POSTMAN NEWS ವರದಿಯ ಫಲಶ್ರುತಿ | ದೂನ ಸರ್ಕಾರಿ ಶಾಲೆಗೆ ಸಿಕ್ತು ಕಸದಿಂದ ಮುಕ್ತಿ – ಮುಚ್ಚಿದ ಶಾಲೆ ಪುನರಾರಂಭಕ್ಕೆ ಮುಂದಾದ ಯುವಕರು
ರಿಪ್ಪನ್‌ಪೇಟೆ ಸಮೀಪದ ದೂನ ಗ್ರಾಮದ ಸರ್ಕಾರಿ ಶಾಲೆಗೆ ಅಂತೂ ಇಂತೂ ಕಸದಿಂದ ಮುಕ್ತಿ ಸಿಕ್ಕಿದೆ.ವರದಿಗೆ ಎಚ್ಚೆತ್ತ ಅರಸಾಳು ಗ್ರಾಮಾಡಳಿತ ಕಸವನ್ನು ಶಾಲೆಯಿಂದ ತೆರವುಗೊಳಿಸಿದೆ.
ಶಿವಮೊಗ್ಗ ಜಿಲ್ಲೆಯ ಈ ಒಂದು ಕುಗ್ರಾಮದಲ್ಲಿ ಸುಂದರವಾದ ಶಾಲೆ ಇತ್ತು ತುಂಬಾ ಚೆನ್ನಾಗಿ ಆಟ ಪಾಠ ಎಲ್ಲಾ ನಡೆಯುತಿತ್ತು.ಯಾವಾಗ ಆ ಶಾಲೆಯ ಮೇಲೆ ಖಾಸಗಿ ಶಾಲೆಗಳ ಕಣ್ಣು ಬಿತ್ತು ಅಂದಿನಿಂದಲೇ ಆ ಶಾಲೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಾ ಬಂದಿತ್ತು ಕೊನೆಗೆ ಮಕ್ಕಳ ಕೊರತೆಯಿಂದ ಶಾಲೆಗೆ ಬೀಗವು ಬಿತ್ತು… ಅದನ್ನೆ ನೆಪವಾಗಿಸಿಕೊಂಡ ಗ್ರಾಮಾಡಳಿತ ಆ ಶಾಲೆಯನ್ನು ಕಸ ವಿಲೇವಾರಿ ಘಟಕವನ್ನಾಗಿಸುವತ್ತ ತೆರಳಿ ಶಾಲೆಗೆ ಕೊನೆಯ ಮೊಳೆ ಹೊಡೆಯಲು ಹೊರಟಿತ್ತು.
ಯಾವಾಗ ಸರ್ಕಾರಿ ಶಾಲೆಯನ್ನು ಕಸ ವಿಲೇವಾರಿ ಘಟಕ ಮಾಡಲು ಹೊರಟಿರುವ ವಿಚಾರ ತಿಳಿಯುತಿದ್ದಂತೆ ಪೋಸ್ಟ್ ಮ್ಯಾನ್ ಸುದ್ದಿವಾಹಿನಿ ಈ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿತ್ತು.ಕೂಡಲೇ ಎಚ್ಚೆತ್ತುಕೊಂಡ ಗ್ರಾಮಾಡಳಿತ ಹಾಗೂ ಸಂಬಂದಿಸಿದ ಅಧಿಕಾರಿಗಳು ಕಸವನ್ನು ತೆರವುಗೊಳಿಸಿದ್ದಾರೆ.
ಸಂತಸದ ವಿಷಯವೇನೆಂದರೆ ಮುಚ್ಚಿರುವ ಈ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ದೂನ ಗ್ರಾಮದ ಪೋಷಕರ ಮನವೊಲಿಸಿ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿ ಶಾಲೆಯನ್ನು ಪುನರಾರಂಭಿಸಲು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು, ಯುವಕರು, ಶಿಕ್ಷಣಾಸಕ್ತರು ಮುಂದಾಗಿದ್ದಾರೆ.
ಶಾಲೆಯಲ್ಲಿದ್ದ ಕಸ ತೆರವುಗೊಳಿಸಿರುವ ಬಗ್ಗೆ ಪೋಸ್ಟ್ ಮ್ಯಾನ್ ಸುದ್ದಿವಾಹಿನಿ ವರದಿಗೆ ತೆರಳಿರುವ ವಿಚಾರ ತಿಳಿಯುತಿದ್ದಂತೆ ಶಾಲೆಯ ಆವರಣಕ್ಕೆ ಸ್ವಯಂಪ್ರೇರಿತವಾಗಿ ಆಗಮಿಸಿದ ಶಾಲೆಗೆ ಜಾಗವನ್ನು ದೇಣಿಗೆ ನೀಡಿದ ದಿ|| ಟೀಕಪ್ಪ ಗೌಡರವರ ಪುತ್ರ ಮೋಹನ್ ಗೌಡ ಹಾಗೂ ದೂನ ಗ್ರಾಮದ ಯುವಕರು ಹಾಗೂ ಹಳೆಯ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಮ್ಮ ಶಾಲೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲಾ ಮುಂದಿನ ದಿನಗಳಲ್ಲಿ “ದೂನ ಸರ್ಕಾರಿ ಶಾಲೆ ಉಳಿಸೋಣ” ಎಂಬ ಅಭಿಯಾನದ ಮೂಲಕ 2024-25 ರಲ್ಲಿ ಮತ್ತೆ ಈ ಶಾಲೆಯನ್ನು ತೆರೆಯುತ್ತೇವೆ ಎಂದು ಹೇಳುವಾಗ ಆ ಯುವಕರಲ್ಲಿನ ಕನ್ನಡಭಿಮಾನ ಎದ್ದು ಕಾಣತಿತ್ತು….
ಒಟ್ಟಾರೆಯಾಗಿ ಪೋಸ್ಟ್ ಮ್ಯಾನ್ ಸುದ್ದಿವಾಹಿನಿಯು ಈಗಾಗಲೇ ಕನ್ನಡ ಶಾಲೆ ಉಳಿವಿಗಾಗಿ ಹೊಸನಗರ ತಾಲೂಕಿನಾದ್ಯಂತ ವಿನೂತನವಾಗಿ ಸುಣ್ಣ ಬಣ್ಣ ಅಭಿಯಾನ ನಡೆಸುತ್ತಿರುವುದು ಎಲ್ಲಾರಿಗೂ ತಿಳಿದಿರುವ ಸಂಗತಿ… ಫಲಶ್ರುತಿಗೆ ಬೀಗದೇ ಇನ್ನೂ ಮುಂದೆಯಯೂ ಕನ್ನಡ ಶಾಲೆಯ ಉಳಿವಿಗೆ ಕೈ ಮೀರಿ ಶ್ರಮಿಸುವ ಭರವಸೆ ಪೋಸ್ಟ್ ಮ್ಯಾನ್ ಸುದ್ದಿವಾಹಿನಿಯ ಪರವಾಗಿ ಎಲ್ಲಾ ಓದುಗರಿಗೆ ಭರವಸೆ ನೀಡುತ್ತೇವೆ.