ಸಾಗರ : ನಗರಸಭೆಯ ನಿರ್ಲಕ್ಷ್ಯಕ್ಕೆ ಡ್ರೈನೇಜ್ ಚರಂಡಿಗೆ ವ್ಯಕ್ತಿಯೊಬ್ಬ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಗರ ನಗರದ ಲಿಮ್ರಾ ಟ್ರಾನ್ಸ್ ಪೋರ್ಟ್ ಮಾಲಿಕ ನವಾಬ್ ಜಾನ್(62) ಮೃತಪಟ್ಟಿರುವ ದುರ್ಧೈವಿಯಾಗಿದ್ದಾರೆ.
ಬುಧವಾರ ಮದ್ಯಾಹ್ನ ಮಾರ್ಕೆಟ್ ನಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ಮೀನು ಮಾರ್ಕೇಟ್ ಬಳಿ ಇರುವ ಚರಂಡಿಗೆ ಬಿದ್ದು
ಅವಘಢ ಸಂಭವಿಸಿದೆ.
ನವಾಬ್ ಜಾನ್ ತಮ್ಮ ದ್ವಿಚಕ್ರ ವಾಹನ ಸಮೇತ ಈ ಚರಂಡಿಗೆ ಬಿದ್ದು,ತಲೆಗೆ ತೀವ್ರತರವಾದ ಗಾಯಮಾಡಿಕೊಂಡಿದ್ದರು.ತಕ್ಷಣ ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ನವಾಬ್ ಜಾನ್ ಮೃತಪಟ್ಟಿದ್ದಾರೆ.
ಈ ತಿರುವಿನ ಚರಂಡಿಯನ್ನು ಮುಚ್ಚದೇ ಹಾಗೇ ಬಿಟ್ಟಿರುವುದರಿಂದ
ಇಲ್ಲಿ ಸಾಕಷ್ಟು ವಾಹನ,ಜನ,ಜಾನುವಾರುಗಳು ಬಿದ್ದು ಸಮಸ್ಯೆ ಮಾಡಿಕೊಂಡಿದ್ದರು ನಗರಸಭೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಹಿರಿಯ ವ್ಯಕ್ತಿಯೊಬ್ಬರು ಜೀವ ಕಳೆದುಕೊಳ್ಳುವಂತಾಗಿದೆ.
ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.