ಕೋಳಿ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು :

ಕೋಳಿ ಫುಡ್ ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಹಾರ ಮಿಕ್ಸ್ ಮಾಡುವ ಮಿಷಿನ್ ನಲ್ಲಿ ಕಸ ಸಿಕ್ಕಿಕೊಂಡಿದೆ ಎಂದು ಸ್ವಚ್ಛತೆಗೆ ಮುಂದಾದ ಕಾರ್ಮಿಕ ಮಿಷಿನ್ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.


ಮಿಷಿನ್ ನಿನ ಸ್ವಿಚ್ ಆನ್ ಮಾಡಿ ಹಾರೆಯಿಂದ ತಿವಿದು ಸ್ವಚ್ಛತೆ ಮಾಡುವಾಗ ಆಯತಪ್ಪಿ ಮಿಷಿನ್ ಮೇಲೆ ಬಿದ್ದಿದ್ದಾನೆ. ಆತನ ಹೊಟ್ಟೆಯ ಭಾಗವನ್ನ ಯಂತ್ರ ಇಬ್ಭಾಗ ಮಾಡಿದೆ. ಆತ ಸಾವನ್ನಪ್ಪಿದ್ದಾನೆ.

ಭದ್ರಾವತಿಯ ಲೋಯರ್ ಹುತ್ತಾ ಸಮೀಪದ ಆರ್ ಎ ಎಸ್ ಪ್ಯಾರಾ ಸಿಟಿಕಲ್ ಫ್ಯಾಕ್ಟರಿಯಲ್ಲಿ ಈ ಅವಘಡ ನಡೆದಿದೆ.

ಭದ್ರಾವತಿಯ ಸೆಂದಿಲ್ ಕುಮಾರ್ (35) ಮೃತ ಕಾರ್ಮಿಕ, ಕೋಳಿ ಫೀಡ್ ಫ್ಯಾಕ್ಟರಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು.ಫೀಡ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *