Headlines

ಹುಂಚಾದಲ್ಲಿ ನಡೆದ ಬಾಲ್ಯ ವಿವಾಹ : ಅರ್ಚಕ,ಫೋಟೋಗ್ರಾಫರ್ ಸೇರಿದಂತೆ ಎಲ್ಲಾರ ಮೇಲೂ ದಾಖಲಾಯಿತು ಕೇಸ್

ಇತ್ತೀಚೆಗೆ ರಿಪ್ಪನ್‌ಪೇಟೆ ಸಮೀಪದ ಹುಂಚಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ನಡೆದ ಬಾಲ್ಯವಿವಾಹದ ವಿರುದ್ಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ. 

ಮದುವೆ ಗಂಡು ವಯಸ್ಕನಾಗಿದ್ದು ಮದುವೆ ಹೆಣ್ಣು ಅಪ್ರಾಪ್ತ ವಯಸ್ಸಿನವಳಾಗಿದ್ದಳು.ಈಗ
 ವಧುವರ, ಮದುವೆ ಮಾಡಿಸಿದ್ದ ಅರ್ಚಕ, ಆಹ್ವಾನ ಪತ್ರಿಕೆ ಮುದ್ರಿಸಿದ ವ್ಯಕ್ತಿ, ಫೋಟೋಗ್ರಾಫರ್, ವಧು ವರರ ಪೋಷಕರ ವಿರುದ್ಧ ದೂರು ದಾಖಲಾಗಿದೆ.

ಆನಗದ್ದೆ ಗ್ರಾಮದ ಯಲ್ಲದೋಣೆಯ ರಮೇಶ್ ಎಂಬುವವನು ಬಳ್ಳಾರಿ ತಾಲೂಕಿನ ಕೂಡ್ಲಿಗಿ ಗ್ರಾಮದ‌ ಅಪ್ರಾಪ್ತೆ ಬಾಲಕಿಯನ್ನ ಮಾ.28 ರಂದು ಮದುವೆಯಾಗಿರುತ್ತಾನೆ. 

ಈ ಬಗ್ಗೆ ಬಂದ ದೂರು ಆಧಾರಿಸಿದ ಹೊಸನಗರ ಸಿಡಿಪಿಒ ನೇತೃತ್ವದಲ್ಲಿ ಬಾಲಕಿಯ ಶಾಲೆ ದೃಢೀಕರಣ ಪತ್ರದ ಆಧಾರದ ಮೇರೆಗೆ ಬಾಲಕಿಯ ವಯಸ್ಸು ಪತ್ತೆ ಮಾಡಿದ್ದಾರೆ. ಮದುವೆ ಮಾಡಿಕೊಂಡು ಇಬ್ಬರೂ ಬಳ್ಳಾರಿ ಜಿಲ್ಲೆಗೆ ತೆರಳಿದ್ದು ಅವರನ್ನ ಪತ್ತೆ ಹಚ್ಚಲಾಗಿದೆ. ಯುವತಿಯ ಪತ್ತೆಯಾದ ನಂತರ ಹೇಳಿಕೆ ಪಡೆದು ಸುರಭಿ ಕೇಂದ್ರಕ್ಕೆ ಬಿಡಲಾಗುವುದು. ಮದುವೆ ಗಂಡನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳಲಿದ್ದಾರೆ.‌

ಮದುವೆ ಮಾಡಿಸಿದ ಹುಡುಗನ ತಾಯಿ, ಬಾಲಕಿಯ ತಂದೆ ತಾಯಿ, ಮದುವೆ ಮಾಡಿಸಿದ ಅರ್ಚಕ, ಮದುವೆ ಆಹ್ವಾನ ಪತ್ರಿಕೆ ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್ ನ ವ್ಯಕ್ತಿ ಮತ್ತು ಫೋಟೊ ಗ್ರಾಫರ್ ವಿರುದ್ಧ ದೂರು ದಾಖಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *