ರಸ್ತೆ ವ್ಯವಸ್ತೆ ಇಲ್ಲದೇ ಇರುವ ಕಾರಣ ಅನಾರೋಗ್ಯ ಪೀಡಿತ ಮಹಿಳೆಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮನಕಲಕುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ
ಶಿವಮೊಗ್ಗ ಜಿಲ್ಲೆಯ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಅಮಾನವೀಯ ದೃಶ್ಯ ಕಂಡು ಬಂದಿದ್ದು, ಪಾರ್ಶ್ವವಾಯು ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಮಗ ಪರದಾಡಿದ್ದಾನೆ.
ಜೋಗದ ಚರ್ಚ್ ಮೌಂಟ್ ಏರಿಯಾದ ಅಚ್ಚಮ್ಮ ಎಂಬವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಆದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲು ಅವರ ಮನೆಗೆ ರಸ್ತೆಯೇ ಇಲ್ಲದ ಕಾರಣ ತಾಯಿಯನ್ನು ಉಳಿಸಿಕೊಳ್ಳಲು ಮಗ ಆದಮ್ ಡೋಲಿ ಕಟ್ಟಿ ಕಾಲುದಾರಿಯಲ್ಲಿ ತಾಯಿಯನ್ನು ಹೊತ್ತುಕೊಂಡು ಬಂದಿದ್ದಾನೆ.
ಆದ್ದಮ್ ತಾಯಿಯನ್ನು ಸ್ನೇಹಿತರ ಸಹಾಯದಿಂದ ಸುಮಾರು ಒಂದು ಕಿಲೋಮೀಟರ್ ಹೊತ್ತುಕೊಂಡು ಬಂದಿದ್ದಾನೆ.
ಜೋಗ ಕಾರ್ಗಲ್ನ ಚರ್ಚ್ ಮೌಂಟ್ 10ನೇ ವಾರ್ಡಿನಲ್ಲಿ ಘಟನೆ ನಡೆದಿದ್ದು, ಮನೆ ಬಳಿಗೆ ದಾರಿ ಮಾಡಿಕೊಡಿ ಎಂದು ಸಾಲು-ಸಾಲು ಅರ್ಜಿ ನೀಡಿದ್ದರು.
ಇವರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದರೂ ಕುಗ್ರಾಮದಂತೆ ಬದುಕು ಸಾಗಿಸಬೇಕಾಗಿದೆ.