ಭದ್ರಾವತಿ : ದಿವಂಗತ ಬಿ ವಿ ಗಿರೀಶ್ ಹೆಸರನ್ನು ತಿಮ್ಮಾಪುರ ರಸ್ತೆಗೆ ನಾಮಕರಣ ಮಾಡುವಂತೆ ಹಾಗೂ ಭದ್ರಾವತಿ ನಗರಸಭೆ ವ್ಯಾಪ್ತಿಯ 32ನೇ ವಾರ್ಡ್ ನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದನ್ನು ಖಂಡಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ನಗರಸಭೆ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು ಕನ್ನಡಪರ ಹೋರಾಟಗಾರ ಭೋವಿ ಸಮಾಜದ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಾಗಿದ್ದ ದಿವಂಗತ ಬಿ ವಿ ಗಿರೀಶ್ ಅವರ ಹೆಸರನ್ನು ಭದ್ರಾವತಿ ಬೈಪಾಸ್‌ನ ತಿಮ್ಹಾಪುರಕ್ಕೆ ಹೋಗುವ ರಸ್ತೆಗೆ ನಾಮಕರಣ ಮಾಡುವಂತೆ ದಿ 2.5.2022ರಂದು ದಿವಂಗತ ಬಿ.ಎ ಗಿರೀಶ್ ರವರ 1ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರವರ ಮತ್ತು ಕಮಿಷನರ್ ರವರ ಸಮ್ಮುಖದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಜಕೀಯ ಮುಖಂಡರು ಮನವಿಯನ್ನು ನೀಡಿರುತ್ತೇವೆ.ಆದ್ದರಿಂದ ಮುಂದಿನ ನಗರಸಭೆ ಸದಸ್ಯರ ಸಭೆಯಲ್ಲಿ ಈ ವಿಚಾರವನ್ನು ಚರ್ಚೆ ಮಾಡಿ ದಿವಂಗತ ಬಿ ವಿ ಗಿರೀಶ್ ರವರ ಹೆಸರನ್ನು ನಾಮಕರಣ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದರು.
ಭದ್ರಾವತಿಯ 32ನೇ ವಾರ್ಡ್ ಫಿಲ್ಟರ್ ಶೆಡ್ ಸೇರಿದಂತೆ ಹಲವು ಕಡೆ ಕಳೆದ ವರ್ಷ ಕರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬಡ ನಾಗರಿಕರಿಗೆ ನಗರಸಭೆ ವತಿಯಿಂದ ನೀಡಲಾದ ಆಹಾರ ಸಾಮಾಗ್ರಿಗಳು ದೊರಕಿರುವುದಿಲ್ಲ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ಬಾರಿ ನಗರಸಭ ಆಯುಕ್ತರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಕೂಡಲೇ ಸುಮಾರು 200 ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಇನ್ನೊಂದು ವಾರದಲ್ಲಿ ಆಹಾರ ಪಟ್ಟಣವನ್ನು ನೀಡಬೇಕೆಂದು ಈ ಸಂಧರ್ಭದಲ್ಲಿ ಒತ್ತಾಯಿಸಿದರು.
32 ನೇ ವಾರ್ಡಿನಲ್ಲಿ ಮೂಲಭೂತ ಸೌಲಭ್ಯದ ಕೊರತೆ :
ಈ ವಾರ್ಡಿನಲ್ಲಿ ಚರಂಡಿ ಸರಿಯಾಗಿ ನಿರ್ವಹಣೆ ಮಾಡದೆ ಚರಂಡಿಯಲ್ಲಿ ನೀರು ನಿಂತುಕೊಂಡು ಸೊಳ್ಳೆಗಳ ಕಾಟ ಜಾಸ್ತಿಯಾಗಿರುತ್ತದೆ ಇದೇ ವಿಚಾರವಾಗಿ ಕೂಡ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಹಾಗೂ ಫಿಲ್ಟರ್ ಶೆಡ್ ನಲ್ಲಿ ನಗರಸಭೆ ವತಿಯಿಂದ ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಅಳವಡಿಸಿದ್ದು ಆ ಪೈಪಿನ ಮೂಲಕ ಬರುವ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ಕಳೆದ 3 ತಿಂಗಳಿಂದ ಬರುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಮುಂದಿನ ವಾರದೊಳಗೆ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ನಗರಸಭೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಮ್ಮ ಪಕ್ಷ ಮತ್ತು ವಿವಿಧ ಸಂಘಟನೆಗಳ ಜೊತೆ ಸೇರಿ ಮಾಡುತ್ತೇವೆಂದು ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರಿಯಾಜ್ ಅಹಮದ್, ಪತ್ರಕರ್ತರಾದ ಎನ್ ನಾಗರಾಜ್ ಉಪಸ್ಥಿತರಿದ್ದರು.
ಪ್ರತಿಭಟನೆಯ ವೀಡಿಯೋ ಇಲ್ಲಿ ವೀಕ್ಷಿಸಿ👇