Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ತೀರ್ಥಹಳ್ಳಿ: ತಾಲೂಕು ಪಂಚಾಯತ್ ಅಧಿಕಾರವದಿ ಮುಕ್ತಾಯ,ವಿದಾಯ ಸಭೆ:

ತೀರ್ಥಹಳ್ಳಿ: 5 ವರ್ಷಗಳ ಕಾಲ  ಆಡಳಿತ ನಡೆಸಿ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಇಂದು ತನ್ನ ಅವಧಿಯನ್ನು ಪೂರೈಸಿದೆ. ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ 13 ಜನ ಸದಸ್ಯರುಗಳ ಅಂತಿಮ ವಿಧಾಯಸಭೆ ಇಂದು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು  ತಾಲ್ಲೂಕು  ಅಧ್ಯಕ್ಷೆ ಶ್ರೀಮತಿ ನವಮಣಿ ರವಿಕುಮಾರವರು ಉಪಾಧ್ಯಕ್ಷೆ ಶ್ರೀಮತಿ ಯಶೋಧ ಮಂಜುನಾಥ .ಸದಸ್ಯರುಗಳಾದ ಸಾಲೆಕೊಪ್ಪ ರಾಮ ಚಂದ್ರ. ಕುಕ್ಕೆ ಪ್ರಶಾಂತ್ ,ಕೆಳಕೆರೆ ದಿವಾಕರ್ .ಶ್ರುತಿ ವೆಂಕಟೇಶ್.   ಲಕ್ಷ್ಮಿ ಉಮೇಶ್,  ಗೀತಾ ಸದಾನಂದ ಶೆಟ್ಟಿ,  ವೀಣಾ ಗಿರೀಷ್,ಸುಮಾ ಉದಯ . ಚಂದವಳ್ಳಿ ಸೋಮಶೇಖರ್. ಬೇಗುವಳ್ಳಿ…

Read Full News

ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ :ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ಎಲ್ಲರಂತೆ ನಾನೂ ಸಂಚರಿಸುತ್ತೇನೆ. ನನಗಾಗಿ ಯಾವುದೇ ವಿಶೇಷ ಸೌಲಭ್ಯ ಬೇಡ ಎಂದು ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಲು ಅವಕಾಶವಿದೆ. ಆದರೆ ಮಂತ್ರಿಗಳಿಗೆ ಈ ವಿಶೇಷ ಸೌಲಭ್ಯವಿಲ್ಲ. ಅವಕಾಶ ಇಲ್ಲದೇ ಇದ್ದರೂ ಕೆಲ ಮಂತ್ರಿಗಳು ಪ್ರಭಾವ ಬಳಸಿ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುತ್ತದೆ. ಈ ಹಿಂದೆ…

Read Full News

ಕ್ಷುಲ್ಲಕ ಕಾರಣಕ್ಕೆ ಹಾಡಹಗಲೇ ಶಿವಮೊಗ್ಗದ ಯುವಕನ ಕೊಲೆ:

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಇಂದು ಹಾಡುಹಗಲೇ ಭೀಕರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಈ ಕೊಲೆ ಮಾಡಲಾಗಿದ್ದು, ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ರಾಹಿಲ್(20) ಕೊಲೆಯಾದ ಯುವಕನಾಗಿದ್ದು, ಅಜ್ಗರ್(19) ಕೊಲೆಮಾಡಿರುವ ಯುವಕನಾಗಿದ್ದಾನೆ.ನಿನ್ನೆ ಸಂಜೆ ಕೊಲೆ ಆರೋಪಿ ಅಜ್ಗರ್ ತಂದೆಯು ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೈಕಲ್ ನಲ್ಲಿ ಬರುತ್ತಿದ್ದ ವೇಳೆ, ರಾಹಿಲ್ ನ ಬೈಕ್ ಡಿಕ್ಕಿ ಹೊಡೆದಿತ್ತು. ಈ ವಿಚಾರದಲ್ಲಿ ತನ್ನ ತಂದೆಯ ಸೈಕಲ್ ರಿಪೇರಿ ಮಾಡಿಕೊಡುವಂತೆ ಅಜ್ಗರ್ ತಿಳಿಸಿದ್ದನಂತೆ. ಈ ವೇಳೆ ಮಾತಿಗೆ ಮಾತು…

Read Full News

ಶಿವಮೊಗ್ಗಜಿಲ್ಲೆಯ ನೂತನ ಮಂತ್ರಿಗಳಿಗೆ ಶ್ರೀ ರೇಣುಕಾನಂದ ಸ್ವಾಮೀಜಿಗಳಿಂದ ಅಭಿನಂದನೆ.

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಕೆಎಸ್ ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ರವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಅಭಿನಂದಿಸಿದ್ದಾರೆ.  ರಿಪ್ಪನ್ ಪೇಟೆ ಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ಜನನಾಯಕ ಆರಗ ಜ್ಞಾನೇಂದ್ರ ರವರಿಗೆ ರಾಜ್ಯದ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ. …

Read Full News

ಪೊಲೀಸ್ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆ ಮಾಡುತ್ತೇನೆ: ಆರಗ ಜ್ಞಾನೇಂದ್ರ

ತುಮಕೂರು: ಆರ್‌ಎಸ್‌ಎಸ್‌, ಬಿಎಸ್‌ವೈ, ಸಿಎಂ ನನ್ನ ಮೇಲೆ ಭರವಸೆ ಇಟ್ಟು ಹಿರಿಯರು ಗೃಹಖಾತೆ ಕೊಟ್ಟಿದ್ದಾರೆ ನನಗೆ ನೀಡಿರುವ ಸ್ಥಾನ ಮತ್ತು ಜವಾಬ್ದಾರಿಯನ್ನು ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತೇನೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.  ನಾಳೆ ಗೃಹ ಇಲಾಖೆ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಲಿದ್ದೇನೆ. ಆ ಮೂಲಕ ಅಧಿಕೃತವಾಗಿ ಚಾರ್ಜ್ ವಹಿಸಿಕೊಳ್ಳಲಿದ್ದೇನೆ.ಅದಕ್ಕೂ ಮುಂಚೆ ಸಿದ್ದಗಂಗಾ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇನೆ. ಪೊಲೀಸ್ ಇಲಾಖೆ ಸಶಕ್ತ ವಾಗಿ ಕೆಲಸ ಮಾಡುವ ಹಾಗೆ…

Read Full News

ಸಹೃದಯಿ ಶಾಸಕ ಆರಗ ಜ್ಞಾನೇಂದ್ರರವರಿಗೆ ಗೃಹಖಾತೆ ಲಭಿಸಿರುವುದು ಖುಷಿ ತಂದಿದೆ : ಎಂ ಬಿ ಲಕ್ಷಣಗೌಡ

ರಿಪ್ಪನ್ ಪೇಟೆ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಸರಳ ಹಾಗೂ ಸಹೃದಯಿ ವ್ಯಕ್ತಿತ್ವದ ಜನನಾಯಕ ಆರಗ ಜ್ಞಾನೇಂದ್ರರವರು ಗೃಹ ಸಚಿವರಾಗಿ ಆಯ್ಕೆಯಾಗಿರುವುದು ಸಮಾಜಕ್ಕೆ ಹರ್ಷ ತಂದಿದೆ ಎಂದು ಹೊಸನಗರ ತಾಲೂಕಿನ ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಎಂ ಬಿ ಲಕ್ಷಣಗೌಡ ಹೇಳಿದ್ದಾರೆ. ಕಳೆದ 45 ವರ್ಷಗಳಿಂದ ಸಂಘ ಪರಿವಾರದಲ್ಲಿ ಸಕ್ರೀಯ ನಾಯಕರಾಗಿದ್ದು 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 4 ಬಾರಿ ಶಾಸಕರಾಗಿ ಎಂದಿಗೂ ಅಧಿಕಾರಕ್ಕಾಗಿ ಲಾಭಿ ನಡೆಸದೇ ಇದ್ದ ಜನನಾಯಕನಿಗೆ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಗೃಹ ಸಚಿವರಾಗಿ…

Read Full News

ಹೊಸನಗರ :ಸಾರ್ವಜನಿಕ ಆಸ್ಪತ್ರೆಯಲ್ಲೆ ನೇಣಿಗೆ ಶರಣಾದ ರೋಗಿ:

ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾರೋಗ್ಯ ನಿಮಿತ್ತ ದಾಖಲಾಗಿದ್ದ  ಸೊನಲೆಯ ರೋಗಿಯೊಬ್ಬ ಆಸ್ಪತ್ರೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೊನಲೆಯ ವಾಸಿ ಕೃಷಿಕ ವೃತ್ತಿ ಮಾಡಿಕೊಂಡಿದ್ದ ಜಗದೀಶ್ (50) ಎಂಬುವವರು ಅನಾರೋಗ್ಯ ನಿಮಿತ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು,ಶನಿವಾರ ಮಧ್ಯರಾತ್ರಿ ತಾನು ಮಲಗಿದ್ದ ಕೊಠಡಿಯಿಂದ ಹೊರಬಂದ ಜಗದೀಶ್ ಸಾರ್ವಜನಿಕ ಆಸ್ಪತ್ರೆ ಎರಡನೆ ಅಂತಸ್ತಿಗೆ ತೆರಳುವ ಮೆಟ್ಟಿಲುಗಳಿಗೆ ಅಳವಡಿಸಿದ ಸರಳುಗಳಿಗೆ ತಾನು ಧರಿಸಿದ ಲುಂಗಿಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ….

Read Full News

ಚಂದ್ರಗುತ್ತಿ: ರೇಣುಕಾಂಬ ದೇವಸ್ಥಾನದ ಪ್ರಧಾನ ಅರ್ಚಕರಾದ ಅರ್ಚಕ್ ದತ್ತಾತ್ರೇಯ ಭಟ್ ನಿಧನ:

ಚಂದ್ರಗುತ್ತಿ: ಇಲ್ಲಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಅರ್ಚಕ್ ದತ್ತಾತ್ರೇಯ ಭಟ್ (80) ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಶನಿವಾರ ತೀವ್ರವಾದ ಎದೆನೋವು ಕಾಣಿಕೊಂಡಿತ್ತು, ತಕ್ಷಣವೇ ಶಿರಸಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಮೃತರು ಪುತ್ರರಾದ ಅರ್ಚಕ ಅರವಿಂದ್ ಭಟ್, ಅರ್ಚಕ ನಿರಂಜನ್ ಭಟ್ ಸೇರಿದಂತೆ ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸಂತಾಪ:  ಶ್ರೀ…

Read Full News

ರಿಪ್ಪನ್ ಪೇಟೆ : ಜಿಲ್ಲೆಯ ನೂತನ ಸಚಿವರುಗಳಿಗೆ ಅದ್ದೂರಿ ಸ್ವಾಗತ

ರಿಪ್ಪನ್ ಪೇಟೆ: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ಮೊದಲ ಬಾರಿಗೆ ರಿಪ್ಪನ್ ಪೇಟೆಗೆ ಆಗಮಿಸಿದ ಶಿವಮೊಗ್ಗ ಉಸ್ತುವಾರಿ ಸಚಿವರಾದ ಕೆಎಸ್ ಈಶ್ವರಪ್ಪನವರು ಹಾಗೂ ಪ್ರಪ್ರಥಮವಾಗಿ ಸಚಿವರಾಗಿರುವ ಆರಗ ಜ್ಞಾನೇಂದ್ರ ರವರನ್ನು ರಿಪ್ಪನ್ ಪೇಟೆಯ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಡಗರದಿಂದ ಪಟಾಕಿ ಸಿಡಿಸಿ,ಸಾರ್ವಜನಿಕರಿಗೆ ಸಿಹಿ ಹಂಚಿ ಬರಮಾಡಿಕೊಂಡರು. ರಿಪ್ಪನ್ ಪೇಟೆಯ ವಿನಾಯಕ ವೃತ್ತಕ್ಕೆ ಬಂದಿಳಿದ ಸಚಿವರುಗಳು ಅದ್ದೂರಿ ಸ್ವಾಗತ ಸ್ವೀಕರಿಸಿದ ನಂತರ ಗ್ರಾಮ ಪಂಚಾಯತ್ ವರೆಗೂ ಮೆರವಣಿಗೆ ಮೂಲಕ ಬಂದ ಸಚಿವರುಗಳಿಗೆ ರಿಪ್ಪನ್ ಪೇಟೆ ಗ್ರಾಮ…

Read Full News

ಧರೆ ಕುಸಿತ ಪ್ರದೇಶಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ:

ರಿಪ್ಪನ್ ಪೇಟೆ: ಮಲೆನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಬಾರಿ ಮಳೆಗೆ ವಿಪರೀತ ಹಾನಿಯಾಗಿತ್ತು ಈ ಹಿನ್ನಲೆ ಯಲ್ಲಿ  ಹೊಸನಗರ ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ದೊಂಬೆಕೊಪ್ಪದ  ಗ್ರಾಮದ ಹುಚ್ಚಪ್ಪ ನವರ ಮನೆ ಸಮೀಪದಲ್ಲಿ ಅತಿವೃಷ್ಟಿಯಿಂದ ಧರೆ ಕುಸಿದಿರುವ ಪ್ರದೇಶಕ್ಕೆ ಎಂಐಎಸ್ಎಲ್ ಅಧ್ಯಕ್ಷ ಹಾಗು ಸಾಗರ ವಿಧಾನ ಸಭೆ ಶಾಸಕ ಹರತಾಳು ಹಾಲಪ್ಪನವರು ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. ಈ…

Read Full News

ಇಂದಿನಿಂದ ರಾಜ್ಯಾದ್ಯಂತ ವೀಕೆಂಡ್ ಕರ್ಫ಼್ಯೂ ಜಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:  ರಾಜ್ಯದಲ್ಲಿ ಕೊರೋನಾ 3ನೇ ಅಲೆ ಭೀತಿ ಇತ್ತೀಚೆಗೆ ಏರುಗತಿಯಲ್ಲಿ ಸಾಗಲು ಆರಂಭಿಸಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು ಕೋವಿಡ್ ಟಫ್ ರೂಲ್ಸ್ ಜಾರಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇನ್ನು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿದೆ…

Read Full News

ಭದ್ರಾವತಿ ಮಹಿಳಾ ಸಮಾಜದಿಂದ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ:

ಭದ್ರಾವತಿ:ಕರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ನೆರೆವೆರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳನ್ನು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.      ಕರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರೆವೇರಿಸಲು ಕುಟುಂಬ ವರ್ಗದವರೇ ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಅದರಲ್ಲೂ ಉಚಿತವಾಗಿ ಮೃತ ದೇಹಗಳ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಾಗಿ ನಿಂತಿರುವ ಬಜರಂಗದಳ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದ್ದು, ಈ ಯುವಕರ ಸೇವೆಯನ್ನು ನಗರದ ವಿವಿಧ ಸಂಘ-ಸಂಸ್ಥೆಗಳು…

Read Full News

ರಿಪ್ಪನ್ ಪೇಟೆ: ಬ್ಯಾಂಕಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ: ರಾಮ ನಾಯಕ್

 ರಿಪ್ಪನ್ ಪೇಟೆ: ಕೆನರಾ ಬ್ಯಾಂಕ್ ರಾಷ್ಟ್ರದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿದ್ದು. ವಾಣಿಜ್ಯ ಕೃಷಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ  ಗಣನೀಯ ಸೇವೆಯನ್ನು ನೀಡುತ್ತಿದೆ ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರಾಮ ನಾಯಕ್ ಹೇಳಿದರು.  ಶುಕ್ರವಾರ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ನೂತನವಾಗಿ ನಿರ್ಮಿಸಲಾದ ಬಂಗಾರ ಸಾಲದ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆನರಾ ಬ್ಯಾಂಕ್ ಗ್ರಾಹಕರ ಪರವಾಗಿ ಹಗಲಿರುಳು ಶ್ರಮಿಸುತ್ತಿದ್ದು ಎಲ್ಲ ಗ್ರಾಹಕರಿಗೂ ಬ್ಯಾಂಕಿನ ಸೌಲಭ್ಯಗಳು ಸಿಗಲೇಬೇಕೆಂಬ ಸದುದ್ದೇಶದಿಂದ  ಕಾರ್ಯನಿರ್ವಹಿಸುತ್ತಿದೆ. ಕೇಂದ್ರ…

Read Full News

ಕೊಳಕು ಮಂಡಲ ಹಾವು ಕಚ್ಚಿ ಜೀವನದ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸರಗುಂದದ ಬಡ ವಿದ್ಯಾರ್ಥಿಯ ಬದುಕು:

ಆನಂದಪುರ: ಓದಿ ಜೀವನದಲ್ಲಿ ಉನ್ನತ ಹುದ್ದೆಗೇರುವ ಕನಸು ಕಂಡಿದ್ದಂತಹ ವಿದ್ಯಾರ್ಥಿಯ ಬದುಕಲ್ಲಿ ಇದೀಗ ಕತ್ತಲು ಆವರಿಸಿದಂತಾಗಿದೆ. ಇತರ ವಿದ್ಯಾರ್ಥಿಗಳಂತೆ ಆಟ ಪಾಠ ಕಲಿಯೋಣವೆಂದರೆ ನಡೆಯಲು ಬಾರದ ಪರಿಸ್ಥಿತಿಗೆ ಈ ವಿದ್ಯಾರ್ಥಿ ಈಗ ತಲುಪಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದನ ಎಂಬ ಹತ್ತನೇ ತರಗತಿ ಓದುತ್ತಿದ್ದ ಆ ವಿದ್ಯಾರ್ಥಿ ಮನೆಯ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕೊಳಕುಮಂಡಲ ಹಾವು ಕಚ್ಚಿ ಇದೀಗ ಕಾಲು ಕೊಳೆಯುವಂತಹ ಸ್ಥಿತಿ ಬಂದಿದೆ. ಮನೆಯಲ್ಲಿ ನೋಡಿದರೆ ಆರ್ಥಿಕ ಸ್ಥಿತಿ…

Read Full News

ರಿಪ್ಪನ್ ಪೇಟೆ: ಅನೈತಿಕ ಚಟುವಟಿಕೆಯ ತಾಣವಾದ ಸ್ತ್ರೀಶಕ್ತಿ ಸಮುದಾಯ ಭವನ.

ರಿಪ್ಪನ್ ಪೇಟೆ: ಪಟ್ಟಣಕ್ಕೆ  ಹೊಂದಿಕೊಂಡಂತೆ ಇರುವ ದೊಡ್ಡಿನಕೊಪ್ಪ ಬಡಾವಣೆಯಲ್ಲಿರುವ ಸ್ತ್ರೀಶಕ್ತಿ ಸಮುದಾಯಭವನ ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಯ ತಾಣವಾಗಿದೆ.ಲಕ್ಷಾಂತರ ರೂಪಾಯಿ ಮೊತ್ತದ ಅನುದಾನದಲ್ಲಿ ತಲೆಯೆತ್ತಿ ನಿಂತ  ಸ್ತ್ರೀ ಶಕ್ತಿ ಸಮುದಾಯಭವನ ಇದೀಗ ಪಾಳುಬಿದ್ದು ಹಾಗೂ ಪುಡಾರಿಗಳ ನೆಚ್ಚಿನ ಅನೈತಿಕ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 2011-12ರಲ್ಲಿ ಅಂದಿನ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣರವರ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀ ಶಕ್ತಿ ಸಮುದಾಯ ಭವನವನ್ನು  ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿತ್ತು. ಈಗ ಸ್ತ್ರೀಶಕ್ತಿ…

Read Full News

ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ನಾಳೆ ರಿಪ್ಪನ್ ಪೇಟೆಗೆ:

ರಿಪ್ಪನ್ ಪೇಟೆ : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಕೆ ಎಸ್ ಈಶ್ವರಪ್ಪ ರವರು ನಾಳೆ ರಿಪ್ಪನ್ ಪೇಟೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಈಶ್ವರಪ್ಪರವರು ರಿಪ್ಪನ್ ಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ವರದಿ : ಸಬಾಸ್ಟಿನ್ ಮ್ಯಾಥ್ಯೂಸ್‌…

Read Full News

ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಕುಗ್ರಾಮದ ಗ್ರಾಮಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ:

ಹೊಸನಗರ: ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕುಗ್ರಾಮದಲ್ಲಿ ಗ್ರಾಮಸ್ಥರು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಗದ್ದೆಯಂತಾದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆಯನ್ನು ನಡೆಸಿದ ಘಟನೆ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದಗದ್ದೆ, ನೀರೇರಿ  ಎಂಬ ಅವಳಿ ಗ್ರಾಮದಲ್ಲಿ ನಡೆದಿದೆ. ಒಂದಗದ್ದೆ ಹಾಗೂ ನೀರೇರಿ ಗ್ರಾಮಗಳು ಅವಳಿ ಗ್ರಾಮಗಳಾಗಿವೆ. ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.  ಈ ಮೂಲಭೂತ ಸೌಕರ್ಯಗಳ…

Read Full News

ಈಡೇರಿದ ತೀರ್ಥಹಳ್ಳಿ ಜನತೆಯ ಬಹುದಿನಗಳ ಕನಸು :ಸಚಿವರಾಗಿ ಆರಗ ಜ್ಞಾನೇಂದ್ರ ಇಂದು ಪ್ರಮಾಣ ವಚನ ಸ್ವೀಕಾರ

  ತೀರ್ಥಹಳ್ಳಿ: ಶಾಸಕ ಆರಗ ಜ್ಞಾನೇಂದ್ರರಿಗೆ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ದೊರೆತಿದ್ದು ಇಂದು ಮಧ್ಯಾಹ್ನ 2.15 ಕ್ಕೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ವಿಷಯವನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುವಾಗ ಜ್ಞಾನೇಂದ್ರ ರವರು ತುಂಬಾ ಭಾವುಕರಾಗಿದ್ದರು.ಸಚಿವ ಸ್ಥಾನಕ್ಕಾಗಿ ಯಾವುದೇ ಲಾಭಿ ಮಾಡದ ಜನನಾಯಕನಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಇದೇ ಮೊದಲ ಬಾರಿಗೆ ಸಚಿವರಾಗಿ ಅರಗ ಜ್ಞಾನೇಂದ್ರರವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾಗಿ 4 ಬಾರಿ…

Read Full News

ಪೋಸ್ಟ್ ಮ್ಯಾನ್ ನ್ಯೂಸ್ ನ ಬಿಗ್ ಇಂಪ್ಯಾಕ್ಟ್: ವರದಿ ನೋಡಿ ತಕ್ಷಣ ಎಚ್ಚೆತ್ತ ಅಧಿಕಾರಿಗಳು:

ಸಾಗರ: ಕಳೆದ 3ದಿನಗಳ ಹಿಂದೆ ನಿಮ್ಮ ನೆಚ್ಚಿನ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಸಾಗರದ ಪೋಲಿಸ್ ಇಲಾಖೆಯ ವಸತಿಗೃಹಗಳು ಕಾಡಿನಂತಾಗಿವೆ ಎಂಬ ಶೀರ್ಷಿಕೆಯಡಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಸುದ್ದಿ ಪ್ರಸರಣದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದೀಗ ಪೋಲಿಸ್ ವಸತಿಗೃಹಗಳಿಗೆ ಹೊಸ ಜೀವಕಳೆಯನ್ನು ನೀಡುತ್ತಿದ್ದಾರೆ.ಸುತ್ತಮುತ್ತಲ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಮುಂದೆ ಉಂಟಾಗುತ್ತಿದ್ದ ರೋಗರುಜಿನಗಳಿಗೆ ಇದೀಗ ಕಡಿವಾಣ ಹಾಕಿದಂತಾಗಿದೆ. ಸಾಮಾಜಿಕ ಸಮಸ್ಯೆಗಳನ್ನು ಅರಿತ ಪೋಸ್ಟಮನ್ ನ್ಯೂಸ್ ತಂಡ ಅಧಿಕಾರಿಗಳನ್ನ ಎಚ್ಚೆತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದರಿಂದ ಪೊಲೀಸ್ ವಸತಿಗೃಹದ ಸುದ್ದಿಯನ್ನು ಬಿತ್ತರಿಸಿ ಅಧಿಕಾರಿಗಳು…

Read Full News

ಭದ್ರೆ ಪ್ರತಿ ಬಾರಿ ಪೂರ್ಣ ಪ್ರಮಾಣದಲ್ಲಿ ತುಂಬಲಿ, ಕೊನೆಯ ಭಾಗದ ರೈತರಿಗೂ ನೀರು ತಲುಪಲಿ : ಬಿ ಕೆ ಸಂಗಮೇಶ್ವರ್

ಭದ್ರಾವತಿ : ಕ್ಷೇತ್ರದ ಶಾಸಕ ಬಿ ಕೆ ಸಂಗಮೇಶ್ವರ್ ಮಂಗಳವಾರ ಸರ್ವ ಧರ್ಮ ಗುರುಗಳ ಹಾಗು ಕಾರ್ಯಕರ್ತರು ಅಭಿಮಾನಿಗಳು ಮತ್ತು ಮುಖಂಡರ ಸಮ್ಮುಖದಲಿ ಭದ್ರಾ ಜಲಾಶಯದಲ್ಲಿ ಭದ್ರೆಗೆ ಬಾಗಿನ ಸಮರ್ಪಣೆ ಹಾಗು ಗಂಗೆ ಪೂಜೆ ನೆರೆವೇರಿಸಿದರು.  ತಾಲೂಕಿನ ಜೀವನದಿಯಾದ ಭದ್ರಾ  ಜಲಾಶಯ ಪ್ರತಿ ವರ್ಷ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಮೂಲಕ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತಾಗಲಿ ಎಂದು ಶಾಸಕ ಬಿ ಕೆ ಸಂಗಮೇಶ್ವರ್ ಹೇಳಿದರು.    ಅವರು ಮಂಗಳವಾರ ಸರ್ವ ಧರ್ಮ ಗುರುಗಳ ಹಾಗು ಕಾರ್ಯಕರ್ತರು,…

Read Full News

ತೀರ್ಥಹಳ್ಳಿ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಕುಸಿತ:

ತೀರ್ಥಹಳ್ಳಿ: ಶಿವಮೊಗ್ಗದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ತೀರ್ಥಹಳ್ಳಿಯ ಭಾರತಿಪುರ ಎಂಬಲ್ಲಿ ಅಪಾಯಕಾರಿಯಾಗಿ ಕುಸಿದಿದೆ.  ಈ ಮಾರ್ಗವಾಗಿ ಅತಿಭಾರದ ವಾಹನಗಳು ಓಡಾಡುವುದರಿಂದ ರಸ್ತೆ ಇನ್ನಷ್ಟು ಕುಸಿದು ಜೀವಹಾನಿಯಾಗಬಹುದು ಮತ್ತು ರಸ್ತೆಯ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳಲೂಬಹುದು.  ರಸ್ತೆಯ ಪಕ್ಕದಲ್ಲಿರುವ ತೋಟಗಳ ಮಾಲಿಕರು ತೋಟಗಳಿಗಾಗಿ ಮಣ್ಣು ತೆಗೆದ ಪರಿಣಾಮವಾಗಿ ರಸ್ತೆ ಕುಸಿತ ಕಂಡಿದೆ ಎಂಬುದು ಸ್ಥಳೀಯರ ಮಾತು. ಹೆಚ್ಚು ಮಳೆಯಾಗುವ ಪ್ರದೇಶಗಳು ಹಾಗು ಮಲೆನಾಡಿನಲ್ಲಿ ರಸ್ತೆಯ ಪಕ್ಕದ ಗುಡ್ಡಗಳು ಮಳೆಗಾಲದಲ್ಲಿ ಕುಸಿಯುವುದು…

Read Full News

ಸಹೃದಯಿ ಶಾಸಕ ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಿ: ಸಿಗಂದೂರು ಧರ್ಮದರ್ಶಿ ರಾಮಪ್ಪ

ಸೊರಬ:ಬಸವರಾಜ ಬೊಮ್ಮಾಯಿರವರ ನೂತನ ಸಚಿವ ಸಂಪುಟದಲ್ಲಿ ಶಾಸಕರಾದ ಕುಮಾರ್ ಬಂಗಾರಪ್ಪನವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಸಿಗಂದೂರು ದೇವಸ್ಥಾನದ ಧರ್ಮದರ್ಶಿಗಳಾದ ರಾಮಪ್ಪನವರ ನೇತ್ರತ್ವದಲ್ಲಿ ಶಾಸಕರ ಬೆಂಬಲಿಗರೊಂದಿಗೆ ಸೊರಬದ  ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ ಮಾತನಾಡಿದ ಧರ್ಮದರ್ಶಿಗಳಾದ ರಾಮಪ್ಪನವರು ಸಹೃದಯಿ ಜನರ ಕಷ್ಟಕ್ಕೆ ಸ್ಪಂದಿಸುವ ಶಾಸಕ ಕುಮಾರ್ ಬಂಗಾರಪ್ಪನವರಿಗೆ ಸಚಿವ ಸ್ಥಾನ ಸಿಗಲಿ ಎಂದು ಸ್ವಾಮಿಯಲ್ಲಿ ಬೇಡಿಕೊಂಡೆವು, ಅವರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದೇವೆ…

Read Full News

ಕೊರೊನಾ ಭೀತಿ: ಆಗುಂಬೆ ಚೆಕ್ ಪೋಸ್ಟ್ ಬಿಗಿಗೊಳಿಸಲು ಮುಖ್ಯಮಂತ್ರಿಗಳಿಂದ ಆದೇಶ:

ತೀರ್ಥಹಳ್ಳಿ: ಕರಾವಳಿ ಭಾಗ ಹಾಗೂ ಕೇರಳದೊಂದಿಗೆ ನಿಕಟ ಸಂಪರ್ಕ ಹೊಂದಿರುವ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಥಹಳ್ಳಿಯಲ್ಲಿ ಕೊರೋನಾ ತಪಾಸಣಾ ಕೇಂದ್ರ ಸ್ಥಾಪಿಸಲು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಅನುಮತಿ ನೀಡಿದ್ದಾರೆ.  ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಇನ್ನೂ ಕೂಡಾ ಕೋವಿಡ್ ಸಂಪೂರ್ಣ ಹತೋಟಿಗೆ ಬಾರದಾಗಿದೆ ಜತೆಗೆ ಮೂರನೆಯ ಅಲೆ ಪ್ರಾರಂಭವಾಗುವ ಅನುಮಾನಗಳಿದ್ದು ತ್ವರಿತ ತಪಾಸಣೆ ಹಾಗೂ ಚಿಕಿತ್ಸೆಗೆ ಸರಕಾರ ಮಹತ್ವದ ಕ್ರಮ ಕೈಗೊಂಡಿದೆ. ಇದರ ಜತೆಗೆ ಆಗುಂಬೆಯಲ್ಲಿ ಚೆಕ್ ಪೋಸ್ಟ್…

Read Full News

ರಿಪ್ಪನ್ ಪೇಟೆ: ಶಾಸಕ ಹರತಾಳು ಹಾಲಪ್ಪರವರಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ ಸಮಾಜದವರಿಂದ ಒತ್ತಾಯ:

 ರಿಪ್ಪನ್‌ಪೇಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮಾಜಿ ಸಚಿವ, ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ರಿಪ್ಪನ್‌ಪೇಟೆ ವೀರಶೈವಲಿಂಗಾಯತ ಸಮಾಜದ ಮುಖಂಡರುಗಳಾದ ಮೆಣಸೆ ಆನಂದ,ಕಮದೂರು ರಾಜಶೇಖರ್, ಹೆಚ್.ಎಸ್.ರವಿ ಹಾಲುಗುಡ್ಡೆ, ನೆವಟೂರು ದೇವೇಂದ್ರಪ್ಪಗೌಡ, ಯೋಗೇಂದ್ರಗೌಡ, ಜಿ.ಡಿ ಮಲ್ಲಿಕಾರ್ಜುನ, ಕಳಸೆ ಗಂಗಾಧರಗೌಡ ಒತ್ತಾಯಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರುಗಳು ಹಾಲಪ್ಪನವರು ಹೊಸನಗರ-ಸಾಗರ-ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿ ಕಾರ್ಯನಿರ್ವಹಿಸಿದ್ದು ಅಲ್ಲದೆ ಶಾಸಕರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಜಾತಿ ಭೇದ ಭಾವ…

Read Full News

ನಾನು ಸಚಿವ ಸ್ಥಾನದ ಆಕಾಂಕ್ಷಿ,ಸಚಿವ ಸ್ಥಾನ ಕೊಟ್ಟರೆ ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯ ನನ್ನಲ್ಲಿದೆ : ಶಾಸಕ ಹರತಾಳು ಹಾಲಪ್ಪ

ರಿಪ್ಪನ್ ಪೇಟೆ: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ ಸಚಿವ ಸಂಪುಟದ ವಿಸ್ತರಣೆಯತ್ತ ಇದೀಗ ಎಲ್ಲರ ಚಿತ್ತ ಮೂಡುತ್ತಿದೆ.ಯಾರು ಯಾರಿಗೆ ಮಂತ್ರಿ ಸ್ಥಾನ ಒಲಿಯಲಿದೆ ಎಂಬುದು ಇದೀಗ ಎಲ್ಲರಲ್ಲೂ ಕಾಡುತ್ತಿರುವಂತಹ ಕುತೂಹಲ ಯಾವುದೇ ಶಾಸಕರನ್ನು ವಿಚಾರಿಸಿದಾಗ ನಾವು ಮಂತ್ರಿಯಾಗುವ ಆಸೆ ಹೊಂದಿದ್ದೇವೆ ಅವಕಾಶವೂ ಸಿಗುವ ಸಾಧ್ಯತೆಗಳು ಹೆಚ್ಚಿದೆ ಎಂದು ಹೇಳುವುದು ಇದೀಗ ಸಹಜವಾಗಿದೆ.   ಜಿಲ್ಲೆಯ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರತಾಳು ಹಾಲಪ್ಪನವರು ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮದಲ್ಲಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ …

Read Full News

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ: ಕಾಡಿನಂತಾಗಿದೆ ಸಾಗರದ ಪೊಲೀಸ್ ವಸತಿ ಗೃಹಗಳು:

ಸಾಗರ: ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ಕೋಟ್ಯಾಂತರ ರೂ ವೆಚ್ಚ ಮಾಡಿ ಸರ್ಕಾರ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿತ್ತು.ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ ಬೆಲೆಬಾಳುವ ಪೊಲೀಸ್ ವಸತಿ ಗೃಹಗಳು ಇದೀಗ ಕಾಡಿನ ಮಧ್ಯೆ ಇದೆ ಎಂಬಂತಾಗಿದೆ ಕಾರಣ ಸುತ್ತಮುತ್ತಲು ಕಾಡಿನಂತೆ ವಸತಿಗೃಹದ ಅರ್ಧಮಟ್ಟಿಗೆ  ಬೆಳೆದಿರುವ ಗಿಡಗಂಟಿಗಳು. ಅಧಿಕಾರಿಗಳು ಗಿಡಗಂಟಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಈ ವಸತಿಗೃಹಗಳ ಸೌಂದರ್ಯವೇ ಇದೀಗ ಪಾಳು ಬಿದ್ದಂತಿದೆ. ಸಾಗರದ ಹೃದಯ ಭಾಗದಲ್ಲಿ ಇರುವ ಈ ಪೊಲೀಸ್…

Read Full News

ಶೈಕ್ಷಣಿಕ ಸೇವೆ ಸಮಾಜದಲ್ಲಿನ ಅತ್ಯುತ್ತಮ ಸೇವೆ: ಶಾಸಕ ಹರತಾಳು ಹಾಲಪ್ಪ.

 ರಿಪ್ಪನ್ ಪೇಟೆ : ಶೈಕ್ಷಣಿಕ ಸೇವೆ ಸಮಾಜದಲ್ಲಿನ ಅತ್ಯುತ್ತಮ ಸೇವೆಯಾಗಿದ್ದು. ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ,ದಾರಿದೀಪವಾಗಿ ಮುನ್ನಡೆಸಿದ ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಸಮಾಜ ಗೌರವಿಸುತ್ತದೆ ಎಂದು ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಇಂದು ನಿವೃತ್ತರಾದ ಪ್ರೊ. ನಳಿನ್ ಚಂದ್ರ ಉಡುಪ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ  ಆಯೋಜಿಸಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರಿಗೂ ಸಹ ಸಮಾಜವು…

Read Full News

ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವಂತೆ ತೀರ್ಥಹಳ್ಳಿ ತಾಲೂಕು ಬಿಜೆಪಿ ಮುಖಂಡರಿಂದ ಒಕ್ಕೊರಲ ಮನವಿ:

ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ‌ ನೀಡುವಂತೆ ತಾಲೂಕಿನ 500ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು ಇಂದು ಸಂಸದರಾದ ಬಿ.ವೈ.ರಾಘವೇಂದ್ರರನ್ನುಶಿಕಾರಿಪುರದ ಪ್ರವಾಸಿಮಂದಿರದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.  ಸತತ 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 5 ಬಾರಿ ಶಾಸಕರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಆರಗ ಜ್ಞಾನೇಂದ್ರ ರವರು ಓರ್ವ ಹಿರಿಯ ಮುತ್ಸದ್ಧಿ ರಾಜಕಾರಣಿ.ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ತಾಲೂಕಿನಲ್ಲಿ ತಮ್ಮದೇ ಕಾರ್ಯಶೈಲಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವುದರಲ್ಲಿ ಸಿದ್ದ ಹಸ್ತರು.ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾ,ಪಕ್ಷ ಬಲವರ್ಧನೆಗೆ…

Read Full News

ತಾಳಗುಪ್ಪ: ಅರಣ್ಯೀಕರಣ ಮಾಡಿದ ಪ್ರದೇಶದಲ್ಲಿ ಘನತ್ಯಾಜ್ಯವಿಲೇವಾರಿ ಘಟಕಕ್ಕೆ ಗ್ರಾಮಸ್ಥರಿಂದ ವಿರೋಧ

 ಸಾಗರ: ಇಲ್ಲಿನ ತಾಳಗುಪ್ಪ ಹೋಬಳಿ ಕಾನಲೆ ಗ್ರಾಮದ ಸರ್ವೆ ನಂಬರ್  412 ರಲ್ಲಿ ಗ್ರಾಮಾಡಳಿತ  ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ತಯಾರಿ ನಡೆ ಸಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಹಿಂಡಲೆಕೊಪ್ಪ ಗ್ರಾಮಸ್ಥರು ಆರೋಪಿಸಿದ್ದಾರೆ.  ಈಗಾಗಲೇ ಜಾಗವನ್ನು ಗುರುತುಪಡಿಸಿ ನೀಲ ನಕ್ಷೆ ತಯಾರಿಸಿದೆ‌. ಆದರೆ ಕಾನ್ಲೆ ಗ್ರಾಮ ಸರ್ವೆ ನಂಬರ್ 412ರಸರ್ಕಾರಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಗುರುತಿಸಿರುವ ಜಾಗ ಹಿಂಡಲೇ ಕೊಪ್ಪ ಗ್ರಾಮದ ಕೂಗಳತೆಯ ದೂರದಲ್ಲಿ  ಇದ್ದು ಗ್ರಾಮಕ್ಕೆ ಅತ್ಯಂತ ಸಮೀಪವಿರುತ್ತದೆ. ಮತ್ತು ಈಗಾಗಲೇ ಅರಣ್ಯ ಇಲಾಖೆಯಿಂದ…

Read Full News

ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸರಳ ಆಚರಣೆ:

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಆಗಸ್ಟ್ 03 ರ ಮಂಗಳವಾರ ದಂದು ನಡೆಯುವ ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವನ್ನು ಕೊರೊನಾ ಕಾರಣದಿಂದಾಗಿ ರಾಜ್ಯ ಸರಕಾರದ ಆದೇಶದ ಅನ್ವಯ ಸರಳವಾಗಿ ಆಚರಣೆ ಮಾಡಲಾಗುವುದು ಎಂದು  ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಸವರಾಜ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಸವರಾಜ್ ರವರು  ಪೂರ್ವಿಕರು ನಡೆದು ಬಂದಂತಯೆ ನಾವುಗಳೂ ವರ್ಷಕ್ಕೆ ಎರಡು ಬಾರಿ ಜಾತ್ರೆ ಆಚರಿಸಿಕೊಂಡು ಬಂದಿದ್ದೇವೆ….

Read Full News