ಹೊಸನಗರ: ಪಟ್ಟಣದ ಖಡಕ್ ಪಿಎಸ್ ಐ ಎಂದೇ ಹೆಸರುವಾಸಿಯಾಗಿದ್ದ ರಾಜೇಂದ್ರನಾಯ್ಕ್ ರವರು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ರಾಜೇಂದ್ರನಾಯ್ಕ್ ರವರ ಸ್ಥಾನಕ್ಕೆ ದಾವಣಗೆರೆ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೀಲರಾಜ್ ಬಿ. ನರಲಾರ ರವರು ಹೊಸನಗರ ಪಿಎಸ್ ಐ ಆಗಿ ನೇಮಕವಾಗಿದ್ದಾರೆ.
ಹೊಸನಗರದ ಖಡಕ್ ಪಿಎಸ್ ಐ ವಿರುದ್ದ ಮರಳು ಮಾಫ಼ಿಯಾ ಹಾಗೂ ಗಣಿ ಮಾಫ಼ಿಯಾ ದವರು ಇತ್ತೀಚೆಗೆ ಅನೇಕ ಷಡ್ಯಂತ್ರಗಳನ್ನು ರೂಪಿಸಿ ಅವರ ತೇಜೋವಧೆಗೆ ಪ್ರಯತ್ನಿಸಿದಾಗ ಹೊಸನಗರ ಪಟ್ಟಣದ ನಾಗರೀಕರು ಒಕ್ಕೊರಲಿನಿಂದ ಪ್ರಾಮಾಣಿಕ ಹಾಗೂ ಖಡಕ್ ಪಿಎಸ್ ಐ ರಾಜೇಂದ್ರನಾಯ್ಕ್ ರವರ ಪರವಾಗಿ ನಿಂತು ಪ್ರತಿಭಟನೆಯನ್ನು ಸಹ ಮಾಡಿದ್ದರು.
ಮೂಲಗಳ ಪ್ರಕಾರ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ರಾಜೇಂದ್ರನಾಯ್ಕ್ ರವರೇ ವೈಯಕ್ತಿಕವಾಗಿ ವರ್ಗಾವಣೆ ಕೇಳಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಹೊಸನಗರದಂತಹ ಪಟ್ಟಣದಲ್ಲಿ ತನ್ನ ಖಡಕ್ ನಿಲುವಿನಿಂದ ಕಳ್ಳ ಕಾಕರಿಗೆ,ಮರಳು ಮಾಫ಼ಿಯಾ ದೊರೆಗಳಿಗೆ ಸಿಂಹ ಸ್ವಪ್ನವಾಗಿದ್ದ ರಾಜೇಂದ್ರನಾಯ್ಕ್ ನಾಯ್ಕ್ ವರ್ಗಾವಣೆ ಹೊಸನಗರ ನಾಗರೀಕರಿಗೆ ಬೇಸರ ತರಿಸಿದೆ.
ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಪಿಎಸ್ ಐ ಅಧಿಕಾರ ಸ್ವೀಕಾರ
ಸರ್ಕಲ್ ಇನ್ಸ್‌ಪೆಕ್ಟರ್‌ರಾಗಿ ಗಿರೀಶ್ ಬಿ.ಸಿ ಹಾಗೂ ಸಬ್‌ಇನ್ಸ್‌ಪೆಕ್ಟರ್‌ರಾಗಿ ನೀರರಾಜ್ ಬಿ. ನರಲಾರ ರವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಸರ್ಕಲ್ ಇನ್ಸ್‌ಪೆಕ್ಟರ್‌ರಾಗಿ ಸೇವೆ ಸಲ್ಲಿಸುತ್ತಿದ್ದ ಮಧುಸೂದನ್‌ರವರು ಬೆಂಗಳೂರಿಗೆ ಹಾಗೂ ಸಬ್‌ಇನ್ಸ್‌ಪೆಕ್ಟರ್‌ರಾಗಿ ಸೇವೆ ಸಲ್ಲಿಸುತ್ತಿದ್ದ ರಾಜೇಂದ್ರನಾಯ್ಕ್ ರವರು ಉಡುಪಿಯ ಬ್ರಹ್ಮಾವರಕ್ಕೆ ವರ್ಗಾವಣೆ ಆಗಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಸಾಗರದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ ಸಿ ಗಿರೀಶ್ ರವರು ಹಾಗೂ ದಾವಣಗೆರೆ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೀಲರಾಜ್ ಬಿ. ನರಲಾರರವರು ಹೊಸನಗರ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.