ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು – ಎಚ್ ಆರ್ ಕೃಷ್ಣಮೂರ್ತಿ | Madapura

ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು – ಎಚ್ ಆರ್ ಕೃಷ್ಣಮೂರ್ತಿ

ರಿಪ್ಪನ್‌ಪೇಟೆ : ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸರ್ಕಾರ ನೀಡುವ ಸವಲತ್ತುಗಳು ಹಾಗೂ ದಾನಿಗಳು ನೀಡುವ ಸವಲತ್ತುಗಳನ್ನು ಬಳಸಿಕೊಂಡು ಶಾಲೆಗಳಲ್ಲಿ ಶಿಕ್ಷಕರು ಮಾಡುವ ಪಾಠ ಪ್ರವಚನಗಳನ್ನು ಕೇಳಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಕೃಷ್ಣಮೂರ್ತಿ ಹೇಳಿದರು.


ರಿಪ್ಪನ್‌ಪೇಟೆ ಸಮೀಪದ ಮಾದಾಪುರ ಸರ್ಕಾರಿ ಶಾಲೆಯಲ್ಲಿ ಅಯೋಜಿಸಲಾದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ,ಬೆಂಗಳೂರಿನ ಯುವ ಟ್ರಸ್ಟ್ ವತಿಯಿಂದ ಕಲಿಕಾ ಸಾಮಾಗ್ರಿ ವಿತರಣೆ ಹಾಗೂ ನಲಿಕಲಿ ಕ್ರೀಯಾಶೀಲಾ ತಾರೆಯರ ಬಳಗದಿಂದ ಉಚಿತ ಕಂಪ್ಯೂಟರ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡಲು ಲಕ್ಷಾಂತರ ರೂಗಳು ಖರ್ಚು ಮಾಡುತ್ತಿದೆ ಪ್ರತಿಯೊಬ್ಬ ಪೋಷಕರು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದರ ಮೂಲಕ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹೊಂದಲು ಸಹಕರಿಸುವಂತೆ ಹೇಳಿದರು.


ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಕ್ಷಣದ ಜತೆ ಒಳ್ಳೆಯ ಸಂಸ್ಕಾರ ಕೂಡ ಅವಶ್ಯಕ. ಇಂದಿನ ವಿದ್ಯಾರ್ಥಿಗಳು ಓದಿನ ಕಡೆ ಆಸಕ್ತಿ ವಹಿಸದೇ ಮೊಬೈಲ್‌ ದಾಸರಾಗುತ್ತಿದ್ದು, ಅವರಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಇದನ್ನು ತಡೆಗಟ್ಟುವಲ್ಲಿ ಪಾಲಕರು ಹಾಗೂ ಶಿಕ್ಷ ಕರ ಪಾತ್ರ ಬಹುಮುಖ್ಯ ಎಂದರು.

ರಾಜ್ಯಪ್ರಶಸ್ತಿ ಪುರಸ್ಕೃತೆ ಶಿಕ್ಷಕಿ ಪೌಜಿಯಾ ಸರವತ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಬಡ ಕುಟುಂಬಗಳ ಮಕ್ಕಳೇ ಸರಕಾರಿ ಶಾಲೆಗೆ ಆಗಮಿಸುತ್ತಿದ್ದು, ನೋಟ್ ಬುಕ್ ಸೇರಿದಂತೆ ಇತರ ಶಾಲಾ ಸಾಮಗ್ರಿ ದೊರೆತಾಗ ಅವರ ಕಲಿಕೆಗೆ ಅನುಕೂಲವಾಗುತ್ತದೆ.ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ದೇಶ ಉತ್ತಮ ಪಥದಲ್ಲಿ ಸಾಗಬೇಕಾದರೆ ಪ್ರತಿಯೊಬ್ಬರೂ ಶಿಕ್ಷತರಾಗಬೇಕು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಸಮಾಜದಿಂದ ಆಗಬೇಕು ಆ ನಿಟ್ಟಿನಲ್ಲಿ ನಲಿಕಲಿ ಕ್ರೀಯಾಶೀಲಾ ತಾರೆಯರ ಬಳಗ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಅವಶ್ಯವಾದ ಸಾಮಗ್ರಿಗಳನ್ನು ವಿತರಿಸುತ್ತಾ ಬಂದಿದೆ ಎಂದರು.


ಮಾದಪುರ ಸರ್ಕಾರಿ ಶಾಲೆಗೆ ಶಿಕ್ಷಣ ಇಲಾಖೆಯಿಂದ 50,000 ಅನುದಾನದಲ್ಲಿ ಪ್ರಾಜೆಕ್ಟರ್, ಹೋಂ ಥಿಯೇಟರ್, ಕ್ರೀಡಾ ಸಾಮಗ್ರಿಗಳು ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯಾಯಿತು.

ಈ ಸಂದರ್ಭದಲ್ಲಿ ನಲಿಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ ಇವರ ಸಹಕಾರದಿಂದ  ಹೊಸನಗರ ತಾಲೂಕಿನ ಸಮೂಹ ಸಂಪನ್ಮೂಲ ಕೇಂದ್ರ ಅರಸಾಳು ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊರಬೈಲು.ಶಿವಮೊಗ್ಗ ತಾಲ್ಲೂಕಿನ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲಿಂಗಪುರ, ಸಾಗರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬನಶಂಕರಿ ಬಡಾವಣೆ ಹಾಗೂ ಸೊರಬ ತಾಲ್ಲೂಕಿನ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿತ್ರಟ್ಟಿಹಳ್ಳಿ ಕುದುರೆ ಗಣಿ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಕರವಳ್ಳಿ  ಶಾಲೆಗಳಿಗೆ ಕಂಪ್ಯೂಟರ್ ಗಳನ್ನು ವಿತರಿಸಲಾಯಿತು.

ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದಾಪುರ, ಹೊಸನಗರ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಡೆಗದ್ದೆ, ಸೊರಬ ತಾಲ್ಲೂಕು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಕುರ್ಚಿ,ಶಿವಮೊಗ್ಗ ತಾಲೂಕು. ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾಳ್ವೆ ಸಾಗರ ತಾಲೂಕು ಈ ಶಾಲೆಗಳಿಗೆ ಶಾಲಾ ಕಿಟ್ ವಿತರಿಸಲಾಯಿತು.

ಇದೇ ಸಂಧರ್ಭದಲ್ಲಿ ನಲಿಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ ಇವರ ವತಿಯಿಂದ ಮಾದಾಪುರ ಗ್ರಾಮದ ಶತಾಯುಷಿ ಹುಚ್ಚಪ್ಪ ಇವರ ಜೀವನ ಶೈಲಿ ಹಾಗೂ ಸಮಾಜ ಸೇವೆ ಗುರುತಿಸಿ ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ವೃಕ್ಷ ಸ್ವಸಹಾಯ ಸಂಘದ ಮೊಹಮ್ಮದ್ ಜಫರ್ವುಲ್ಲಾ, ಶಿಕ್ಷಕಿಯಾದ ಭಾಗಿರಥಿ ಎಂ ,ಸವಿತಾ ಕೆ , ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆ ಅಂಕ ಪಡೆದ ಕುಮಾರಿ ಸಿಂಚನ ಎಂ ರವರಿಗೆ ಕ್ರೀಯಾಶೀಲ ಸೇವಾ ಪ್ರಶಸ್ತಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌,ಡಿ .ಎಂ .ಸಿ ಅಧ್ಯಕ್ಷರಾದ ಹಾಲಪ್ಪ ವಹಿಸಿದ್ದರು. 

ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಉಪಾಧ್ಯಕ್ಷರಾದ ರಮ್ಯ, ಸದಸ್ಯರಾದ ಕೃಷ್ಣೋಜಿರಾವ್ ಉರ್ದು ಶಿಕ್ಷಣ ಸಂಯೋಜಕ ಜಾಕೀರ್ ವೃಕ್ಷ ಸ್ವ ಸಹಾಯ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮೊಹಮ್ಮದ್ ಜಫರುಲ್ಲಾ ಮತ್ತು ಸದಸ್ಯರು, ನಲಿಕಲಿ ಕ್ರಿಯಾಶೀಲ ತಂಡದ ಗೌರವಾಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೈ ಎನ್ ಲಲಿತ,ಮಂಜುನಾಥ್ ಮಾದಾಪುರ , ಎಸ್. ಡಿ.ಎಂ.ಸಿ ಸದಸ್ಯರು, ಪೋಷಕರು ಹಾಗೂ ಸನ್ಮಾನಿತ ಸಾಧಕರು  ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ವೃಕ್ಷ ಸ್ವ ಸಹಾಯ ಸಂಘದ ವತಿಯಿಂದ ನಲಿಕಲಿ ಕ್ರಿಯಾಶೀಲಾ ತಾರೆಯರ ಚಟುವಟಿಕೆಗಳನ್ನು ಗಮನಿಸಿ ಸರ್ವ ಸದಸ್ಯರಿಗೂ ಸನ್ಮಾನಿಸಿ ಗೌರವಿಸಿದರು. ಬಂದಂತಹ ಗಣ್ಯರಿಗೆ,  ಗ್ರಾಮಸ್ಥರಿಗೆ ಹಣ್ಣಿನ ಗಿಡಗಳನ್ನು ವಿತರಿಸಿದರು.

Leave a Reply

Your email address will not be published. Required fields are marked *