Headlines

ಬಟ್ಟೆಮಲ್ಲಪ್ಪ ಸಮೀಪದಲ್ಲಿ ಸಾಲಕ್ಕೆ ಹೆದರಿ ವಿಷ ಸೇವಿಸಿ ರೈತ ಆತ್ಮಹತ್ಯೆ :

ಹೊಸನಗರ: ತಾಲೂಕಿನ ಮಂಡ್ರಿ ಗ್ರಾಮದ ರೈತರೊಬ್ಬರು ಸಾಲಬಾಧೆಯಿಂದ ವಿಷ ಸೇವಿಸಿ ಮೃತಪಟ್ಟಿದ್ದಾರೆ.

ನಾಗರಾಜ್(58) ಮೃತ ರೈತ. ಇವರು ಮನೆಯ ಸಮೀಪದ ಕಾಡಿನಲ್ಲಿ ವಿಷ ಸೇವಿಸಿದ್ದರು. ತಕ್ಷಣ ಅಸ್ವಸ್ಥಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.

ಜಮೀನು ಅಭಿವೃದ್ಧಿಗೋಸ್ಕರ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದರು. 

ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *