ಹೊಸನಗರ ಪಿಎಸ್ ಐ ರಾಜೇಂದ್ರನಾಯ್ಕ್ ವರ್ಗಾವಣೆ : ನೂತನ ಪಿಎಸ್ ಐ ನೀಲರಾಜ್ ಬಿ ಅಧಿಕಾರ ಸ್ವೀಕಾರ

ಹೊಸನಗರ: ಪಟ್ಟಣದ ಖಡಕ್ ಪಿಎಸ್ ಐ ಎಂದೇ ಹೆಸರುವಾಸಿಯಾಗಿದ್ದ ರಾಜೇಂದ್ರನಾಯ್ಕ್ ರವರು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ರಾಜೇಂದ್ರನಾಯ್ಕ್ ರವರ ಸ್ಥಾನಕ್ಕೆ  ದಾವಣಗೆರೆ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೀಲರಾಜ್ ಬಿ. ನರಲಾರ ರವರು ಹೊಸನಗರ ಪಿಎಸ್ ಐ ಆಗಿ ನೇಮಕವಾಗಿದ್ದಾರೆ.   ಹೊಸನಗರದ ಖಡಕ್ ಪಿಎಸ್ ಐ ವಿರುದ್ದ ಮರಳು ಮಾಫ಼ಿಯಾ ಹಾಗೂ ಗಣಿ ಮಾಫ಼ಿಯಾ ದವರು ಇತ್ತೀಚೆಗೆ ಅನೇಕ ಷಡ್ಯಂತ್ರಗಳನ್ನು ರೂಪಿಸಿ ಅವರ ತೇಜೋವಧೆಗೆ ಪ್ರಯತ್ನಿಸಿದಾಗ ಹೊಸನಗರ ಪಟ್ಟಣದ ನಾಗರೀಕರು ಒಕ್ಕೊರಲಿನಿಂದ ಪ್ರಾಮಾಣಿಕ…

Read More

ಶಾಸಕರ ರೌಡಿ ಬೆಂಬಲಿಗರ ವಿರುದ್ದ ಕ್ರಮ ಕೈಗೊಳ್ಳಿ,ಸಾಗರ ಕ್ಷೇತ್ರದ ಮರ್ಯಾದೆ ಉಳಿಸಿ : ಗೋಪಾಲಕೃಷ್ಣ ಬೇಳೂರು

ಸಾಗರದಲ್ಲಿ ಬಿಜೆಪಿ ಪಕ್ಷದ ಯುವಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ರವರನ್ನು ಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು  ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭೂಮಾಫಿಯ ಹೆಚ್ಚಾಗಿದ್ದು ಆಡಳಿತರೂಢ ಬಿಜೆಪಿ ಪಕ್ಷದ ಮುಖಂಡರುಗಳು ತಮ್ಮ ಶಾಸಕರ ಕುಮ್ಮಕ್ಕಿನಿಂದ ಭೂ ಮಾಫಿಯಾ ದಂಧೆ ಮಾಡುತ್ತಿದ್ದು ಇದರ ಬಗ್ಗೆ ಸಾಮಾನ್ಯ ಜನರು ಪ್ರಶ್ನೆ ಮಾಡಿದಲ್ಲಿ ಅಂಥವರ ಮೇಲೆ ಮಾರಣಾಂತಿಕ ಹಲ್ಲೆ…

Read More

ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವರದಿಯ ಫಲಶ್ರುತಿ : ರಾಷ್ಟ್ರೀಯ ಹಾಕಿ ಕ್ರೀಡಾಪಟು ಪೂಜಿತ ಗೌಡಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಂದ ಸನ್ಮಾನ

ಮಲೆನಾಡಿನ ಹೆಮ್ಮೆಯ ಪುತ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪಟ್ಟಣದ ಬರುವೆ ಗ್ರಾಮದ  ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಪಟು  ಪೂಜಿತ ಗೌಡಳಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ವಗೃಹದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ 19 ಬಾರಿ ಭಾಗವಹಿಸಿದ ಪೂಜಿತ ಗೌಡ ಇದೇ ತಿಂಗಳು ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಖೇಲ್ ಇಂಡಿಯಾ ಹಾಕಿ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಹಾಕಿ ತಂಡದಿಂದ ಭಾಗವಹಿಸಿ  ಅದ್ವಿತೀಯ…

Read More

ರಿಪ್ಪನ್‌ಪೇಟೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕಾರಿಣಿ ಸಮಾವೇಶ :

ರಿಪ್ಪನ್‌ಪೇಟೆ:ಸಂಘಟನಾತ್ಮಕ ಸಭೆಯನ್ನು ಬೂತ್ ಮಟ್ಟದಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿ ಕಾರ್ಯಕ್ರಮದ ಸದುಪಯೋಗವನ್ನು ಕಾರ್ಯಕರ್ತರು ಮತದಾರರಿಗೆ ಮನನ ಮಾಡಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಸ್ನೇಹಿ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸುವ ಮಹಾತ್ಕಾರ್ಯವನ್ನು ಸಂಘಟನೆಗಳು ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ ಹೇಳಿದರು.  ರಿಪ್ಪನ್‌ಪೇಟೆ ಬಿಜೆಪಿ ಕಛೇರಿಯಲ್ಲಿ ಹುಂಚ-ಕೆರೆಹಳ್ಳಿ ಮಹಾಶಕ್ತಿಕೇಂದ್ರದವರು ಆಯೋಜಿಸಲಾಗಿದ ವಿಸ್ತಾರಕ ಯೋಜನೆಯ ಅವಲೋಕನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹಿಂದಿನ ಅಟಲ್ ಬಿಹಾರಿ ವಾಜಪೇಯ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ತಿಳಿಸುವಲ್ಲಿ ವಿಫಲವಾದ ಕಾರಣ ಅಧಿಕಾರ…

Read More

ಕೋಳಿ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು :

ಕೋಳಿ ಫುಡ್ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಹಾರ ಮಿಕ್ಸ್ ಮಾಡುವ ಮಿಷಿನ್ ನಲ್ಲಿ ಕಸ ಸಿಕ್ಕಿಕೊಂಡಿದೆ ಎಂದು ಸ್ವಚ್ಛತೆಗೆ ಮುಂದಾದ ಕಾರ್ಮಿಕ ಮಿಷಿನ್ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮಿಷಿನ್ ನಿನ ಸ್ವಿಚ್ ಆನ್ ಮಾಡಿ ಹಾರೆಯಿಂದ ತಿವಿದು ಸ್ವಚ್ಛತೆ ಮಾಡುವಾಗ ಆಯತಪ್ಪಿ ಮಿಷಿನ್ ಮೇಲೆ ಬಿದ್ದಿದ್ದಾನೆ. ಆತನ ಹೊಟ್ಟೆಯ ಭಾಗವನ್ನ ಯಂತ್ರ ಇಬ್ಭಾಗ ಮಾಡಿದೆ. ಆತ ಸಾವನ್ನಪ್ಪಿದ್ದಾನೆ. ಭದ್ರಾವತಿಯ ಲೋಯರ್ ಹುತ್ತಾ ಸಮೀಪದ ಆರ್ ಎ ಎಸ್ ಪ್ಯಾರಾ ಸಿಟಿಕಲ್ ಫ್ಯಾಕ್ಟರಿಯಲ್ಲಿ…

Read More

ಸಾಗರದಲ್ಲಿ ಡ್ರೈನೇಜ್ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬ ಸಾವು :

ಸಾಗರ : ನಗರಸಭೆಯ ನಿರ್ಲಕ್ಷ್ಯಕ್ಕೆ ಡ್ರೈನೇಜ್ ಚರಂಡಿಗೆ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಗರ‌ ನಗರದ ಲಿಮ್ರಾ ಟ್ರಾನ್ಸ್ ಪೋರ್ಟ್ ಮಾಲಿಕ ನವಾಬ್ ಜಾನ್(62) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ. ಬುಧವಾರ ಮದ್ಯಾಹ್ನ ಮಾರ್ಕೆಟ್ ನಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ಮೀನು ಮಾರ್ಕೇಟ್ ಬಳಿ ಇರುವ ಚರಂಡಿಗೆ ಬಿದ್ದು  ಅವಘಢ ಸಂಭವಿಸಿದೆ. ನವಾಬ್ ಜಾನ್ ತಮ್ಮ ದ್ವಿಚಕ್ರ ವಾಹನ ಸಮೇತ ಈ ಚರಂಡಿಗೆ ಬಿದ್ದು,ತಲೆಗೆ ತೀವ್ರತರವಾದ ಗಾಯಮಾಡಿಕೊಂಡಿದ್ದರು.ತಕ್ಷಣ ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿಲಾಗಿತ್ತು ಆದರೆ ಚಿಕಿತ್ಸೆ…

Read More

ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ

ರಿಪ್ಪನ್‌ಪೇಟೆ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ಬೆಳ್ಳೂರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರು ಕಾರ್ಯಕ್ರಮ ಉದ್ಘಾಟಿಸಿ ನಾಗರಿಕರಿಂದ ಮನವಿ ಸ್ವೀಕರಿಸಿ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಬಕಾರಿ ,ಕೃಷಿ ,ಅರಣ್ಯ ,ಕಂದಾಯ ಇಲಾಖೆಗೆ ಸಂಬಂಧಪಟ್ಟ ದೂರುಗಳು ಅಧಿಕವಾಗಿದ್ದವು. ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನ ಇವುಗಳಿಗೆ ಸಂಬಂಧಪಟ್ಟಂತೆ ಸ್ಥಳದಲ್ಲಿ ಮಂಜೂರಾತಿ ಆದೇಶ ನೀಡಿದರು.  ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಅವ್ಯಾಹತವಾಗಿ ನಡೆಯುತ್ತಿರುವ ಮದ್ಯ ಮಾರಾಟದ ಬಗ್ಗೆ…

Read More

ರಾಜಕೀಯ ನಾಯಕರು ಪಕ್ಷ ಕಟ್ಟೋ ಕೆಲಸ ಬಿಟ್ಟು – ಊರು ಕಟ್ಟೋ ಕೆಲಸ ಮಾಡಲಿ : ಜೆಡಿಎಸ್ ಯುವ ಮುಖಂಡ ಯಡೂರು ರಾಜಾರಾಮ್

ರಿಪ್ಪನ್‌ಪೇಟೆ: ರಾಜಕೀಯ ಎಂಬುದು ರಾಷ್ಟ್ರೀಯ ಪಕ್ಷಗಳಲ್ಲಿ ಕೇವಲ ವೈಟ್ ಕಾಲರ್ ನಾಯಕರಿಗೆ ಸೀಮಿತವಾಗಿದ್ದು, ಬರೀ ಪಕ್ಷ ಸಂಘಟನೆಯೇ ಇವರ ದ್ಯೇಯವಾಗಿದೆ. ಇದರಿಂದ ಊರು ಅಭಿವೃದ್ಧಿ ಕಾಣಲಿಲ್ಲ ಎಂದು ತೀರ್ಥಹಳ್ಳಿಯ ಮುಂದಿನ ವಿಧಾನ ಸಭಾ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಜೆಡಿಎಸ್‌ ಯುವ ಮುಖಂಡ ಯಡೂರು ರಾಜಾರಾಮ್‌ ಅಸಮದಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜವಾದದ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಸಮಾಜವಾದಿ ಚಿಂತಕ ಗೋಪಾಲಗೌಡ ರವರ ಹೆಸರು ದುರ್ಬಳಕೆ ಮಾಡಿಕೊಂಡು ಎಲ್ಲಾ ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಅಧಿಕಾರದ…

Read More

ಹೊಸನಗರ ಎಪಿಎಂಸಿ ವಿಲೀನ ಪ್ರಕ್ರಿಯೆ ಕೈ ಬಿಡಲಾಗಿದೆ : ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ

ಹೊಸನಗರ ಎಪಿಎಂಸಿ ಮಾರುಕಟ್ಟೆಯನ್ನು ಸಾಗರ ಎಪಿಎಂಸಿಯೊಂದಿಗೆ ಸಂಯೋಜಿಸಿರುವ ಪ್ರಕ್ರೀಯೆಯನ್ನು ಕೈ ಬಿಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಸ್ಪಷ್ಟನೆ ನೀಡಿದ್ದಾರೆ. ಸಾಗರ – ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಒಟ್ಟುಗೂಡಿಸುವ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದ ಕಾರಣ  ಸರ್ಕಾರದೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಕೈಬಿಡುವಂತೆ ಕೋರಲಾಗಿತ್ತು ಈ ಹಿನ್ನಲೆಯಲ್ಲಿ ಸದರಿ ಪ್ರಸ್ತಾವನೆಯನ್ನು ಕೈಬಿಡಲು ಸರ್ಕಾರದಿಂದ ಸಮ್ಮತಿ ದೊರೆತಿದ್ದು, ಈ ಹಿಂದಿನಂತೆಯೆ ಸಾಗರ ಮತ್ತು ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಕರ್ತವ್ಯ ನಿರ್ವಹಿಸುತ್ತವೆ ಹಾಗು ಕೃಷಿ ಉತ್ಪನ್ನ…

Read More

ಸ್ವಯಂ ಪ್ರೇರಿತ ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ – ಸುಪ್ರೀಂಕೋರ್ಟ್

ವೇಶ್ಯಾವಾಟಿಕೆ ಎನ್ನುವುದು ಒಂದು ವೃತ್ತಿಯಾಗಿದೆ. ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿಯಲ್ಲಿ ಘನತೆ ಹಾಗೂ ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಈ ತೀರ್ಪು ನೀಡಿದ್ದು, ಲೈಂಗಿಕ ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸಲು  ನಿರ್ದೇಶನಗಳನ್ನು ಕೂಡ ಇದೇ ವೇಳೆ ನೀಡಿದೆ. ಲೈಂಗಿಕ ಕಾರ್ಯಕರ್ತರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿರುತ್ತಾರೆ. ಕ್ರಿಮಿನಲ್ ಕಾನೂನು  ವಯಸ್ಸು ಮತ್ತು ಒಪ್ಪಿಗೆಯ ಆಧಾರದ ಮೇಲೆ ಸಮಾನವಾಗಿ ಅನ್ವಯಿಸಬೇಕು. ಲೈಂಗಿಕ ಕಾರ್ಯಕರ್ತೆಯು ವಯಸ್ಕರಾಗಿದ್ದು, ಒಪ್ಪಿಗೆಯೊಂದಿಗೆ…

Read More