w
Headlines
Home » ಹೊಸನಗರ ಸಮೀಪ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ ದೋಚಿದ ದರೋಡೆಕೋರರು!!!! : ದರೋಡೆ ಹಿಂದೆ ಇದೀಯಾ ಐಪಿಎಲ್ ಬೆಟ್ಟಿಂಗ್ ನಂಟು?????

ಹೊಸನಗರ ಸಮೀಪ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ ದೋಚಿದ ದರೋಡೆಕೋರರು!!!! : ದರೋಡೆ ಹಿಂದೆ ಇದೀಯಾ ಐಪಿಎಲ್ ಬೆಟ್ಟಿಂಗ್ ನಂಟು?????

ಹೊಸನಗರ ಸಮೀಪದ ಮಾವಿನಕೊಪ್ಪ – ಹೊಸನಗರ ರಸ್ತೆಯಲ್ಲಿ ಮೊನ್ನೆ ರಾತ್ರಿ ಮನೆಗೆ ಮೂವರು ದರೋಡೆಕೋರರು ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿರುವ ಬಗ್ಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಂತ್ ಎಂಬ ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಹೊಸನಗರದ ಮಾವಿನಕೊಪ್ಪ ಮತ್ತು ಸಾಗರ ರಸ್ತೆಯಲ್ಲಿರುವ ತಂದೆಯ ಮನೆಗೆ ಬಂದಿದ್ದಾನೆ. ಮೊನ್ನೆ ಕಾರ್ಯಕ್ರಮವೊಂದಕ್ಕೆ ಸುಮಂತ್ ನ ತಂದೆ ತಾಯಿ ಉಡುಪಿ ಜಿಲ್ಲೆಯ ಅಮಾವಾಸೆ ಬೈಲ್  ತೆರಳಿದ ವೇಳೆ ಕಳ್ಳತನದ ಘಟನೆ ನಡೆದಿದೆ ಎಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಘಟನೆಯ ಹಿನ್ನಲೆ :

ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆ ಸಾಕಿದ ನಾಯಿ ಬೊಗಳಲು ಶುರುವಾಗಿದೆ. ಬಾಗಿಲು ತೆಗೆದು ಕಟ್ಟಿದ ನಾಯಿಯನ್ನು ಬಿಚ್ಚಲು ಮನೆಯ ಬಾಗಿಲು ತೆರೆಯುತ್ತಿದ್ದಂತೆ ಮೂವರು ಅಪರಿಚಿತರು ದಿಡೀರ್ ಎಂದು ಪ್ರತ್ಯಕ್ಷರಾಗಿ ಆತನನ್ನ ಹಲ್ಲೆ ಮಾಡಿ ಮನೆಯೊಳಗೆ ನುಗ್ಗುತ್ತಾರೆ.

ಮನೆಯೊಳಗಿನ ಬೀರುವೊಂದನ್ನ ತೆರೆದು ಬೀರುವಿನ ಕಾಫಿ ಬ್ಯಾಗ್ ನಲ್ಲಿ 50 ಸಾವಿರ ರೂ ಬಂಡಲ್ ಮತ್ತು 25 ಸಾವಿರ ಬಂಡಲ್ ಸೇರಿ ಒಟ್ಟು 75 ಸಾವಿರ ರೂ ಹಣ ಕದ್ದು ಸುಮಂತ್ ಗೆ ಸ್ಡಿಕ್ಕರ್ ಕಟಿಂಗ್ ಮಾಡುವ ಬ್ಲೇಡ್ ನಿಂದ ಹಲ್ಲೆ ನಡೆಸಿ ಕೈಗೆ ಗಾಯವಾಗಿದೆ. ಆತನನ್ನ ತಳ್ಳಿ ಮೂವರು ದರೋಡೆಕೋರರು ಮನೆಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ ಎಂದು ಸುಮಂತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಮನೆಯ ಮೇಲೆ ಬಾಡಿಗೆ ಮನೆಯಲ್ಲಿರುವ ರಕ್ಷಿತ್ ಎಂಬುವರಿಗೆ ಸುದ್ದಿಮುಟ್ಟಿಸಿದ್ದಾನೆ. ದೂರದಿಂದ ಬಂದ ರಕ್ಷಿತ್ ಬಂದ ಮೇಲೆ ಮರುದಿನ ದೂರು ನೀಡಿದ್ದಾನೆ. 

ಆದರೆ ಇದು ಐಪಿಎಲ್ ಹಿನ್ನಲೆಯಲ್ಲಿ ವಿದ್ಯಾರ್ಥಿ ನಾಟಕವಾಡುತ್ತಿದ್ದಾನಾ ಎಂಬ ಅನುಮಾನವೂ ಸಹ ವ್ಯಕ್ತವಾಗುತ್ತಿದೆ.ಐಪಿಎಲ್ ಬೆಟ್ಟಿಂಗ್ ಹಿನ್ನಲೆಯಲ್ಲಿ ಹಣವನ್ನ ಕದ್ದು ಬೇರೆ ರೀತಿಯಲ್ಲಿ ಪ್ರಕರಣವನ್ನ ದಾಖಲಿಸಲಾಗಿದೆಯಾ ಎಂಬ ಅನುಮಾನಕ್ಕೆ ಈ ಪ್ರಕರಣ ಎಡೆಮಾಡಿಕೊಡುತ್ತಿದೆ.

ಹೊಸನಗರದ ಖಡಕ್ ಇನ್ ಸ್ಪೆಕ್ಟರ್ ರಾಜೇಂದ್ರ ನಾಯ್ಕ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.

 ಶೀಘ್ರದಲ್ಲಿಯೇ ಈ ಘಟನೆಯ ರೂವಾರಿ ಹಾಗೂ ಆರೋಪಿಗಳ ಹೆಸರು ಬಹಿರಂಗಗೊಳ್ಳಲಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.