ರಿಪ್ಪನ್ ಪೇಟೆ: ಕೆನರಾ ಬ್ಯಾಂಕ್ ರಾಷ್ಟ್ರದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿದ್ದು. ವಾಣಿಜ್ಯ ಕೃಷಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ನೀಡುತ್ತಿದೆ ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರಾಮ ನಾಯಕ್ ಹೇಳಿದರು.
ಶುಕ್ರವಾರ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ನೂತನವಾಗಿ ನಿರ್ಮಿಸಲಾದ ಬಂಗಾರ ಸಾಲದ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆನರಾ ಬ್ಯಾಂಕ್ ಗ್ರಾಹಕರ ಪರವಾಗಿ ಹಗಲಿರುಳು ಶ್ರಮಿಸುತ್ತಿದ್ದು ಎಲ್ಲ ಗ್ರಾಹಕರಿಗೂ ಬ್ಯಾಂಕಿನ ಸೌಲಭ್ಯಗಳು ಸಿಗಲೇಬೇಕೆಂಬ ಸದುದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರವು ದೇಶದ ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ವಾಣಿಜ್ಯ ಶಿಕ್ಷಣ ಆರೋಗ್ಯ ಸೇರಿದಂತೆ ಇನ್ನಿತರ ಉದ್ದೇಶಗಳಿಗಾಗಿ ಸಾಲದ ಸೌಲಭ್ಯಗಳನ್ನು ನೀಡುವಂತೆ ಬ್ಯಾಂಕುಗಳಿಗೆ ಸೂಚಿಸಿದೆ. ಬ್ಯಾಂಕ್ ಗಳು ಸಹ ಗ್ರಾಹಕರ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರ ಸಂತೃಪ್ತಿಯೆ ಕೆನರಾ ಬ್ಯಾಂಕಿನ ಮೂಲ ಉದ್ದೇಶವಾಗಿದೆ ಎಂದರು.
ಗ್ರಾಹಕರ ಪರವಾಗಿ ಹೊಸನಗರ ತಾಲೂಕು ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್ ಎನ್ ಮಂಜುನಾಥ್ ಮಾತನಾಡಿ ಕೆನರಾ ಬ್ಯಾಂಕ್ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ತೃಪ್ತಿ ಇದೆ ಆದರೆ ಅಲ್ಲಿನ ಕೆಲಸಕಾರ್ಯಗಳು ನಿಗದಿತ ಸಮಯದಲ್ಲಿ ನಡೆಯುತ್ತಿಲ್ಲ. ಈ ಬಗ್ಗೆ ಬ್ಯಾಂಕಿನವರು ಗಮನಹರಿಸಬೇಕು. ರೈತರುಗಳಿಗೆ ಮತ್ತು ಕೃಷಿಕರಿಗೆ ಸಕಾಲದಲ್ಲಿ ಸಾಲದ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡೆಪ್ಯೂಟಿ ಮ್ಯಾನೇಜರ್ ಸಂದೀಪ್. ಪೂರ್ಣಿಮ ಎನ್ ರಾವ್. ಚೀಫ್ ಮ್ಯಾನೇಜರ್ ಪ್ರದೀಪ್. ಬಾಲ ರಾಜ್. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ. ಕೆನರಾ ಬ್ಯಾಂಕಿನ ಕೃಷಿ ವಿಭಾಗದ ಮ್ಯಾನೇಜರ್ ಸೋಮಶೇಖರ್. ಸುರೇಂದ್ರ ಹಾಗೂ ರಿಪ್ಪನ್ ಪೇಟೆ ಕೆನರಾ ಬ್ಯಾಂಕಿನ ರಾಮಕೃಷ್ಣ ಮತ್ತು ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಸಬಾಸ್ಟಿನ್ ಮ್ಯಾಥ್ಯೂಸ್ ರಿಪ್ಪನ್ ಪೇಟೆ