ರಿಪ್ಪನ್ ಪೇಟೆ: ಮಲೆನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಬಾರಿ ಮಳೆಗೆ ವಿಪರೀತ ಹಾನಿಯಾಗಿತ್ತು ಈ ಹಿನ್ನಲೆ ಯಲ್ಲಿ
ಹೊಸನಗರ ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬೆಕೊಪ್ಪದ ಗ್ರಾಮದ ಹುಚ್ಚಪ್ಪ ನವರ ಮನೆ ಸಮೀಪದಲ್ಲಿ ಅತಿವೃಷ್ಟಿಯಿಂದ ಧರೆ ಕುಸಿದಿರುವ ಪ್ರದೇಶಕ್ಕೆ ಎಂಐಎಸ್ಎಲ್ ಅಧ್ಯಕ್ಷ ಹಾಗು ಸಾಗರ ವಿಧಾನ ಸಭೆ ಶಾಸಕ ಹರತಾಳು ಹಾಲಪ್ಪನವರು ಇಂದು ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ಈ ಸಂದರ್ಭ ದಲ್ಲಿ ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ವೀರೇಶ್ ಅಲವಳ್ಳಿ,ಹರತಾಳು ರಾಮಚಂದ್ರ,ಗಣೇಶ್ ಟೈಲರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸಬಾಸ್ಟಿನ್ ಮ್ಯಾಥ್ಯೂಸ್ ರಿಪ್ಪನ್ ಪೇಟೆ