Headlines

ಪತಿಯೊಂದಿಗಿನ ಜಗಳದಿಂದ ನೊಂದು ತನ್ನ ಆರು ಮಕ್ಕಳನ್ನು ಬಾವಿಗೆಸೆದು ಕೊಂದ ಪಾಪಿ ತಾಯಿ :

  ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಘಟನೆಯಲ್ಲಿ ಐದು ಬಾಲಕಿಯರು ಸೇರಿದಂತೆ ಆರು ಸಣ್ಣ ಮಕ್ಕಳು ಸಾವನ್ನಪ್ಪಿದ್ದಾರೆ.ಆದರೆ, ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಾವಿಯಲ್ಲಿದ್ದ ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಮಾಹಿತಿ ಪ್ರಕಾರ,…

Read More

ಅಕ್ರಮ ಮರಳು ಸಾಗಾಟದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದ ಹೊಸನಗರ ಪೊಲೀಸರು :

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿದ್ದಾರೆ. ನೆನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್ ಬಿ ಸಿ ಹಾಗೂ ಪಿಎಸ್ ಐ ನಿಂಗರಾಜ್ ಬಿ‌ ನರಲಾರ ರವರು ಭರ್ಜರಿ ಕಾರ್ಯಚರಣೆ ಮಾಡುವ ಮೂಲಕ ತಾಲೂಕಿನ ಮರಳು ಮಾಫ಼ಿಯಾ ದೊರೆಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಅಕ್ರಮ ಮರಳು ಸಾಗಾಣಿಕೆಯ ಖಚಿತ ಮಾಹಿತಿ ಆಧಾರದ ಮೇರೆಗೆ 4 ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.ಕಾರ್ಯಾಚರಣೆ ವೇಳೆ ನಾಲ್ಕು ವಾಹನಗಳ ಚಾಲಕರು ವಾಹನ…

Read More

ಅನಾರೋಗ್ಯ ಪೀಡಿತ ತಾಯಿಯನ್ನು ಜೋಲಿ ಕಟ್ಟಿ ಆಸ್ಪತ್ರೆಗೆ ಹೊತ್ತೊಯ್ದ ಮಗ : ಮಲೆನಾಡಲ್ಲೊಂದು ಮನಕಲಕುವ ಘಟನೆ

ರಸ್ತೆ ವ್ಯವಸ್ತೆ ಇಲ್ಲದೇ ಇರುವ ಕಾರಣ ಅನಾರೋಗ್ಯ ಪೀಡಿತ ಮಹಿಳೆಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮನಕಲಕುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ ಶಿವಮೊಗ್ಗ ಜಿಲ್ಲೆಯ ಜೋಗ ಕಾರ್ಗಲ್​​​​ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಅಮಾನವೀಯ ದೃಶ್ಯ ಕಂಡು ಬಂದಿದ್ದು, ಪಾರ್ಶ್ವವಾಯು ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಮಗ ಪರದಾಡಿದ್ದಾನೆ. ಜೋಗದ ಚರ್ಚ್ ಮೌಂಟ್ ಏರಿಯಾದ ಅಚ್ಚಮ್ಮ ಎಂಬವರು ಪಾರ್ಶ್ವವಾಯುಗೆ ತುತ್ತಾಗಿದ್ದರು‌. ಆದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲು ಅವರ ಮನೆಗೆ ರಸ್ತೆಯೇ ಇಲ್ಲ‌ದ ಕಾರಣ…

Read More

ಅದ್ದೂರಿಯಾಗಿ ಜರುಗಿದ ಕೆಂಚನಾಲ ಉರೂಸ್ ಕಾರ್ಯಕ್ರಮ :

ಕೆಂಚನಾಲ : ಇಲ್ಲಿನ ಹಜರತ್ ಸೈಯದ್ ಚಮನ್ ಷಾ ವಲಿಯೂಲ್ಲಾ ದರ್ಗಾದ ಉರೂಸ್ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಜರುಗಿತು. ಕೆಂಚನಾಲ ಸುನ್ನಿ ಜಾಮೀಯಾ ಮಸೀದಿಯ ಖತೀಬ್ ರವರಾದ ಮೊಹಮ್ಮದ್ ಝುಲ್ಪಿಕರ್ ದುವಾ ಮಾಡುವ ಮೂಲಕ ಸಂದಲ್ ಮೆರವಣಿಗೆಗೆ ಚಾಲನೆ ನೀಡಿದರು. ಕೆಂಚನಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂದಲ್ ಮೆರವಣಿಗೆ ಸಾಗಿತು.ಈ ಸಂಧರ್ಭದಲ್ಲಿ ಶಿವಮೊಗ್ಗದ ಮುರ್ಷದ್ ರವರು ಸಂದಲ್ ಮೆರವಣಿಗೆಯಲ್ಲಿ ದಫ಼್ ಬಾರಿಸುವ ಮೂಲಕ ಹಜರತ್ ಸೈಯದ್ ಚಮನ್ ಷಾ ರವರ ಸಂದಲ್ ಮೆರವಣಿಗೆಗೆ ರಂಗು ತಂದರು.ನೂರಾರು ಭಕ್ತಾದಿಗಳು…

Read More

ಚನ್ನಗಿರಿಯ ಯುವಕ ಆಗುಂಬೆ ಸ್ಮಶಾನದ ಶೆಡ್ ನಲ್ಲಿ ಶವವಾಗಿ ಪತ್ತೆ :

ಆಗುಂಬೆ : ಕಳೆದ ವಾರ ಮನೆಯಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಸ್ಮಶಾನದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ  ನಡೆದಿದೆ. ಚನ್ನಗಿರಿ ತಾಲೂಕಿನ ಕಾಗತ್ತೂರು ಗ್ರಾಮದ ಎಂ.ಕೆ.ಸ್ವಾಮಿ(27) ಮೃತಪಟ್ಟಿರುವ ದುರ್ಧೈವಿಯಾಗಿದ್ದಾನೆ.ಆಗುಂಬೆ ಗ್ರಾಮದ ಸ್ಮಶಾನದ ಶೆಡ್​ನಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಮೇ 24ರಂದು ಸ್ವಾಮಿ ನಾಪತ್ತೆಯಾಗಿದ್ದ. ಮಗ ಕಾಣೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಯುವಕನ ಮೊಬೈಲ್ ನೆಟ್​ವರ್ಕ್​ ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆಗುಂಬೆಯ ಸ್ಮಶಾನದಲ್ಲಿ ಡೆತ್​ನೋಟ್​ ಬರೆದಿಟ್ಟು ದುರಂತ ಅಂತ್ಯಕಂಡಿದ್ದಾನೆ. …

Read More

ಉದ್ಯಮಿ ಮಹೇಶ್ ಮೇಲೆ ದಾಖಲಾದ ಸುಳ್ಳು ಪ್ರಕರಣವನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ :

ಸಾಗರದ ಯುವ ಉದ್ಯಮಿ ರಾಯಲ್‌ ಬಿಲ್ಡರ್ಸ್ ಮಾಲೀಕ ಮಹೇಶ್ ಮೇಲೆ ರಾಜಕೀಯ ದುರುದ್ದೇಶದಿಂದ ಮತ್ತು ಶಾಸಕರ ಕುಮ್ಮಕ್ಕಿನಿಂದ ಹಾಗೂ ರೌಡಿಶೀಟರ್ ಅರುಣ್ ಕುಗ್ವೆ ರವರ ದ್ವೇಷದ ಹೇಳಿಕೆಯಿಂದ ವಿನಾಕಾರಣ ಪ್ರಥಮ ವರ್ತಮಾನ ವರದಿಯಲ್ಲಿ ಹೆಸರು ಸೇರ್ಪಡೆ ಮಾಡಿರುತ್ತಾರೆ.ಆದ್ದರಿಂದ ಅವರ ಮೇಲಿನ ಪ್ರಕರಣವನ್ನು ಕೈ ಬಿಡುವಂತೆ ಒತ್ತಾಯಿಸಿ ಸಾಗರ ಗೆಳೆಯರ ಬಳಗದ ವತಿಯಿಂದ ಡಿವೈಎಸ್ಪಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಎಎಸ್ಪಿ ರೋಹನ್ ಜಗದೀಶ್ ರವರಿಗೆ ಮನವಿ ಸಲ್ಲಿಸಿದರು. ಶನಿವಾರ ರಾತ್ರಿ ನಡೆದ ಘಟನೆಗೂ ರಾಯಲ್ ಬಿಲ್ಡರ್ಸ್ ಮಾಲೀಕ…

Read More

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ :

ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಅಪರಿಚಿತ ಯುವಕನೋರ್ವನ ಶವವೊಂದು ಪತ್ತೆಯಾಗಿದೆ. ಇಂದು ರಾಮೇಶ್ವರ ದೇವಸ್ಥಾನದ ಹಿಂಭಾಗದ ನದಿಯಲ್ಲಿ ಪತ್ತೆಯಾಗಿದೆ.  ಅಪರಿಚಿತ ಯುವಕನೊಬ್ಬ ಭಾನುವಾರ ತನ್ನ ಚಪ್ಪಲಿ, ಶರ್ಟ್, ಪ್ಯಾಂಟ್ ಬಿಚ್ಚಿಟ್ಟು ಸ್ನಾನ ಮಾಡಲು ನದಿಗೆ ಇಳಿದಿದ್ದನು ಎನ್ನಲಾಗಿದೆ. ಸ್ಥಳೀಯ ಸಾರ್ವಜನಿಕರ ಮಾಹಿತಿ ಮೇರೆಗೆ ಕುರುವಳ್ಳಿಯ ಸಮಾಜ ಸೇವಕ ಪ್ರಮೋದ್ ಪೂಜಾರಿ ಮತ್ತು ತಂಡ ಹಾಗೂ ಅಗ್ನಿಶಾಮಕದಳದವರು ಶವವನ್ನು ಹುಡುಕಲು ಮುಂದಾಗಿದ್ದರು.  ಇಂದು ತುಂಗಾ ಸೇತುವೆ  ಸಮೀಪ ಶವ ಪತ್ತೆಯಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ಹೊಸನಗರ ಉಪ ವಿಭಾಗದ ರಿಪ್ಪನ್ ಪೇಟೆ ಶಾಖೆಯಲ್ಲಿ ತುರ್ತು ನಿರ್ವಹಣೆ ಇರುವುದರಿಂದ ನಾಳೆ (31-05-2022) ರಿಪ್ಪನ್‌ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ. ರಿಪ್ಪನ್‌ಪೇಟೆ ಸೇರಿದಂತೆ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಾದ ಕೆಂಚನಾಲ,ಹೆದ್ದಾರಿಪುರ, ಬೆಳ್ಳೂರು,ಗರ್ತಿಕೆರೆ,ಅರಸಾಳು,ಕೋಡೂರು ಮತ್ತು ಚಿಕ್ಕ ಜೇನಿ ಗ್ರಾಮಗಳಲ್ಲಿ ನಾಳೆ ಬೆಳಿಗ್ಗೆ  9-30 ರಿಂದ ಸಂಜೆ 6 ರವರೆಗೆ  ವಿದ್ಯುತ್ ವ್ಯತ್ಯಯ ಇರುತ್ತದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ

Read More

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಯುವತಿಗೆ ಸನ್ಮಾನಿಸಿದ ವೀರಶೈವ-ಲಿಂಗಾಯತ ಪರಿಷತ್

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕ ಪಡೆದು ಅದ್ವಿತೀಯ ಸಾಧನೆಗೈದ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಗುಡಿ ಗ್ರಾಮದ ರೈತ ಕುಟುಂಬದ ಕುಮಾರಿ ಸ್ಪಂದನ ಷಣ್ಮುಖಪ್ಪನವರಿಗೆ ಹೊಸನಗರ ತಾಲ್ಲೂಕ್ ವೀರಶೈವ-ಲಿಂಗಾಯಿತ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಭಾನುವಾರ ವೀರಶೈವ – ಲಿಂಗಾಯತ ಪರಿಷತ್ ತಾಲೂಕ್ ಅಧ್ಯಕ್ಷರಾದ ಆನಂದ್ ಮೆಣಸೆ ರವರು ಹಾಗೂ ಪದಾಧಿಕಾರಿಗಳು ಸ್ಪಂದನ ಷಣ್ಮುಖಪ್ಪ ರವರ ಮನೆಗೆ ತೆರಳಿ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹೊಸನಗರ ತಾ.ಪಂ.ಮಾಜಿ ಅಧ್ಯಕ್ಷರಾದ…

Read More

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ವೇಳೆ ಕಾರ್ಮಿಕ ಸಾವು :

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವೇಳೆ ನಡೆದ ಅವಘಡ ದಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಮಲ್ಲಿಕಾರ್ಜುನ (28) ಎಂದು ಗುರುತಿಸಲಾಗಿದೆ.  ಮಣ್ಣನ್ನು ಸಮತ್ತಟ್ಟು ಮಾಡುವ ವೇಳೆ ಮಣ್ಣು ಕಂಪ್ರೆಸ್ ಮಾಡುವ ಬುಲ್ಡೋಜರ್ ನಂತಹ ಮಿಷಿನ್ ಆತನ ಮೇಲೆ ಹರಿದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಕಾರ್ಮಿಕ ಮಲ್ಲಿಕಾರ್ಜುನ ನಿರ್ಲಕ್ಷ ತನದಿಂದ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದ್ದು. ಮಲ್ಲಿಕಾರ್ಜುನ ಮೂಲತಃ ಹಾವೇರಿ ಜಿಲ್ಲೆಯವನಾಗಿದ್ದು ತನ್ನ ತಂದೆಯ ಜೊತೆ ಶಿವಮೊಗ್ಗದ ವಿಮಾನ…

Read More