w
Headlines
Home » ಅಕ್ರಮ ಮರಳು ಸಾಗಾಟದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದ ಹೊಸನಗರ ಪೊಲೀಸರು :

ಅಕ್ರಮ ಮರಳು ಸಾಗಾಟದ ನಾಲ್ಕು ಟಿಪ್ಪರ್ ವಶಕ್ಕೆ ಪಡೆದ ಹೊಸನಗರ ಪೊಲೀಸರು :

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿದ್ದಾರೆ.

ನೆನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್ ಬಿ ಸಿ ಹಾಗೂ ಪಿಎಸ್ ಐ ನಿಂಗರಾಜ್ ಬಿ‌ ನರಲಾರ ರವರು ಭರ್ಜರಿ ಕಾರ್ಯಚರಣೆ ಮಾಡುವ ಮೂಲಕ ತಾಲೂಕಿನ ಮರಳು ಮಾಫ಼ಿಯಾ ದೊರೆಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಅಕ್ರಮ ಮರಳು ಸಾಗಾಣಿಕೆಯ ಖಚಿತ ಮಾಹಿತಿ ಆಧಾರದ ಮೇರೆಗೆ 4 ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ.ಕಾರ್ಯಾಚರಣೆ ವೇಳೆ ನಾಲ್ಕು ವಾಹನಗಳ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಹೊಸನಗರದ  ಮಳಲಿ ಮತ್ತು ಜಯನಗರದಲ್ಲಿ ನಾಲ್ಕು ಟಿಪ್ಪರ್ ಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ಪೊಲೀಸರಿಗೆ ಯಾವ ಸೂಕ್ತ  ದಾಖಲಾತಿಗಳು ಲಭ್ಯವಾಗದ ಹಿನ್ನಲೆಯಲ್ಲಿ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. 

ನಾಲ್ಕು ಟಿಪ್ಪರ್ ವಾಹನಗಳನ್ನ ಸೀಜ್ ಮಾಡಲಾಗಿದೆ.

ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.