Headlines

ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ : 6 ಹಸುಗಳ ರಕ್ಷಣೆ

ಭದ್ರಾವತಿಯ ಬೊಮ್ಮನ್ ಕಟ್ಟೆಯ ತಿಮ್ಮಲಾಪುರ ರಸ್ತೆಯಲ್ಲಿರುವ ಕಸಾಯಿ ಖಾನೆ ಮೇಲೆ ಖಾಸಗಿ ಎನ್ ಜಿಒ(NGO) ಸ್ವಯಂ ಸೇವಕರೊಬ್ಬರು ದಾಳಿ ನಡೆಸಿದ್ದು ದಾಳಿಯಲ್ಲಿ 6 ಗೋವುಗಳನ್ನ ರಕ್ಷಿಸಲಾಗಿದೆ. ನಾಲ್ವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಹಾಸನದ ಖಾಸಗಿ ಎನ್ ಜಿಒ(NGO) ದಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕ ತಿಮ್ಮರಾಜು ಎಂಬುವವರು ದಿಟ್ಟವಾಗಿ ಈ ಅಕ್ರಮ ಗೋ ಮಾಂಸ ಮಾರಾಟದ ಅಡ್ಡದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗೋ ಮಾಂಸವನ್ನು ಮಾರಾಟ ಮಾಡುತಿದ್ದ ಮಳಿಗೆಯ ಮೇಲೆ ದಾಳಿ ನಡೆಸಿದ್ದಾರೆ.

ಈ ದಾಳಿಯಲ್ಲಿ ಅಪಾರ ಪ್ರಮಾಣದ ಗೋ ಮಾಂಸ ದೊರೆತಿದ್ದು,ಜೀವಂತ 6 ಹಸುಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ. ಗೋಮಾಂಸ ಮತ್ತು ಚರ್ಮವನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಅಕ್ರಮ ಕಸಾಯಿ ಖಾನೆ ನಡೆಸುತ್ತಿದ್ದ ಸಾದಿಕ್, ರುಕಿಯಾ, ನವಾಜ್, ಹಾಗೂ ಅಕ್ರಮ ಕಸಾಯಿ ಖಾನೆಯ ಮಾಲೀಕರು ಮತ್ತು ಸಹಚರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.‌

Leave a Reply

Your email address will not be published. Required fields are marked *