ಉದ್ಯೋಗ ಮೇಳಕ್ಕೆ ಹೋಗುವ ಮುನ್ನ ಇದನ್ನು ಮರೆಯಬೇಡಿ :
* ಉದ್ಯೋಗಾಕಾಂಕ್ಷಿಗಳು ವಿದ್ಯಾರ್ಹತೆ, ವಿಳಾಸ ದೃಢೀಕರಣ, ಫೋಟೊ ಇತ್ಯಾದಿ ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬೇಕು.
*ದಾಖಲೆಗಳು ಕನಿಷ್ಠ ಹತ್ತು ಸೆಟ್‌ನಲ್ಲಿದ್ದರೆ ಒಳ್ಳೆಯದು. ಕೆಲವು ಮೇಳಗಳಲ್ಲಿ ಒಬ್ಬ ಅಭ್ಯರ್ಥಿಗೆ ಕನಿಷ್ಠ ಹತ್ತು ಕಂಪನಿಗಳ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿರುತ್ತದೆ.
* ಮೂಲ ದಾಖಲೆಗಳನ್ನೂ ತೆಗೆದುಕೊಂಡು ಹೋಗಲು ಮರೆಯದಿರಿ.
* ಸಭ್ಯ ಉಡುಗೆ ತೊಟ್ಟುಕೊಳ್ಳಿ. ಮೇಳದಲ್ಲಿ ಹೆಚ್ಚು ಸಮಯ ಕಾದರೂ ಫ್ರೆಶ್ ಆಗಿ ಕಾಣುವಂತೆ ಎಚ್ಚರಿಕೆ ವಹಿಸಿ.
* ನಿಮ್ಮ ದಾಖಲೆಗಳನ್ನು ಸರಿಯಾಗಿ ಫೈಲ್ ಮಾಡಿ ಇಟ್ಟುಕೊಳ್ಳಿ.ಯಾವ ದಾಖಲೆ ಕೇಳಿದರೂ ತಕ್ಷಣ ತೆಗೆದುಕೊಡುವಂತೆ ನೀವೇ ಪೈಲ್ ಮಾಡಿಕೊಳ್ಳಿ.
* ಮೇಳದಲ್ಲಿ ಯಾವೆಲ್ಲಾ ಕಂಪನಿಗಳು ಭಾಗವಹಿಸುತ್ತಿವೆ, ಯಾವ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡೇ ಮುಂದುವರೆಯಿರಿ.
* ಆಯೋಜಕರ ಸಂಪರ್ಕ ಸಂಖ್ಯೆ ನೀಡಿದ್ದರೆ, ಈ ಬಗ್ಗೆ ಮಾತನಾಡಿ. ನಿಮಗೆ ಅಗತ್ಯವಿರುವ ಮಾಹಿತಿ ಪಡೆದುಕೊಳ್ಳಲು ಹಿಂಜರಿಯಬೇಡಿ.
*ಮೇಳದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿ. ಹೆದರಿಕೆ, ಭಯ ಬೇಡ.
ಮೇಳಕ್ಕೆ ಹೋಗುವ ಮುನ್ನ…
* ಯಾವ ರೀತಿಯ ಕೆಲಸಕ್ಕೆ ನಾನು ಸೂಕ್ತ, ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು, ಯಾವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಹೆಚ್ಚು ಅವಕಾಶವಿದ್ದಾಗ ಗೊಂದಲಕ್ಕೆ ಬೀಳಬೇಡಿ.
* ನಿಮ್ಮ ವೇತನ ಎಷ್ಟಿರಬೇಕು, ಎಲ್ಲಿ ಕೆಲಸ ಸಿಕ್ಕರೆ ಮಾಡಬಹುದು ಎಂಬುದನ್ನು ಮೊದಲೇ ಯೋಚಿಸಿರಿ. ಇದರ ಆಧಾರದ ಮೇಲೆಯೇ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಿ.
* ಅತಿ ಕಡಿಮೆ ಸಮಯದ ‘ಸಂದರ್ಶನ’ಕ್ಕೆ ಸದಾ ಸಿದ್ಧರಾಗಿರಿ. ಕಡಿಮೆ ಅವಧಿಯಲ್ಲಿ ನಿಮ್ಮ ಪರಿಚಯ ಮಾಡಿಕೊಡುವುದನ್ನು ಕಲಿತುಕೊಳ್ಳಿ.
* ಸಮಯಕ್ಕೆ ಸರಿಯಾಗಿ ಮೇಳಕ್ಕೆ ಹಾಜರಾಗಿ. ಹೆಸರು ಎಲ್ಲಿ ನೊಂದಾಯಿಸಬೇಕು, ಹೇಗೆ ಪ್ರಕ್ರಿಯೆಗಳು ನಡೆಯಲಿವೆ ಎಂಬುದನ್ನು ತಿಳಿದುಕೊಂಡೇ ಮುಂದುವರೆಯಿರಿ.
* ನಿಮ್ಮ ವಿದ್ಯಾರ್ಹತೆ, ಅನುಭವ, ವಯಸ್ಸು, ಕುಟುಂಬದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಪ್ರಮಾಣಿಕತೆಯಿಂದ ಉತ್ತರಿಸಿ. ಏನನ್ನಾದರೂ ಮುಚ್ಚಿಟ್ಟು ಉದ್ಯೋಗ ಪಡೆಯುವ ಯತ್ನ ಬೇಡ.
* ಯಾವುದೇ ಕಂಪನಿ ಆಫರ್ ನೀಡಿದರೆ ಕೆಲಸ ಏನು, ವೇತನ ಎಷ್ಟು ಸಿಗುತ್ತದೆ, ಯಾವಾಗಿನಿಂದ ಕೆಲಸಕ್ಕೆ ಬರಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಿ. ಈ ವಿಷಯಗಳನ್ನು ಕೇಳಿ ತಿಳಿದುಕೊಳ್ಳಲು ಸಂಕೋಚಪಡಬೇಡಿ.
* ನೀವು ಆಯ್ಕೆ ಮಾಡಿಕೊಳ್ಳುವ ಕಂಪನಿಯ ಬಗ್ಗೆ ಒಂದಿಷ್ಟು ಬೇಸಿಕ್ ಮಾಹಿತಿ ಪಡೆದುಕೊಂಡಿರಿ. ಗೊತ್ತಿಲ್ಲದಿದ್ದರೆ ಪ್ರತಿನಿಧಿಗಳನ್ನು ಕೇಳಿತಿಳಿದುಕೊಳ್ಳಿ. ಯಾವುದೇ ವಿಷಯವನ್ನು ಕೇಳಿ ತಿಳಿದುಕೊಳ್ಳುವುದು ದಡ್ಡತನವಲ್ಲ ಎಂಬುದನ್ನು ಮರೆಯಬೇಡಿ.
*ಮೇಳದಲ್ಲಿ ಉತ್ಸಾಹದಿಂದಿರಿ, ಕ್ಯೂನಲ್ಲಿ ನಿಂತಾಗ ಅಕ್ಕಪಕ್ಕದವರೊಂದಿಗೆ ಮಾತನಾಡಿ, ಪರಿಚಯ ಮಾಡಿಕೊಳ್ಳಿ. ಆದರೆ ತಲೆಹರಟೆ ಮಾಡಬೇಡಿ.