Headlines

ಆನಂದಪುರದಲ್ಲಿ ಕನ್ನಡ ಬಾರದ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ :

ಆನಂದಪುರದ ರಬ್ಬರ್ ಮರಗಳನ್ನ ಟ್ಯಾಪಿಂಗ್  ಬಂದಿದ್ದ ಜಿಸ್ ಎಂಬ ಮಧ್ಯ ವಯಸ್ಕನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಲಾಗಿದ್ದು ತಲೆಗೆ 6 ಹೊಲಿಗೆ ಹಾಕಲಾಗಿದೆ

ರಬ್ವರ್ ಮರಗಳ ಟ್ಯಾಪಿಂಗ್ ಮಾಡಿ ರಬ್ಬರ್ ಇಳಿಸಲು ಕೇರಳ ರಾಜ್ಯದಿಂದ ಬಂದಿದ್ದ ಜಿಸ್ ಮೊನ್ನೆ ರಾತ್ರಿ ಆನಂದಪುರದ ವೈನ್ ಶಾಪ್ ಬಳಿ ತೆರಳಿದ್ದಾರೆ. ಜಿಸ್ ನನ್ನ ಇಲ್ಲಿ ಪ್ಲಾಂಟೇಷನ್ ಗುತ್ತಿಗೆ ಹಿಡಿದು ಕೆಲಸ ಮಾಡುವ ಅಲೆಕ್ಸ್ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದರು.

ವೈನ್ ಶಾಪ್ ನಲ್ಲಿ ಕನ್ನಡ ಬಾರದ‌ ಜಿಸ್ ಗೆ ಅಪರಿಚಿತನೋರ್ವನ ಜೊತೆ ಕಿರಿಕ್ ಆಗಿದೆ. ಕನ್ನಡ ಅರ್ಥವಾಗದ ಜಿಸ್ ಗೂ ಅಪರಿಚಿತನ ನಡುವೆ ಕೈ ಕೈ ಮಿಲಾಯಿಸಿದ್ದಾರೆ. ಮದ್ಯದ ನಶೆಯಲ್ಲಿ ಅಪರಿಚಿತ ಜಿಸ್ ಗೆ ಬಿಯರ್ ಬಾಟಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.

ಜಿಸ್ ಗೆ ತೀವ್ರವಾಗಿ ರಕ್ತಸ್ರಾವ ವಾಗಿದೆ. ಈ ವೇಳೆ ಕೇರಳದಲ್ಲಿರುವ ತನ್ನ ಪತ್ನಿಗೆ ಕರೆ ಮಾಡಿದ ಜಿಸ್ ಹಲ್ಲೆ ನಡೆದಿರುವ ಬಗ್ಗೆ ವಿವರಿಸಿದ್ದಾನೆ. ತಾನು ಬದುಕುವುದಿಲ್ಲವೆಂದು ತಿಳಿಸಿದ್ದಾನೆ.

ಆತನ ಪತ್ನಿ ರಬ್ಬರ್ ಪ್ಲಾಂಟೇಶನಿನ ಗುತ್ತಿಗೆ ಹಿಡಿದ ಅಲೆಕ್ಸ್ ಗೆ ಕರೆ ಮಾಡಿ ಜಿಸ್ ಗೆ ಹಲ್ಲೆಯಾಗಿರುವುದನ್ನ ವಿವರಿಸಿದ್ದಾರೆ. ಅಲೆಕ್ಸ್ ಕೂಡಲೇ ಆನಂದ ಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತದ ನಂತರ ಮೆಗ್ಗಾನ್ ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಬಿಯರ್ ಬಾಟಲಿಯ ಹೊಡೆತದ ಬಿರುಸಿಗೆ 6 ಹೊಲಿಗೆ ಹಾಕಿದ್ದಾರೆ. ಜಿಸ್ ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಾಗಿದೆ.

ಮಾಹಿತಿ : ಸುದ್ದಿಲೈವ್

Leave a Reply

Your email address will not be published. Required fields are marked *