w
Headlines
Home » ಕೊಳಕು ಮಂಡಲ ಹಾವು ಕಚ್ಚಿ ಜೀವನದ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸರಗುಂದದ ಬಡ ವಿದ್ಯಾರ್ಥಿಯ ಬದುಕು:

ಕೊಳಕು ಮಂಡಲ ಹಾವು ಕಚ್ಚಿ ಜೀವನದ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಸರಗುಂದದ ಬಡ ವಿದ್ಯಾರ್ಥಿಯ ಬದುಕು:

ಆನಂದಪುರ: ಓದಿ ಜೀವನದಲ್ಲಿ ಉನ್ನತ ಹುದ್ದೆಗೇರುವ ಕನಸು ಕಂಡಿದ್ದಂತಹ ವಿದ್ಯಾರ್ಥಿಯ ಬದುಕಲ್ಲಿ ಇದೀಗ ಕತ್ತಲು ಆವರಿಸಿದಂತಾಗಿದೆ.
ಇತರ ವಿದ್ಯಾರ್ಥಿಗಳಂತೆ ಆಟ ಪಾಠ ಕಲಿಯೋಣವೆಂದರೆ ನಡೆಯಲು ಬಾರದ ಪರಿಸ್ಥಿತಿಗೆ ಈ ವಿದ್ಯಾರ್ಥಿ ಈಗ ತಲುಪಿದ್ದಾನೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸರಗುಂದ ಗ್ರಾಮದ ವಿದ್ಯಾರ್ಥಿ ಸ್ಕಂದನ ಎಂಬ ಹತ್ತನೇ ತರಗತಿ ಓದುತ್ತಿದ್ದ ಆ ವಿದ್ಯಾರ್ಥಿ ಮನೆಯ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಕೊಳಕುಮಂಡಲ ಹಾವು ಕಚ್ಚಿ ಇದೀಗ ಕಾಲು ಕೊಳೆಯುವಂತಹ ಸ್ಥಿತಿ ಬಂದಿದೆ.

ಮನೆಯಲ್ಲಿ ನೋಡಿದರೆ ಆರ್ಥಿಕ ಸ್ಥಿತಿ ಹೀನಾಯವಾಗಿದ್ದು ತಂದೆ ಕಳೆದ ಹತ್ತು ವರ್ಷಗಳಿಂದ ಬಿಪಿ ಶುಗರ್ ನಿಂದ ಹಾಸಿಗೆ ಹಿಡಿದಿದ್ದಾರೆ ಇದೀಗ ಜೀವನ ನಡೆಸಲು ಮಗ ಆಸರೆಯಾಗುತ್ತಾನೆ ಎಂಬ ತಂದೆತಾಯಿಯ ಕನಸಿಗೆ ಭಗ್ನವುಂಟಾಗಿದೆ.

ಇವರ ಸಹೋದರಿಯರು ಕೂಡ ಇನ್ನೂ ವಿದ್ಯಾರ್ಥಿಗಳಾಗಿದ್ದು ಮನೆಯ ಹೆಣ್ಣುಮಗಳು ದುಡಿದು ಈ ನಾಲ್ವರನ್ನು ಸಾಕುವಂತಹ ಪರಿಸ್ಥಿತಿಗೆ ಈಗ ಈ ಕುಟುಂಬ ತಲುಪಿದೆ.
ಮನೆಯಲ್ಲಿ ಒಂದೊಂದು ರೂಪಾಯಿಗೂ ಕೂಡ ಪರಿತಪಿಸುವಂತಹ ಪರಿಸ್ಥಿತಿ ಗೆ ಈ ಕುಟುಂಬ ಈಗ ತಲುಪಿದ್ದು ಈ ಹುಡುಗನ ಚಿಕಿತ್ಸೆಗೂ ಕೂಡ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

ಯಾರಾದರೂ ದಾನಿಗಳು ಸಹಾಯಕ್ಕೆ ಮುಂದಾದರೆ ಸಾಕು ಅನ್ನುವಂಥ ಪರಿಸ್ಥಿತಿಯಲ್ಲಿ ಈ ಕುಟುಂಬ ಈಗ ಪರಿತಪಿಸುತ್ತಿದೆ.
ಜನಪ್ರತಿನಿಧಿಗಳು ಹಾಗೂ ನೆರೆಹೊರೆಯವರು  ಈಗ ಈ ಕುಟುಂಬ ಆರ್ಥಿಕ ಸಹಾಯವನ್ನು ನೀಡುವಂತೆ ಅಂಗಲಾಚುತ್ತಿರುವ ದೃಶ್ಯವಂತೂ  ನಿಜಕ್ಕೂ ಮನ ಕಲಕುವಂತಿತ್ತು.


ಯಾರಾದರೂ ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವವರು ಈ ಖಾತೆ ಸಂಖ್ಯೆ ಹಾಗೂ ಗೂಗಲ್ ಪೇ ಸಂಖ್ಯೆಯನ್ನು ಸಂಪರ್ಕಿಸಿ.

NAGARATHNA.B.

3151108002280

CANARA BANK ANANDAPURA.

IFSC CODE: CNRB0003151

GOOGLE PAY : 7618731747.(SUSHMITHA.B )



ವರದಿ: ಪವನ್ ಕುಮಾರ್ ಕಠಾರೆ.





ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.