Headlines

ಚಿಕ್ಕಮಗಳೂರಿನಲ್ಲಿ ನಡೆದ ಡರ್ಟಿಪ್ರಿಕ್ಸ್ ಆಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್‌ಪೇಟೆ ಯುವಕನ ಅದ್ವಿತೀಯ ಸಾಧನೆ :

ಭಾನುವಾರ ಚಿಕ್ಕಮಂಗಳೂರಿನ ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಹಮ್ಮಿಕೊಂಡಿದ್ದ ಡರ್ಟಿಪ್ರಿಕ್ಸ್ ಆಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್ ಪೇಟೆಯ ಯುವಕ ನಿತೀಶ್ ಎಂ ಗೌಡ ಅದ್ವಿತೀಯ ಪ್ರದರ್ಶನ ತೋರಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ.


ನಿತೀಶ್ ಎಂ ಗೌಡ ರಿಪ್ಪನ್ ಪೇಟೆಯ ಹೊಸನಗರ ರಸ್ತೆ ನಿವಾಸಿಗಳಾದ ಎಂ ಬಿ‌ ಮಂಜುನಾಥ್ ಮತ್ತು ಪ್ರವೀಣಿ ದಂಪತಿಗಳ ಪುತ್ರನಾಗಿದ್ದು ಕಾಫಿನಾಡಿನ ಜನ ಮೂಗಿನ ಮೇಲೆ ಬೆರಳಿಡುವಂತೆ ತನ್ನ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾನೆ.


ಇವರು ಬಾಲ್ಯದಿಂದಲೇ ದ್ವಿಚಕ್ರ ವಾಹನ ಗಳನ್ನುಓಡಿಸುವಲ್ಲಿ ಆಸಕ್ತಿ ಹೊಂದಿದ್ದರು. ನಂತರ ಕಾರ್ ರೇಸ್’ಗಳನ್ನು ವೀಕ್ಷಿಸುತ್ತಿದ್ದ ಅವರು ಈ ಕ್ಷೇತ್ರದಲ್ಲಿ ಏನಾದರು ಸಾಧಿಸುವ ಉದ್ದೇಶದಿಂದ ಕಾರ್’ಗಳನ್ನು ಚಲಾಯಿಸುತ್ತಾ ಆಸಕ್ತಿ ಹೊಂದಿದರು. ಯಾವುದೇ ತರಬೇತುದಾರರಿಲ್ಲದೆ ನಿರಂತರ ಶ್ರಮ ಹಾಗೂ ಅಭ್ಯಾಸದಿಂದ ಸ್ವತಃ ಕಾರ್ ರೇಸ್’ಗಳಲ್ಲಿ ಭಾಗವಹಿಸುವ ಪ್ರಾವಿಣ್ಯತೆ ಹೊಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಾರ್ ರೇಸ್’ನಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಮಲೆನಾಡಿನಲ್ಲೇ ಮೊಟ್ಟ ಮೊದಲ ಕಾರ್ ರೇಸ್’ಗಳಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಯಾಗಿ ಹೊರಹೊಮ್ಮಿರುವ ಪ್ರತಿಭೆಯಾಗಿ ಮಿಂಚುತ್ತಿದ್ದಾರೆ.


ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸಾಧಕರ ಜೊತೆ ಸೆಣಸಾಡಿ ಸಾಧನೆ ಮಾಡಿದ ಯುವಕನಿಗೆ ರಿಪ್ಪನ್ ಪೇಟೆಯ ಅನೇಕ ಸಂಘ – ಸಂಸ್ಥೆಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


ರೋಮಾಂಚನಗೊಳಿಸಿದ ಮೋಟಾರ್ ರ‍್ಯಾಲಿ:

ಧೂಳೆಬ್ಬಿಸಿ ಸಾಗಿದ ವಾಹನಗಳು ಸೀಟಿ ಹೊಡೆದು, ಚಪ್ಪಾಳೆ ತಟ್ಟಿ, ಚಾಲಕರನ್ನು ಹುರಿದುಂಬಿಸಿದ ಸಾರ್ವಜನಿಕರು ನೋಡುಗರನ್ನು ರೋಮಾಂಚನಗೊಳಿಸಿತು ಮೋಟಾರ್ ರ‍್ಯಾಲಿ,, ಚಿಕ್ಕಮಗಳೂರು ನಗರದ ಮೌಂಟೆನ್ ವ್ಯೂ ಕಾಲೇಜ್ ಆವರಣದಲ್ಲಿ ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಭಾನುವಾರ ಹಮ್ಮಿಕೊಂಡಿದ್ದ ಡರ್ಟಿ ಟ್ರಿಕ್ಸ್ ಆಟೋಕ್ರಾಸ್ ರ್ಯಾಲಿಯಲ್ಲಿ ಕಂಡುಬಂದ ದೃಶ್ಯಗಳು ವಿದ್ಯಾಸಂಸ್ಥೆಯ ಆವರಣದಲ್ಲಿ ಕಾರುಗಳ ದರ್ಬಾರ್ ನಡೆಯಿತು.

ಮುಂಬೈ, ಬೆಂಗಳೂರು, ತಮಿಳುನಾಡು, ಕೇರಳ ಹಾಗೂ ಕಾಫಿನಾಡು ಚಿಕ್ಕಮಗಳೂರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಆಟೋ ರ‍್ಯಾಲಿಯ ಚಾಲಕರು ಚಾಲನೆಯ ಚಾಕಚಕ್ಯತೆಯನ್ನು ಮೆರೆದರು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ದೇಶದ ಅನೇಕ ಚಾಂಪಿಯನ್ ಗಳ ನಡುವೆ ಸೆಣಸಾಡಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದ ರಿಪ್ಪನ್‌ಪೇಟೆಯ ಯುವಕ ನಿತೀಶ್ ಎಂ ಗೌಡ ರವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುವುದೇ ಪೋಸ್ಟ್ ಮ್ಯಾನ್ ನ್ಯೂಸ್ ತಂಡದ ಆಶಯ.


ರ‍್ಯಾಲಿಯ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *