ಒಂಭತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
ಶಿವಮೊಗ್ಗದ ಮಂಜಪ್ಪ (49) ಶಿಕ್ಷೆಗೆ ಒಳಗಾದವನು. ಈತನ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗದ ಮಂಜಪ್ಪ (49) ಶಿಕ್ಷೆಗೆ ಒಳಗಾದವನು. ಈತನ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2020ರ ಡಿಸೆಂಬರ್ 5ರಂದು 9 ವರ್ಷದ ಬಾಲಕಿ ಬೆಂಕಿ ಪೊಟ್ಟಣ ಕೇಳಿಕೊಂಡು ಮಂಜಪ್ಪನ ಮನೆಗೆ ಬಂದಿದ್ದಳು. ಆಕೆಯ ಮೇಲೆ ಮಂಜಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿ ನೀಡಿದ ಹೇಳಿಕೆ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಹಿಳಾ ಠಾಣೆ ಪಿಎಸ್ಐ ಶಾಂತಲಾ ಅವರು ತನಿಖೆ ನಡೆಸಿ 2021ರ ಜನವರಿ 27ರಂದು ದೋಷಾರರೋಪ ಪಟ್ಟಿ ಸಲ್ಲಿಸಿದ್ದರು.
ಮಹಿಳಾ ಠಾಣೆ ಪಿಎಸ್ಐ ಶಾಂತಲಾ ಅವರು ತನಿಖೆ ನಡೆಸಿ 2021ರ ಜನವರಿ 27ರಂದು ದೋಷಾರರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲದಯದ ಎಫ್.ಟಿ.ಎಸ್.ಸಿ-1 ಕೋರ್ಟ್’ನ ನ್ಯಾಯಾಧೀಶರಾದ ದಯಾನಂದ್ ವಿ.ಹೆಚ್ ಅವರು ಮಂಜಪ್ಪ ತಪ್ಪೆಸಗಿದ್ದಾನೆ ಎಂದು ತೀರ್ಪು ನೀಡಿದ್ದಾರೆ. ಮಂಜಪ್ಪಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ.