ಹೊಸನಗರ: ಮನೆಯಲ್ಲಿದ್ದ ವೃದ್ಧೆ ಮನೆಪಕ್ಕದ ತೋಟಕ್ಕೆ ಹೋಗಿ ನಾಪತ್ತೆಯಾಗಿರುವ ಘಟನೆ ಸುಖಾಂತ್ಯವಾಗಿದೆ.
ಕರಿಮನೆ ಗ್ರಾಪಂ ವ್ಯಾಪ್ತಿಯ ಸಾದಗಲ್ ಗ್ರಾಮದ ಚನ್ನಪ್ಪಗೌಡ ಎಂಬುವವರ ಪತ್ನಿ 85 ವರ್ಷದ ಶಾರದಮ್ಮ ಮೂರು ದಿನದಿಂದ ನಾಪತ್ತೆಯಾಗಿದ್ದರು.
ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸಾದಗಲ್ ವೃದ್ಧೆಯ ಶೋಧ ಕಾರ್ಯ ನಗರ ಠಾಣೆ ಪಿಎಸ್ಐ ರಮೇಶ್ ನೇತೃತ್ಬದಲ್ಲಿ ಶ್ವಾನದಳ ಶೋಧಕಾರ್ಯ ನಡೆಸಲಾಗಿತ್ತು.
ಮತ್ತೊಂದಡೆ ಅರಣ್ಯ ಇಲಾಖೆ ತಂಡ ಕೂಡ ಶೋಧ ಕಾರ್ಯ ನಡೆಸುತ್ತಿದೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಸಾಥ್ ನೀಡಿದ್ದರು, ಕಾರ್ಯಾಚರಣೆ ನಡೆಸಿದ್ದರು ಶಾರದಮ್ಮ ಸುಳಿವು ಸಿಕ್ಕಿರಲಿಲ್ಲ.
ಇದೀಗ ಬಂದ ಮಾಹಿತಿಯಂತೆ ಶಾರದಮ್ಮ ತಮ್ಮ ಮನೆಯಿಂದ 6 ಕಿಮೀ ದೂರದ ದಟ್ಟ ಕಾಡಿನಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.ಸದ್ಯ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶಾರದಮ್ಮ ಸಿಗುತಿದ್ದಂತೆ ನನಗೇನು ಆಗಿಲ್ಲ , ಯಾರು ಗಾಬರಿಯಾಗಬೇಡಿ ಕಾಲಿಗೆ ಇಂಬಳ ಹುಳ ಕಚ್ಚಿದೆಯಷ್ಟೇ ಎಂದು ಹೇಳಿದ್ದಾರೆ ,ಇದನ್ನು ಕೇಳಿಸಿಕೊಂಡ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ ಏಕೆಂದರೆ ಕಳೆದ ಮೂರು ದಿನಗಳಿಂದ ಅನ್ನಾಹರವಿಲ್ಲದೇ ಇದ್ದರು.
ಒಟ್ಟಾರೆಯಾಗಿ ಸಾವಿರಾರು ಜನರ ಪ್ರಾರ್ಥನೆಯಿಂದ ಶಾರದಮ್ಮ ಜೀವಂತವಾಗಿ ಪತ್ತೆಯಾಗಿದ್ದಾರೆ.
ಶ್ವಾನ ದಳದ ARSI ಚಂದ್ರಪ್ಪ, HC ಪ್ರಸನ್ನ, ಪೊಲೀಸ್ ಸಿಬ್ಬಂದಿಗಳಾದ HC ವೆಂಕಟೇಶ್, HC ಪ್ರವೀಣ್, HC ಮಂಜುನಾಥ್, ಶಾಂತಪ್ಪ, ವಿನಯಕುಮಾರ್, ಮಂಜುನಾಥ್, ಸುಜಯಕುಮಾರ್, ಅರಣ್ಯ ಇಲಾಖೆಯ ARFO ಗಳಾದ ಸತೀಶ್, ಅಮೃತ್ ಸುಂಕದ್, ಪ್ರವೀಣಕುಮಾರ್, ನರೇಂದ್ರಕುಮಾರ್, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ಮೂರು ಇಲಾಖೆಯಿಂದ ನಡೆಯುತ್ತಿರುವ ಜಂಟಿಕಾರ್ಯಾಚರಣೆಯಲ್ಲಿ 30 ಕ್ಕು ಹೆಚ್ಚು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.