ಕೋಟಾ ಮುಗಿದಿದೆ ಸಚಿವ ಸ್ಥಾನಕ್ಕೆ ಕನಸು ಕಾಣುವುದು ಬೇಡ :ಬೇಳೂರು ಗೋಪಾಲಕೃಷ್ಣ

ರಿಪ್ಪನ್ ಪೇಟೆ : ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ವಿಕೆಟ್ ಒಂದು ಪತನವಾಗಿದ್ದು. ಮಂತ್ರಿ ಪದವಿ ತನಗೆ ಸಿಗುತ್ತದೆ ಎಂದು ಶಿವಮೊಗ್ಗ ಜಿಲ್ಲೆಯ ಬಿಜೆಪಿಯ ಪ್ರಮುಖ ಶಾಸಕರೊಬ್ಬರು ಕನಸು ಕಾಣುತ್ತಿದ್ದಾರೆ. ಆದರೆ ಸಮಾಜದ ಕೋಟಾ ಮುಗಿದಿದೆ ಸುಮ್ಮನೆ ಹಗಲು ಕನಸು ಕಾಣಬೇಡಿ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾರ್ಮಿಕವಾಗಿ ಹೇಳಿದರು.

 ಇಂದು ರಿಪ್ಪನ್ ಪೇಟೆ ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಶೇಕಡ 40ರಷ್ಟು ಕಮಿಷನ್ ಬೇಡಿಕೆ ಆರೋಪಿಸಿ  ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಮುನ್ನ ತನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು. ಸಂತೋಷ್ ಸಾವಿಗೆ ಈಶ್ವರಪ್ಪ  ಕಾರಣರಾಗಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಬೇಕು  ಎಂದು ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಈಗಾಗಲೇ ರಾಜ್ಯಾದ್ಯಂತೆ ಪ್ರತಿಭಟನೆಗಳು ನಡೆಯುತ್ತಿದ್ದು ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ಹೇಳಿದರು.


 ಧರ್ಮದ ಹೆಸರಿನಲ್ಲಿ ರಾಜಕೀಯ ಬೇಡ: 


ರಾಜ್ಯದಲ್ಲಿ ಕೆಲದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯಾತೀತ ರಾಷ್ಟ್ರ ಎಂದು ಉಲ್ಲೇಖವಿದ್ದರೂ ಸಹಿತ ಇಂದು ಜಾತಿಗಳ ಆಧಾರದ ಮೇಲೆ ರಾಜಕಾರಣ ಮಾಡಲಾಗುತ್ತದೆ ಚುನಾವಣೆಗಳಿಗೆ ಚುನಾವಣಾ ವಸ್ತುಗಳಾಗಿ ಬಳಕೆಯಾಗುತ್ತಿವೆ. ಕೆಲ ದುಷ್ಟಶಕ್ತಿಗಳು ಜನರಲ್ಲಿ ಜಾತಿಯತೆಯ ಎಂಬ ವಿಷಬೀಜ ಬಿತ್ತುವ ಮೂಲಕ ಸಮಾಜವನ್ನು ಚಿದ್ರ ಚಿದ್ರಮಾಡುವ ಹುನ್ನಾರವನ್ನು ಸದ್ದಿಲ್ಲದೆ ಮಾಡುತ್ತಿವೆ ಎಂದರು.

 ಕೆಲವು ದಿನಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರೆಮಾಚಿದೆ. ಬಿಜೆಪಿ ಪಕ್ಷಗಳ ತತ್ವ-ಸಿದ್ಧಾಂತಗಳು ಮತ್ತು ತಮ್ಮ ವ್ಯಕ್ತಿಗತ ಶಕ್ತಿಗಾಗಿ ಸಾಮಾನ್ಯ ಜನ ಬದುಕನ್ನು ಬಲಿ ನೀಡಲಾಗುತ್ತದೆ ಅವತ್ತಿನ ದಿನ ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ನಮ್ಮ ಭಾರತದೇಶ ಎಂದು ಹೇಳಿದ್ದರು ಇಂದಿನ ಸಮಾಜದ ಮಠ-ಮಂದಿರಗಳಲ್ಲಿ ಶಾಂತಿ ನಿಲ್ಲಿಸಿದೆ ರಾಜಕೀಯ ಆಗುಹೋಗುಗಳ ಆರಂಭಿಕ ಕೇಂದ್ರಗಳಾಗಿ ಮಾರ್ಪಟ್ಟಿವೆ ಕೊಟ್ಟರೆ ರಾಜಕಾರಣಿಗಳು ಜಾತಿ ಎಂಬ ವಿಷಯವನ್ನು ಬಿತ್ತಿ ಸಮಾಜವನ್ನು ಮರಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಾರುಗಳು ನಡೆಯುತ್ತಿವೆ ಜನರು ಇದನ್ನು ಸೂಕ್ಷ್ಮವಾಗಿ ಅವಲೋಕಿಸಿ ಬರುವಂತ ಚುನಾವಣೆಗಳಲ್ಲಿ ಮತಗಳಿಂದ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದರು.


Leave a Reply

Your email address will not be published. Required fields are marked *