ಹರ್ಷನ ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಕೊಲೆಗೆ ಸಂಚು ರೂಪಿಸಲಾಗಿತ್ತಾ ಎಂಬ ಅನುಮಾನಕ್ಕೆ ಈ ಘಟನೆ ಕಾರಣವಾಗಿದೆ.ಹರ್ಷ ಕೊಲೆಯ ಪ್ರತೀಕಾರವಾಗಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚನ್ನು ರೂಪಿಸಿದ ಖತರ್ನಾಕ್ ಗ್ಯಾಂಗ್ ನ್ನು ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗಿದೆ.
ಹರ್ಷನ ಕಗ್ಗೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ನಡೆದ ಹಲ್ಲೆ ನಡೆಸಿದ್ದ ಆರೋಪಿ ಜೇಟ್ಲಿಯನ್ನ ಬಂಧಿಸಿದಾಗ ಕೊಲೆಯ ಸಂಚನ್ನು ಬಾಯಿಬಿಟ್ಟಿದ್ದಾನೆ. ಈ ಹಿನ್ನಲೆಯಲ್ಲಿ 13 ಜನರ ವಿರುದ್ಧ ಎಫ್ಐಅರ್ ದಾಖಲಾಗಿದೆ.

ರಾಖಿ, ವಿಶ್ವಾಸ್, ವಾಸನೆ, ಬೆಂಗಳೂರು, ಕಟ್ಟೆ, ಕೋಟಿ, ಕುಲ್ಡ, ಅಪ್ಪು ಸಚಿನ್ ಮೊದಲಾದವರು ಸೇರಿದಂತೆ 13 ಜನರ ಮೇಲೆ ಎಫ್ಐಆರ್ ದಾಖಲಾಗಿದೆ ಇದರಲ್ಲಿ ಬಹುತೇಕರನ್ನು ಬಂಧಿಸಿ ಕರತರಲಾಗಿದೆ.
ಎಸ್ಪಿಯವರ ಖಡಕ್ ಸೂಚನೆ ಮೇರೆಗೆ ಮತ್ತೊಂದು ಕೋಮುಗಲಭೆಗೆ ಕಾರಣವಾಗಬೇಕಿದ್ದ ಘಟನೆಯನ್ನ ತಪ್ಪಿಸಲಾಗಿದೆ.
ಕೋಮುದುಳ್ಳರಿಗೆ ಕಾರಣವಾಗಬೇಕಿದ್ದ ಘಟನೆಯನ್ನ ತಪ್ಪಿಸಿರುವ ಕೀರ್ತಿ ಎಸ್ಪಿ ಡಾ.ಬಿ.ಎಮ್ ಲಕ್ಷ್ಮೀ ಪ್ರಸಾದ್ ಗೆ ಸಲ್ಲುತ್ತದೆ. ರಾತ್ರೋ ರಾತ್ರಿ ಎಕ್ಸಿಕ್ಯೂಟ್ ಆಗಬೇಕಿದ್ದ ಕೊಲೆಯ ಸಂಚನ್ನ ತಡೆಗಟ್ಟಲು ಹಾಗೂ ಪತ್ತೆ ಮಾಡುವಲ್ಲಿ ಎಸ್ಪಿ ಯವರ ಖಡಕ್ ಕಾರ್ಯಾಚರಣೆ ಕಾರಣವಾಗಿದೆ.

ಮಾಹಿತಿ : ಸುದ್ದಿಲೈವ್