ಹೊಸನಗರ : ಜೆಡಿಎಸ್ ಪಕ್ಷದ ಹೊಸನಗರ ತಾಲೂಕು ಅಧ್ಯಕ್ಷರನ್ನಾಗಿ ರಿಪ್ಪನ್ಪೇಟೆಯ ಎನ್ ವರ್ತೇಶ್ ರವರನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ನೇಮಕ ಮಾಡಿದ್ದಾರೆ.
ರಿಪ್ಪನ್ಪೇಟೆಯ ಎನ್ ವರ್ತೇಶ್ ಜೆಡಿಎಸ್ ನ ಹಿರಿಯ ಮುಖಂಡರಾಗಿದ್ದು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಸಮಿತಿಯವರು ಸಂಘಟನಾ ಚತುರ ಎನ್ ವರ್ತೇಶ್ ರವರನ್ನು ತಾಲೂಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಮೂಡಿದೆ.
ಎನ್ ವರ್ತೇಶ್ ರವರನ್ನು ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷರಾದ ಎಂ ಶ್ರೀಕಾಂತ್,ಕಾರ್ಯಾಧ್ಯಕ್ಷರಾದ ರಾಮಕೃಷ್ಣ ರವರಿಗೆ ರಾಜ್ಯ ಜೆಡಿಎಸ್ ಮುಖಂಡ ಅರ್ ಎ ಚಾಬುಸಾಬ್,ಮುಖಂಡರಾದ ಜಿ ಎಸ್ ವರದರಾಜ್,ಆರ್ ಎನ್ ಮಂಜುನಾಥ್,ಕಲ್ಲೂರು ಈರಣ್ಣ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.