ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ರಿಪ್ಪನ್ ಪೇಟೆಯ ಪೂಜಿತ ಗೌಡ ರವರಿಗೆ ಹೊಸನಗರ ತಾಲೂಕ್ ಒಕ್ಕಲಿಗರ ವೇದಿಕೆ ವತಿಯಿಂದ ರಿಪ್ಪನ್ ಪೇಟೆ ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರಿಪ್ಪನ್‌ಪೇಟೆಯ ವಿಶ್ವ ಮಾನವ ಸಭಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ.ಪೂಜಿತ ಪ್ರಸ್ತುತ ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿಯಾಗಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡು ರಿಪ್ಪನ್‌ಪೇಟೆಗೆ ಕೀರ್ತಿ ತರುತ್ತಿರುವ ಯುವ ಕ್ರೀಡಾಪಟುವಿಗೆ ಹೊಸನಗರ ತಾಲೂಕ್ ಒಕ್ಕಲಿಗರ ವೇದಿಕೆ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಜಿತ ಗೌಡ 19 ಬಾರಿ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು ಮುಂದಿನ ದಿನಗಳಲ್ಲಿ ಭಾರತ ದೇಶದ ಪರವಾಗಿ ಅಂತರ್ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಭಾರತ ಹಾಗೂ ಕರ್ನಾಟಕದ ಹಾಕಿ ಕ್ರೀಡೆಯ ಪತಾಕೆಯನ್ನು ಹಾರಿಸಬೇಕೆಂಬ ಅಭಿಲಾಷೆ ಇದೆ ಎಂದರು.
ಈ ಸಂಧರ್ಭದಲ್ಲಿ ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ ಬಿ ಲಕ್ಷ್ಮಣ್ ಗೌಡ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಲವಾರು ಸಮಸ್ಯೆಗಳ ಮಧ್ಯೆ ಸಾವಿರಾರು ಸ್ಪರ್ಧಾಳುಗಳ ಮಧ್ಯೆ ಸ್ಪರ್ಧಿಸಿ ಗೆದ್ದು ಜಿಲ್ಲಾ, ರಾಜ್ಯ,ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡ ನಮ್ಮೂರಿನ ಹೆಮ್ಮೆಯ ಯುವ ಕ್ರೀಡಾಪಟುವಿನ ಬೆಂಬಲಕ್ಕೆ ನಮ್ಮ ಸಮಾಜ ಎಂದಿಗೂ ಇರುತ್ತದೆ ಎಂದರು.
ಈ ಸಂಧರ್ಭದಲ್ಲಿ ಒಕಲಿಗರ ಸಂಘದ ಗೌರವಾಧ್ಯಕ್ಷರಾದ ಯೋಮಕೇಶಪ್ಪಗೌಡರು ಕಾರ್ಯದರ್ಶಿಗಳಾದ ಲೋಕಪ್ಪಗೌಡರು ಸಹ ಕಾರ್ಯದರ್ಶಿಯಾದ ಎಂಎಂ ಪರಮೇಶ್ ನಿರ್ದೇಶಕರಾದ ಹಾಲಪ್ಪ ಗೌಡರು, ನಾಗರಾಜ್ ಗೌಡ, ಪ್ರಕಾಶ್ ನಾಯಕ್, ಕೃಷ್ಣಮೂರ್ತಿ ಗೌಡರು ತಿಮ್ಮಯ್ಯಗೌಡರು , ಸಿದ್ಧಪ್ಪ ಗೌಡರು ಮುಖಂಡರಾದ ಸುಧಾಕರ , ಅಶೋಕ ವಿಷ್ಣುಮೂರ್ತಿ , ವಿಶ್ವಮಾನವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಹರೀಶ್ ನಿರ್ದೇಶಕರಾದ ಷಣ್ಮುಖ, ಪ್ರಭಾಕರ್ ಇನ್ನೂ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.