ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಬೆತ್ತಲೆ ವಿಡಿಯೋವನ್ನ ಪಡೆದು ಬ್ಲಾಕ್ ಮೇಲ್ ಗೆ ಮುಂದಾಗಿದ್ದ ಕಾಮುಕನ ದಾಹಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ.
ಶಿರಾಳಕೊಪ್ಪದ ತೊಗರ್ಸಿ ಗ್ರಾಮದ 23 ವರ್ಷದ ಯವತಿಯೊಬ್ಬಳು ಬಿಎ ಪದವಿಧರೆ. ಮನೆಯಲ್ಲಿಯೇ ಇದ್ದ ಯುವತಿಯ ಬಳಿ ಆಂಡ್ರಯ್ಡ್ ಮೊಬೈಲ್ ಹೊಂದಿದ್ದಳು.ಇನ್ ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿದ್ದ ಯುವತಿಗೆ ಪದೇ ಪದೇ ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆತ್ತೆಲೆ ವಿಡಿಯೋ ಹಾಕದಿದ್ದರೆ ನಿನ್ನ ಫೋಟೊ ಎಡಿಟ್ ಮಾಡಿ ಬೆತ್ತಲೆಯಾಗಿ ರಚಿಸಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಈ ಬೆದರಿಕೆಗೆ ಬೆಚ್ಚಿಬಿದ್ದ ಯುವತಿ ಅಸಾಹಯಕಳಾಗಿ ಇನ್ ಸ್ಟಾಗ್ರಾಮ್ ನಲ್ಲಿಯೇ ಬೆತ್ತಲೆ ಚಿತ್ರವನ್ನ ಆತನಿಗೆ ತೋರಿಸಿದ್ದಾಳೆ. ಯುವತಿಯ ಬೆತ್ತಲೆ ವಿಡಿಯೋ ಪಡೆದ ಅಪರಿಚಿತ ಕಾಮುಕ ಈ ವಿಡಿಯೋ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ನಿನ್ನ ಮರ್ಯಾದೆ ಕಳೆಯುವುದಾಗಿ ಪದೇ ಪದೇ ಕರೆ ಮಾಡಿ ಬೆದರಿಸಿದ್ದಾನೆ.
ಮುಗ್ಧ ಬಾಲೆ ಕಾಮುಕನ ಕೈಯಲ್ಲಿ ಒದ್ದಾಡಿದ್ದಾಳೆ. ಮನನೊಂದು ಮೊನ್ನೆ ತಂದೆಯ ಬಳಿ ಹೇಳಿಕೊಂಡು ಭಯವಾಗುತ್ತಿದೆ ಅಪ್ಪ ಎಂದಿದ್ದಾಳೆ. ಅಪ್ಪ ಹೆದರಬೇಡ ಮಗಳೆ ನಾನು ನಿನ್ನ ಜೊತೆ ಇದ್ದೇನೆ. ಬಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸೋಣವೆಂದು ಧೈರ್ಯ ತುಂಬಿದ್ದಾನೆ.
ಮನೆ ಹೊರಗಡೆ ನಿಂತು ಭರವಸೆ ನೀಡಿದ್ದ ತಂದೆಗೆ ಕ್ಷಣಾರ್ಧದಲ್ಲಿಯೇ ಮಗಳಿನ ಸಾವಿನ ಸುದ್ದಿ ಕೇಳಿ ತಂದೆ ಅಲ್ಲೆ ಕೆಳಗೆ ಬೀಳುತ್ತಾನೆ. ಠಾಣೆಗೆ ಹೋಗೋಣ ಡ್ರೆಸ್ ಮಾಡಿಕೊಂಡು ಬರುವೆ ಎಂದು ರೂಂ ಒಳಗೆ ಹೋದ ಮಗಳು ಸುಮ ನೇಣಿಗೆ ಕೊರಳೊಡ್ಡಿದ್ದಾಳೆ.
ತಕ್ಷಣವೇ ಅಕ್ಕಪಕ್ಕದ ಮನೆಯವರ ಸಹಾಯದಿಂದ ಶಿರಾಳಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋದರು ವೈದ್ಯರು ಆಕೆಯ ಸಾವನ್ನು ಖಚಿತ ಪಡಿಸಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಯುವತಿಯ ತಂದೆ ಶಿವರಾಜ್ ದೂರು ದಾಖಲಿಸಿದ್ದಾನೆ. ಕಿರಾತಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾನೆ. ವಿಕೃತಿ ಕಾಮುಕನ ದಾಹಕ್ಕೆ ಯುವತಿ ಬಲಿಯಾಗಿದ್ದಾಳೆ.
ಮಾಹಿತಿ ಕೃಪೆ: ಸುದ್ದಿ ಲೈವ್