ಬೈಕ್ ನಿಧಾನಕ್ಕೆ ಚಲಿಸಿ ಎಂದು ಬುದ್ದಿವಾದ ಹೇಳಿದ್ದಕ್ಕೆ ದೇವಸ್ಥಾನದ ಅರ್ಚಕನ ಮೇಲೆ ಹಲ್ಲೆ ನಡೆದು ಅವರ ಬಳಿ ಮೊಬೈಲ್ ಮತ್ತು ಇತರೆ ವಸ್ತುಗಳನ್ನ ಕಿತ್ತುಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ಊರುಗಡೂರು ಗಣಪತಿ ದೇವಸ್ಥಾನದ ಅರ್ಚಕ ಅಕ್ಷಯ್ ಕುಮಾರ್ ಕೆಲಸದ ನಿಮಿತ್ತ ಶಿವಮೊಗ್ಗದ ಗಾಂಧಿ ಬಜಾರ್ ಗೆ ಬಂದಿದ್ದು ಜೀ ಕಾರ್ನರ್ ಮೂಲಕ ಎಂಕೆಕೆ ರಸ್ತೆಯಲ್ಲಿ ಹೋಗಲು ಮೆಹಬೂಬ್ ಗಲ್ಲಿಗೆ ಬಂದಾಗ ಇಬ್ಬರು ಬೈಕ್ ಸವಾರರು ಬೈಕ್ ಗೆ ಡಿಕ್ಕಿ ಹೊಡೆಯುವ ರೀತಿ ಚಲಾಯಿಸಿಕೊಂಡು ಬಂದಿದ್ದಾರೆ.
ಚಲಾಯಿಸಿಕೊಂಡು ಬಂದ ಯುವಕರಿಗೆ ನೋಡಿಕೊಂಡು ಬೈಕ್ ಚಲಾಯಿಸಿ ಎಂದು ಅಕ್ಷಯ್ ಹೇಳಿದ್ದಾರೆ. ಬೈಕ್ ನ ಹಿಂಬದಿ ಸವಾರ ಹಂಚಿನ ಚೂರು ಮತ್ತು ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾರೆ. ಯಾಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಬೈಕ್ ನ ಹಿಂಬದಿ ಸವಾರ ಮತ್ತು ಸ್ಥಳೀಯರು ಸೇರಿ ನನಗೆ ಬೈದಿದ್ದು ಅಕ್ಷಯ್ ಕುಮಾರ್ ಜೇಬಿನಲ್ಲಿದ್ದ ಮೊಬೈಲ್ ಮತ್ತು ಇತರೆ ವಸ್ತುಗಳನ್ನ ಕಿತ್ತುಕೊಂಡಿದ್ದಾರೆ.
ತಕ್ಷಣವೇ ಅಕ್ಷಯ್ ಬೈಕ್ ಚಲಾಯಿಸಿಕೊಂಡು ಜಾಗ ಖಾಲಿ ಮಾಡಿದ್ದಾರೆ. ಈ ಸಂಬಂಧ ಓರ್ವನನ್ನ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವನನ್ನ ಸಲೀಂ ಎಂದು ಗುರುತಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.