೇವರ ಸ್ಥಾನದಲ್ಲಿರುವ ಶಿಕ್ಷಕರೇ ತಪ್ಪು ಮಾಡಿದರೆ ಕಾಪಾಡುವವರೇ ಯಾರು ಎಂಬ ಪ್ರಶ್ನೆ ಎದುರಾಗುತ್ತೆ.. ಹೌದು.. ಶಿವಮೊಗ್ಗ ಜಿಲ್ಲೆಯ ಖಾಸಗಿ ಕಾಲೇಜೊಂದರ ಉಪನ್ಯಾಸಕ ಮದುವೆಯಾಗುವುದಾಗಿ ನಂಬಿಸಿ ತನ್ನ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದಾನೆಂಬ ಆರೋಪ ಕೇಳಿಬಂದಿದೆ.. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಖಾಸಗಿ ಕಾಲೇಜು…
ಜೀವನದಲ್ಲಿ ಜಿಗುಪ್ಸೆ | ಮಾದಾಪುರದಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಜೀವನದಲ್ಲಿ ಜಿಗುಪ್ಸೆ | ಮಾದಾಪುರದಲ್ಲಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ರಿಪ್ಪನ್ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬರು ಶನಿವಾರ ರಾತ್ರಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಾಹಿದಾ ಭಾನು (63) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಕೊರೊನಾ ಕಾಯಿಲೆಯಿಂದ ನಾಲ್ಕು ವರ್ಷಗಳ ಹಿಂದೆ ಮೃತ ಮಹಿಳೆಯ ಪತಿ ಮುನೀರ್ ಸಾಬ್ ಸಾವನ್ನಪ್ಪಿದರು. ಪತಿಯ ಅಗಲಿಕೆಯಿಂದ ಕೊರಗುತಿದ್ದ ಶಾಹಿದಾ ಭಾನು ಶನಿವಾರ ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ….
ರಿಪ್ಪನ್ಪೇಟೆಯ ಮಲ್ಲಾಪುರದಲ್ಲಿ ವಿದ್ಯುತ್ ತಗುಲಿ ವೃದ್ದೆ ಸಾವು
ರಿಪ್ಪನ್ಪೇಟೆಯ ಮಲ್ಲಾಪುರದಲ್ಲಿ ವಿದ್ಯುತ್ ತಗುಲಿ ವೃದ್ದೆ ಸಾವು ರಿಪ್ಪನ್ಪೇಟೆ : ವಿದ್ಯುತ್ ತಗುಲಿ ವೃದ್ದೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ (67) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ಮನೆ ಮುಂಭಾಗದಲ್ಲಿರುವ ಉನುಗೋಲು ತೆಗೆಯುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತೋಟದ ಪಂಪ್ ಸೆಟ್ ವಿದ್ಯುತ್ ವಯರ್ ನ್ನು ಬೇಲಿಗೆ ಸುತ್ತಿ ಇಟ್ಟಿದ್ದ ಪರಿಣಾಮ ವಿದ್ಯುತ್ ಬೇಲಿಗೆ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎನ್ನಲಾಗುತಿದೆ. ಸ್ಥಳಕ್ಕೆ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಹಾಗೂ ಮೆಸ್ಕಾಂ ಸಿಬ್ಬಂದಿಗಳು…
SHIVAMOGGA | ಹುಕ್ಕಾಬಾರ್ ಮೇಲೆ ದಾಳಿ
SHIVAMOGGA | ಹುಕ್ಕಾಬಾರ್ ಮೇಲೆ ದಾಳಿ ಶಿವಮೊಗ್ಗದ ಗೋಪಾಳದಲ್ಲಿರುವ ಹುಕ್ಕಾಬಾರ್ ಮೇಲೆ ದಾಳಿ ನಡೆಸಿ ತೆರವುಗೊಳಿಸಿದ ಘಟನೆ ನಡೆದಿದೆ. ಕರ್ನಾಟಕ ಸರ್ಕಾರದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗೋಪಾಳದಲ್ಲಿ ನಡೆಸಲಾಗುತ್ತಿದ್ದ ಹುಕ್ಕಾಬಾರ್ ಮೇಲೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ದಾಳಿ ನಡೆಸಿ ತೆರವುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ಪೋಲಿಸ್ ನಿರೀಕ್ಷಕರಾದ ರಘುನಾಥ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್, ಮಹಾನಗರ ಪಾಲಿಕೆ ಅಧಿಕಾರಗಳು ಹಾಗೂ…
RIPPONPETE | ಕೆಂಚನಾಲದಲ್ಲಿ ಹಸುವಿನ ಕತ್ತರಿಸಿದ ತಲೆ ಪತ್ತೆ – ಪ್ರಕರಣ ದಾಖಲು
RIPPONPETE | ಕೆಂಚನಾಲದಲ್ಲಿ ಹಸುವಿನ ಕತ್ತರಿಸಿದ ತಲೆ ಪತ್ತೆ – ಪ್ರಕರಣ ದಾಖಲು ರಿಪ್ಪನ್ಪೇಟೆ : ಶುಕ್ರವಾರದಂದು ಬೆಳಕಿಗೆ ಬಂದ ಆಘಾತಕಾರಿ ಘಟನೆಯೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಹಸುವಿನ ತಲೆಯನ್ನು ಕೆರೆಯ ಬಳಿಯಲ್ಲಿ ಎಸೆದು ಹೋಗಿರುವ ಘಟನೆ ಕೆಂಚನಾಲ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಕೆಂಚನಾಲ ಗ್ರಾಮದಲ್ಲಿ ಪೊಲೀಸರು ಗಸ್ತು ತಿರುಗುತಿದ್ದ ಸಂಧರ್ಭದಲ್ಲಿ ಗಸ್ತು ತಿರುಗುತಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯಾರೋ ಅಪರಿಚಿತರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಹಸುವನ್ನು ಕಡಿದು ಕೆರೆಯ…