ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್ : ಯುವಕ ಸಾವು….
ಯುವಕನೊಬ್ಬ ಬೈಕಿನಲ್ಲಿ ತೆರಳುತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ರಾಮಕೃಷ್ಣಪುರದ ಬಳಿಯ ಕಾಸರವಳ್ಳಿ ಗ್ರಾಮದ ಕೋಟೆ ತೋಟ ಬಳಿ ನಡೆದಿದೆ. ಬುಧವಾರ ಸಂಜೆ ಬಂಡಿಗಡಿಯ ಚಾವಲ್ಮನೆ ರಂಜನ್ ಕೆ(32)ಎಂಬ ಯುವಕ ತೀರ್ಥಹಳ್ಳಿಯಿಂದ ಮದುವೆ ಕಾರ್ಯಕ್ರಮ ಮುಗಿಸಿ ಊರಿಗೆ ಹೋಗುತ್ತಿದ್ದ ವೇಳೆ ರಾಮಕೃಷ್ಣಪುರದ ಬಳಿ ಬೈಕ್ ನಿಯಂತ್ರಣ ತಪ್ಪಿದ ಕಾರಣ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯವಾಗಿತ್ತು. ಸ್ಥಳೀಯ ಸಾರ್ವಜನಿಕ ಆಂಬುಲೆನ್ಸ್ ಮೂಲಕ…