ಮುಂದುವರೆದ ವರುಣನ ಆರ್ಭಟ : ಮಾರುತಿಪುರ , ಕುಕ್ಕಳಲೆಯಲ್ಲಿ ಮನೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು | Rain

ಮುಂದುವರೆದ ವರುಣನ ಆರ್ಭಟ : ಮಾರುತಿಪುರ , ಕುಕ್ಕಳಲೆಯಲ್ಲಿ ಮನೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು | Rain


ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಭಾರಿ ಮಳೆಗೆ ಹೊಸನಗರ ತಾಲೂಕಿನ ಮನೆ ಹಾನಿ ಹಾಗೂ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಘಟನೆಗಳು ನಡೆದಿದೆ.

 ಘಟನೆ 1:

ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಟ್ಟಮ್ಮ ಕೋಂ ನಾಗರಾಜ್ ಅವರ ಮನೆ ಬಾರಿ ಮಳೆ ಯಿಂದಾಗಿ ಗೋಡೆ ಕುಸಿತವಾಗಿತ್ತು.


ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಬೇಟಿ ನೀಡಿ ಪುಟ್ಟಮ್ಮ ಕುಟುಂಬದವರಿಗೆ ಸಾಂತ್ವನ ಹೇಳಿ ಶಾಸಕರ ಪರವಾಗಿ  ಆರ್ಥಿಕ ನೆರವು ನೀಡಿದರು.


ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನ ಸಮಿತಿ ಅಧ್ಯಕ್ಷರಾದ ಚಿದಂಬರ್ ಮಾರುತಿ ಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೀಪಿಕಾ ಕೃಷ್ಣ , ಮಾಜಿ ಉಪಾಧ್ಯಕ್ಷರಾದ ಜಯಮ್ಮ ಗ್ರಾಮ ಪಂಚಾಯತ್, ಸದಸ್ಯರಾದ ಇಂದ್ರೇಶ್ ಹೊಸಕೆರೆ ಉಪಸ್ಥಿತರಿದ್ದರು.

ಘಟನೆ 2 : 

ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕುಕ್ಕಳಲೆ ಗ್ರಾಮದ ಸಾವಿತ್ರಮ್ಮ ಎಂಬುವವರ ಮನೆ ಮಳೆಗೆ ಹಾನಿಯಾಗಿತ್ತು.


ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು , ಗ್ರಾಪಂ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *