ರಿಪ್ಪನ್ ಪೇಟೆ : ಪಟ್ಟಣದ ವಿಶ್ವ ಮಾನವ ಸಭಾಭವನದ ಸಮೀಪ ಲಾರಿ ಚಾಲಕನೊಬ್ಬ ವಿಶ್ರಾಂತಿ ಪಡೆಯುವ ಸಂಧರ್ಭದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಯಲ್ಲಾಪುರ ನಿವಾಸಿ ಮಧು (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಯಲ್ಲಾಪುರ ನಿವಾಸಿ ಮಧು (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಯಲ್ಲಾಪುರದಿಂದ ತೀರ್ಥಹಳ್ಳಿಗೆ ಡಾಂಬರ್ ತುಂಬಿದ ಟ್ಯಾಂಕರ್ (KA-20-D-7055) ಚಲಾಯಿಸುತ್ತಿದ್ದ ಚಾಲಕನು ಮಾರ್ಗ ಮದ್ಯೆ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ವಿಶ್ರಾಂತಿ ಪಡೆಯಲು ರಿಪ್ಪನ್ ಪೇಟೆಯ ವಿಶ್ವ ಮಾನವ ಸಭಾ ಭವನದ ಬಳಿ ನಿಲ್ಲಿಸಿ ವಿಶ್ರಾಂತಿ ಪಡೆದಿದ್ದಾನೆ.
ನೆನ್ನೆ ರಾತ್ರಿಯಿಂದ ಚಾಲಕನು ಪೋನ್ ಸಂಪರ್ಕಕ್ಕೆ ಸಿಗದಿದ್ದಕ್ಕೆ ಗಾಬರಿಗೊಂಡ ಲಾರಿ ಮಾಲೀಕರ ಕಡೆಯವರು ಇಂದು ಹುಡುಕಿಕೊಂಡು ಬಂದಾಗ ಚಾಲಕ ಲಾರಿಯಲ್ಲಿಯೇ ಮೃತಪಟ್ಟ ವಿಷಯ ತಿಳಿದು ರಿಪ್ಪನ್ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಿಪ್ಪನ್ ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಿಪ್ಪನ್ ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.